LATEST NEWS
ಕೆತ್ತಿಕಲ್ ಗುಡ್ಡ ಪ್ರದೇಶಕ್ಕೆ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾದ ತಜ್ಞರ ತಂಡ ಭೇಟಿ

ಮಂಗಳೂರು ಅಗಸ್ಟ್ 07: ಶಿರೂರು , ವಯನಾಡ್ ದುರಂತದ ಬಳಿಕ ರಾಜ್ಯ ಸರಾಕರ ಎಚ್ಚೆತ್ತುಕೊಂಡಿದ್ದು, ಭೂಕುಸಿತ ಉಂಟಾಗುವ ಪ್ರದೇಶಗಳ ಬಗ್ಗೆ ಭಾರೀ ಕಟ್ಟೆಚ್ಚರ ವಹಿಸಿದೆ. ಇದೀಗ ಭೂಕುಸಿತದ ಅಂಚಿನಲ್ಲಿರುವ ಮಂಗಳೂರು ಹೊರವಲಯದ ಕೆತ್ತಿಕ್ಕಲ್ ಪ್ರದೇಶಕ್ಕೆ ಭೂವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ರಾಷ್ಟ್ರೀಯ ಹೆದ್ದಾರಿ 169 ಪಕ್ಕದಲ್ಲಿ ಇರುವ ಕೆತ್ತಿಕ್ಕಲ್ ಗುಡ್ಡದಲ್ಲಿ ಭೂಕುಸಿತವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಹಿನ್ನಲೆ ಜಿಲ್ಲಾಡಳಿತ ಇದರ ಬಗ್ಗೆ ವರದಿ ನೀಡಲು ತಜ್ಞರ ತಂಡಕ್ಕೆ ಮನವಿ ಮಾಡಿತ್ತು. ಶಿರೂರು ದುರಂತದ ಬಗ್ಗೆ ವರದಿಯ ತಯಾರಿಸುವಲ್ಲಿ ನಿರತರಾಗಿದ್ದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾದ ತಜ್ಞರ ತಂಡ ಕೆತ್ತಿಕಲ್ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿರುವ ಕೆತ್ತಿಕ್ಕಲ್ ಪ್ರದೇಶದ ಮಣ್ಣಿನ ಮಾದರಿ ಸಂಗ್ರಹಿಸಿ ಪರಿಶೀಲನೆ ನಡೆಸಲಿದ್ದಾರೆ.

ಸದ್ಯ ಕೆತ್ತಿಕಲ್ ಗುಡ್ಡದ ಮೇಲ್ಭಾಗದಲ್ಲಿ ಹದಿನೈದು ಮನೆಗಳನ್ನು ನಿವಾಸಿಗಳ ಸ್ಥಳಾಂತರಕ್ಕೆ ಸೂಚಿಸಲಾಗಿದೆ.