Connect with us

LATEST NEWS

ಯುಟ್ಯೂಬ್ ನೋಡಿ ಕೇವಲ 3 ಸಾವಿರ ರೂಪಾಯಿಗೆ ಬಾಂಬ್ ತಯಾರಿಸಿದ್ದ ಡೊಮಿನಿಕ್ ಮಾರ್ಟಿನ್

ಕೇರಳ ಅಕ್ಟೋಬರ್ 31: ಕೊಚ್ಚಿಯಲ್ಲಿ ಕ್ರೈಸ್ತ ಸಮುದಾಯ ನಡೆಸುತ್ತಿದ್ದ ಸಾಮೂಹಿಕ ಪ್ರಾರ್ಥನೆ ವೇಳೆ ಬಾಂಬ್ ಸ್ಪೋಟಿಸಿ ಮೂರು ಜನರ ಸಾವಿಗೆ ಕಾರಣನಾಗಿದ್ದ ಆರೋಪಿ ಡೊಮಿನಿಕ್ ಮಾರ್ಟಿನ್. .ಯುಟ್ಯೂಬ್ ನೋಡಿ ಬಾಂಬ್ ತಯಾರಿಸಿದ್ದ ಎಂಬ ವಿಚಾರ ಇದೀಗ ತನಿಖೆಗೆ ವೇಳೆ ತಿಳಿದು ಬಂದಿದೆ.


ಡೊಮಿನಿಕ್ ಮಾರ್ಟಿನ್ ಕುಟುಂಬ ಐದು ವರ್ಷಗಳಇಂದ ಕೊಚ್ಚಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದು, ಮೊದಲು ಡೊಮಿನಿಕ್ ಮಾರ್ಟಿನ್ ಗಲ್ಫ್‌ನಲ್ಲಿ ಫೋರ್‌ಮ್ಯಾನ್ ಆಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ, ಅಲ್ಲಿಯೇ ಎಲೆಕ್ಟ್ರಾನಿಕ್ ಸಾಧನಗಳನ್ನು ಜೋಡಿಸುವ ತಂತ್ರವನ್ನು ಪತ್ತೆ ಮಾಡಿದ್ದ ಎಂದು ಹೇಳಲಾಗಿದೆ. ಇನ್ನು ಮಾರ್ಟಿನ್ ಎರಡು ವರ್ಷಗಳ ಹಿಂದೆ ಗಲ್ಫ್‌ನಿಂದ ಕೇರಳಕ್ಕೆ ಬಂದಿದ್ದಾನೆ. ಈ ಸ್ಫೋಟದ ಬಗ್ಗೆ ಅಂದಿನಿಂದಲೇ ಎಲ್ಲ ತಯಾರಿಗಳನ್ನು ಮಾಡಿಕೊಂಡಿದ್ದ ಎಂದು ಹೇಳಲಾಗಿದೆ. ಈ ಬಾಂಬ್​​​​ ತಯಾರಿಸಲು ಮೂರು ಸಾವಿರ ರೂ. ಖರ್ಚು ಮಾಡಿದ್ದಾನೆ ಎಂದು ಹೇಳಲಾಗಿದೆ. ಯುಟ್ಯೂಬ್​​​ ನೋಡಿಕೊಂಡು ಈ ಬಾಂಬ್​​​​ ತಯಾರಿಸಿದ್ದಾನೆ.


ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ವರದಿಗಳ ಪ್ರಕಾರ ಈ ಬಾಂಬ್​​ಗೆ ಪಟಾಕಿಗಳಲ್ಲಿ ಬಳಸುವ ಕಡಿಮೆ ದರ್ಜೆಯ ಸ್ಫೋಟಕಗಳನ್ನು ಬಳಸಲಾಗಿದೆ ಎಂದು ಹೇಳಿದ್ದಾರೆ. ಇದರ ಜೋಡನೆಯ ಕೆಲಸವನ್ನು ಮಾರ್ಟಿನ್​​​ ಮನೆಯಲ್ಲಿಯೆ ಮಾಡುತ್ತಿದ್ದ ಎಂದು ಹೇಳಲಾಗಿದೆ. ಈ ಬಾಂಬ್​​ನ್ನು ಕ್ರೈಸ್ತ ಸಮಾವೇಶದಲ್ಲೇ ಸ್ಫೋಟಿಸುವುದು ಇತನ ಪ್ರಮುಖ ಉದ್ದೇಶವಾಗಿತ್ತು. ಭಾನುವಾರ ಕೊಚ್ಚಿ ಬಳಿಯ ಕಲಮಸ್ಸೆರಿಯ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಸರಣಿ ಸ್ಫೋಟದಲ್ಲಿ ಇಬ್ಬರು ಮಹಿಳೆಯರು ಮತ್ತು 12 ವರ್ಷದ ಬಾಲಕಿ ಸಾವನ್ನಪ್ಪಿದ್ದು, 50 ಜನರು ಗಾಯಗೊಂಡಿದ್ದಾರೆ. ಯೆಹೋವನ ಸಾಕ್ಷಿಗಳ ಅಧಿವೇಶನದಲ್ಲಿ ಸುಮಾರು 2,000 ಜನರು ಹಾಜರಿದ್ದರು ಎಂದು ವರದಿ ಹೇಳಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *