LATEST NEWS
ಕೇರಳ – ಪೊಲೀಸ್ ಅಧಿಕಾರಿ ಮಾತು ಕೇಳಿ ರಸ್ತೆ ದಾಟಿದ ಆನೆ – ವಿಡಿಯೋ ವೈರಲ್
ಕೇರಳ ಡಿಸೆಂಬರ್ 31: ರಸ್ತೆ ಬದಿ ನಿಂತಿದ್ದ ಆನೆಗೆ ಪೊಲೀಸ್ ಅಧಿಕಾರಿಯೊಬ್ಬರು ಜೋರು ಮಾಡಿ ರಸ್ತೆ ದಾಟಲು ಹೇಳಿದ್ದು, ಪೊಲೀಸ್ ಅಧಿಕಾರಿಯ ಮಾತು ಕೇಳಿ ಆನೆ ರಸ್ತೆ ದಾಟಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆ ನಡೆದಿದ್ದು ಕೇರಳದ ಅತಿರಪ್ಪಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ. ಎಝಾತುಮುಖಂ ಗಣಪತಿ ಎಂದು ಕರೆಯಲ್ಪಡುವ ಆನೆ ಸಾಮಾನ್ಯವಾಗಿ ಅತಿರಪಳ್ಳಿ ಪ್ರದೇಶಕ್ಕೆ ಆಗಾಗ್ಗೆ ಬೇಟಿ ನೀಡುತ್ತಾನೆ. ಈ ವೇಳೆ ಆ ಪರಿಸರದಲ್ಲಿ ಸಿಗುವ ಹಣ್ಣು ತಿಂಡಿಗಳನ್ನು ತಿಂದು ಮತ್ತೆ ಕಾಡಿಗೆ ತೆರಳುತ್ತದೆ. ಸಾಮಾನ್ಯವಾಗಿ ಪೊಲೀಸರು ಆನೆಗಳನ್ನು ಓಡಿಸುತ್ತಾ ಇರುತ್ತಾರೆ. ಅದೇ ರೀತಿ ಡಿಸೆಂಬರ್ 25 ರಂದು ಮತ್ತೆ ಆನೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂದಿದೆ. ರಸ್ತೆ ಬದಿಯಲ್ಲಿ ಆನೆ ನಿಂತ ಕಾರಣ ಸಂಚಾರಕ್ಕೆ ತೊಂದರೆಯಾಗಿತ್ತು, ಈ ಹಿನ್ನಲೆ ಪೊಲೀಸ್ ಅಧಿಕಾರಿ ಮಹಮ್ಮದ್ ಅವರು ಹೊರಗಡೆ ಬಂದು ಆನೆಗೆ ರಸ್ತೆ ದಾಟಲು ಹೇಳುತ್ತಾರೆ. ಸ್ವಲ್ಪ ಜೋರಾಗಿ ಹೇಳಿದ ವೇಳೆ ಆನೆ ಸೀದಾ ರಸ್ತೆ ದಾಟಿದೆ. ಈ ವಿಡಿಯೋವನ್ನು ಕೇರಳ ಪೊಲೀಸರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
#kerala #elephant
ಆನೆಗೆ ರಸ್ತೆ ದಾಟಲು ಹೇಳಿದ ಕೇರಳ ಪೊಲೀಸ್ ಅಧಿಕಾರಿ pic.twitter.com/ZA0zwUr4fd— themangaloremirror (@themangaloremir) December 31, 2024
1 Comment