KARNATAKA
ಕೇರಳದಲ್ಲಿ ಕುಖ್ಯಾತ ದರೋಡೆಕೋರ ‘ಕುರುವ ಗ್ಯಾಂಗ್’ ಸಕ್ರೀಯ, ಶಬರಿಮಲೆ ಯಾತ್ರಿಗಳನ್ನು ಎಚ್ಚರಿಸಿದ ಪೊಲೀಸ್ ಇಲಾಖೆ…!
ಶಬರಿಮಲೆ : ವಾರ್ಷಿಕ ಶಬರಿಮಲೆ ಮಂಡಲ ಪೂಜಾ ಋತು ಆರಂಭವಾಗಿದ್ದು ಈ ಹಿನ್ನಲೆಯಲ್ಲಿ ಕುಖ್ಯಾತ ದರೋಡೆ ಕೋರ ‘ ಕುರುವ ಗ್ಯಾಂಗ್’ ಸಕ್ರಿಯವಾಗಿದ್ದು ಈ ಬಗ್ಗೆ ಎಚ್ಚರದಿಂದಿರಲು ಶಬರಿಮಲೆ ಯಾತ್ರಿಕರು ಮತ್ತು ಸ್ಥಳಿಯರಿಗೆ ಪೊಲೀಸ್ ಇಲಾಖೆ ಸೂಚಿಸಿದೆ.
ಆಲಪ್ಪುಳದಲ್ಲಿ ಪ್ರದೇಶದಲ್ಲಿ ಶಂಕಿತ ಕುರುವ ಗ್ಯಾಂಗ್ ಇರುವುದನ್ನು ಕೇರಳ ಪೊಲೀಸರು ಖಚಿತಪಡಿಸಿದ್ದಾರೆ. ತಮಿಳುನಾಡಿನಿಂದ ಬಂದಿರುವ ಈ ಕುಖ್ಯಾತ ಗ್ಯಾಂಗ್ ಗಳು ಐತಿಹಾಸಿಕವಾಗಿ ತೀರ್ಥಯಾತ್ರೆಯ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಅಲಪ್ಪುಳದ ಉಪ ಪೊಲೀಸ್ ವರಿಷ್ಠಾಧಿಕಾರಿ ಮಧು ಬಾಬು ಎಂಆರ್ ಹೇಳಿದ್ದಾರೆ. ಸಾಮಾನ್ಯವಾಗಿ ದರೋಡೆ ಮಾಡುವ ಸ್ಥಳಗಳನ್ನು ಹಗಲಿಗೆ ವೀಕ್ಷಣೆ ಮಾಡುತ್ತಾರೆ, ಕನಿಷ್ಟ ಭದ್ರತೆ, ಕಡಿಮೆ ಕುಟುಂಬ ಸದಸ್ಯರು ಮತ್ತು ಕ್ಯಾಶುಯಲ್ ಬೀಗಗಳನ್ನು ಹೊಂದಿರುವ ಮನೆಗಳನ್ನು ಆಯ್ಕೆ ಮಾಡಿ ಬಳಿಕ ರಾತ್ರಿ ವೇಳೆ ದರೋಡೆ ಕೃತ್ಯಕ್ಕಿಳಿಯುತ್ತಾರೆ. ಈ ದರೋಡೆ ಗ್ಯಾಂಗ್ ಗುಂಪುಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಅಂಬಲಪ್ಪುಳ ಮತ್ತು ಕಾಯಂಕುಲಂನಂತಹ ರೈಲ್ವೆ ನಿಲ್ದಾಣಗಳ ಬಳಿ ಉಳಿದುಕೊಳ್ಳುತ್ತದೆ ಮತ್ತು ನಂತರ ದರೋಡೆಗಳನ್ನು ನಡೆಸಲು ಸಣ್ಣ ತಂಡಗಳಾಗಿ ವಿಭಜಿಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದರೋಡೆಗಿಳಿಯುವ ಮೊದಲು ಮದ್ಯ ಸೇವನೆ ಮಾಡುತ್ತಾರೆ, ಮುಖಕ್ಕೆ ಬಟ್ಟೆ ಅಥವಾ ಮಾಸ್ಕ್ ಮತ್ತು ಅರ್ಧ ಚಡ್ಡಿ ಧರಿಸಿ ತಂಡಗಳಾಗಿ ಕೃತ್ಯ ನಡೆಸಲು ತರಳುತ್ತಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹಿಂದಿನ ಶಬರಿಮಲೆ ಋತುಗಳಲ್ಲಿ ಕುರುವ ಗ್ಯಾಂಗಿನ ಪ್ರಕರಣಗಳು ವರದಿಯಾಗಿದ್ದುವು. ವಾರ್ಷಿಕ ಶಬರಿಮಲೆ ಮಂಡಲ ಪೂಜಾ ಋತುವಿನಲ್ಲಿ ವಾಹನಗಳು ಮತ್ತು ಪ್ರಯಾಣಿಕರು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ರಾತ್ರಿ ಗಸ್ತು ಸಮಯದಲ್ಲಿ ಸಂಪೂರ್ಣ ತಪಾಸಣೆ ನಡೆಸಲು ಕಷ್ಟವಾಗುತ್ತದೆ. ಆದ್ದರಿಂದ ಸಾರ್ವಜನಿಕರು ಮತ್ತು ಯಾತ್ರಿಕರು ಜಾಗರೂಕರಾಗಿರಲು ಸೂಚಿಸಿದ್ದಾರೆ.
ಈ ಮಧ್ಯೆ ಕುರುವ ತಂಡದ ಸದಸ್ಯರೊಬ್ಬರು ಶನಿವಾರ ಎರ್ನಾಕುಲಂನ ಕುಂದನ್ನೂರಿನಲ್ಲಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ. ಆರೋಪಿಯನ್ನು ತಮಿಳುನಾಡು ಮೂಲದ ಸಂತೋಷ್ ಎಂದು ಗುರುತಿಸಲಾಗಿದ್ದು, ಆತನನ್ನು ಆಲಪ್ಪುಳದಿಂದ ಬಂಧಿಸಿ ಕರೆದುಕೊಂಡು ಹೋಗುವಾಗ ಎರ್ನಾಕುಲಂ ಸಮೀಪ ಪೊಲೀಸ್ ಕಸ್ಟಡಿಯಿಂದ ತಪ್ಪಿಕೊಂಡಿದ್ದಾನೆ. ಪ್ರಾಥಮಿಕ ಸುಳಿವುಗಳ ಆಧಾರದ ಮೇಲೆ ಪೊಲೀಸರು ಪ್ರಸ್ತುತ ಶಂಕಿತನ ರೇಖಾಚಿತ್ರದೊಂದಿಗೆ ಕಾರ್ಯಾಚರಣೆ ಆರಂಭಿಸಿ ಬಳಿಕ ಮರು ಬಂಧಿಸಿಸಲು ಯಶಸ್ವಿಯಾಗಿದ್ದಾರೆ.