Connect with us

LATEST NEWS

ಕೇರಳ – ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ನದಿಯಲ್ಲಿ ಮುಳುಗಿ ವರ ಸಾವು…ವಧು ಗಂಭೀರ

ತಿರುವನಂತಪುರಂ: ನದಿ ತಟದಲ್ಲಿ ಪೋಸ್ಟ್ ವೆಡ್ಡಿಂಗ್ ಪೋಟೋಶೂಟ್ ಮಾಡುವ ವೇಳೆ ನಡೆದ ಅವಘಡದಲ್ಲಿ ಮದುಮಗ ಜಾರಿ ಬಿದ್ದು ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ ನಡೆದಿದೆ.


ನವ ವಧು, ವರ ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ಮಾಡಿಸುತ್ತಿದ್ದರು. ಬಂಡೆ ಮೇಲೆ ನಿಂತು ಪೋಸ್ ಕೊಡುವ ವೇಳೆ ವರ ಜಾರಿ ನದಿಗೆ ಬಿದ್ದಿದ್ದಾನೆ. ಈ ವೇಳೆ ವಧು ಕೂಡ ಕಾಲು ಜಾರಿ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾಳೆ. ವಧುವನ್ನು ರಕ್ಷಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ವರ ಕೊನೆಯುಸಿರೆಳೆದ್ದಾನೆ. ಮಾರ್ಚ್ 14 ರಂದು ದಂಪತಿಗಳು ವಿವಾಹವಾಗಿದ್ದರು. ಮೃತ ವರನನ್ನು ಪೆರಂಬ್ರಾ ಸಮೀಪದ ಕಡಿಯಂಗಡ್ ನಿವಾಸಿ, ರೆಜಿಲ್ ಎಂದು ಗುರುತಿಸಲಾಗಿದೆ.

 

ಪೆರುವಣ್ಣಮುಳಿ ಪೊಲೀಸರ ಪ್ರಕಾರ, ಕುಟ್ಟಿಯಾಡಿ ನದಿ ನೀರಿನ ಅಡಿಯಲ್ಲಿ ಆಳವಾದ ಹೊಂಡವಿದೆ. ಈಜು ಬಾರದಿದ್ದ ರೆಜಿಲ್ ಗುಂಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Advertisement
Click to comment

You must be logged in to post a comment Login

Leave a Reply