LATEST NEWS
100 ಗ್ರಾಂ ತೂಕ ಜಾಸ್ತಿ ಆದ ಕಾರಣ ಒಲಿಂಪಿಕ್ಸ್‌ನಿಂದ ಅನರ್ಹಗೊಂಡ ವಿನೇಶ್ ಪೋಗಟ್
ಪ್ಯಾರಿಸ್ ಅಗಸ್ಟ್ 07: ಒಲಿಂಪಿಕ್ಸ್ ನಲ್ಲಿ ಒಂದು ಪದಕದ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ಇಂದು ನಿರಾಶೆಯಾಗಿದ್ದು, ಒಲಿಂಪಿಕ್ಸ್ 50 ಕೆಜಿ ವಿಭಾಗದ ಕುಸ್ತಿ ಪಂದ್ಯದಲ್ಲಿ ಫೈನಲ್ ಪ್ರವೇಶಿಸಿರುವ ಭಾರತದ ವಿನೇಶ್ ಫೋಗಟ್ ಕೇವಲ 100 ಗ್ರಾಂ ತೂಕ ಹೆಚ್ಚಾದ ಕಾರಣ ಒಲಂಪಿಕ್ಸ್ ನಿಂದ ಅನರ್ಹಗೊಂಡಿದ್ದಾರೆ.
ಫೈನಲ್ ಇಂದು ನಡೆಯಲಿರುವುದರಿಂದ ಬೆಳಿಗ್ಗೆ ಆಕೆಯ ದೇಹ ತೂಕ ಪರೀಕ್ಷಿಸುವ ಸಂದರ್ಭ ಆಕೆ 50 ಕೆಜಿಗಿಂತ 100 ಗ್ರಾಂ ತೂಕ ಹೆಚ್ಚಿದ್ದಾರೆಂಬುದು ತಿಳಿದು ಬಂದಿದ್ದು, ಅವರು ಒಲಿಂಪಿಕ್ಸ್‌ನಿಂದ ಅನರ್ಹಗೊಂಡಿದ್ದಾರೆ. ಒಲಿಂಪಿಕ್ಸ್ ನಿಯಮದ ಪ್ರಕಾರ ಫೋಗಟ್ ಬೆಳ್ಳಿ ಪದಕಕ್ಕೂ ಅರ್ಹರಾಗುವುದಿಲ್ಲ ಹಾಗೂ 50 ಕೆಜಿ ವಿಭಾಗದಲ್ಲಿ ಕೇವಲ ಚಿನ್ನ ಮತ್ತು ಕಂಚಿನ ಪದಕ ವಿಜೇತರಿರಲಿದ್ದಾರೆ.
ಮಂಗಳವಾರ ಆಕೆಯ ದೇಹತೂಕ ಪರೀಕ್ಷಿಸಿದಾಗ 50 ಕೆಜಿ ಇತ್ತೆನ್ನಲಾಗಿದ್ದು ಆದರೆ ಇಂದು ಆಕೆ 100 ಗ್ರಾಂ ಹೆಚ್ಚು ತೂಗುತ್ತಿದ್ದಾರೆನ್ನಲಾಗಿದೆ. ತೂಕ ಹೆಚ್ಚಿದ್ದ ಕಾರಣ ಆಕೆ ಇಡೀ ರಾತ್ರಿ ನಿದ್ರಿಸದೆ ಜಾಗಿಂಗ್, ಸ್ಕಿಪ್ಪಿಂಗ್, ಸೈಕ್ಲಿಂಗ್ ಮಾಡಿ ತಮ್ಮಿಂದಾದಷ್ಟು ಪ್ರಯತ್ನ ಮಾಡಿದ್ದರೂ ಅದು ಸಾಕಾಗಿಲ್ಲ. ಭಾರತದ ತಂಡ ಆಕೆಗೆ 100 ಗ್ರಾಂ ತೂಕ ಇಳಿಸಿಕೊಳ್ಳಲು ಸ್ವಲ್ಪ ಸಮಯಾವಕಾಶ ಕೇಳಿದ್ದರೂ ಅಧಿಕಾರಿಗಳು ಕೇಳಿಲ್ಲ ಎನ್ನಲಾಗಿದೆ.
You must be logged in to post a comment Login