LATEST NEWS
ಉಡುಪಿ : ನೀರಿನ ಡ್ರಮ್ ಒಳಗೆ ಬಸ್ ಡ್ರೈವರ್ ಮೃತ ದೇಹ ಪತ್ತೆ, ಕೊಲೆಯೋ ಆತ್ಮಹತ್ಯೆಯೋ..!?
ಉಡುಪಿ : ಉಡುಪಿ ಜಿಲ್ಲೆಯ ಮಲ್ಲೆಯಲ್ಲಿ ನೀರಿನ ಡ್ರಮ್ ಒಳಗೆ ಸಂಶಯಾಸ್ಪದ ರೀತಿಯಲ್ಲಿ ಬಸ್ ಚಾಲಕನ ಮೃತ ದೇಹ ಪತ್ತೆಯಾಗಿದೆ. ಪಾಳೆಕಟ್ಟೆ ನಿವಾಸಿ ಪ್ರಸಾದ್ (40) ಸಂಶಯಾಸಪದವಾಗಿ ಸಾವನ್ನಪ್ಪಿದ್ದ ಚಾಲಕನಾಗಿದ್ದಾನೆ.
ಕೊಡವೂರು ಗ್ರಾಮದ ಪಾಳೆಕಟ್ಟೆ ಒಂದನೇ ಕ್ರಾಸ್‌ನಲ್ಲಿ ನೀರು ತುಂಬಿಸಿಟ್ಟಿದ್ದ ಪ್ಲಾಸ್ಟಿಕ್ ಡ್ರಮ್‌ನೊಳಗೆ ಪ್ರಸಾದ್ ದೇಹ ಪತ್ತೆಯಾಗಿದೆ. ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದ ಇವರು, ಸಿಟಿ ಬಸ್ ಚಾಲಕ ರಾಗಿದ್ದರು. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಪ್ರಸಾದ್ ಮನೆಯ ಬಳಿ ಇದ್ದ ನೀರು ತುಂಬಿಸಿಟ್ಟಿದ್ದ ಪ್ಲಾಸ್ಟಿಕ್ ಡ್ರಮ್‌ನ ಒಳಗೆ ಸೊಂಟದಿಂದ ಮೇಲ್ಭಾಗ ದಿಂದ ಹೊರಗೆ ಚಾಚಿಕೊಂಡು ಮೇಲ್ಮುಖವಾಗಿ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಮೃತರ ಕುತ್ತಿಗೆ, ಮುಖ ಭಾಗದಿಂದ ರಕ್ತ ಬರುತ್ತಿದ್ದು, ಮುಖ ಊದಿ ಕೊಂಡಿದೆ. ಇವರ ಮರಣದ ಕಾರಣ ತಿಳಿದು ಬಂದಿಲ್ಲ ಎಂದು ದೂರಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಸಾದ್ ಸಾವು ಹಲವು ಸಂಶಯಕ್ಕೆ ಎಡೆಮಾಡಿದ್ದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ತಕ್ಷಣ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ ಜಯನ್ ಮಲ್ಪೆ ಆಗ್ರಹಿಸಿದ್ದಾರೆ. ಮೃತದೇಹದ ಹಲವು ಭಾಗಗಳಲ್ಲಿ ಗಾಯಗಳಿದ್ದು ಸಂಶಯಕ್ಕೆ ಎಡೆಮಾಡಿದೆ. ಆತ್ಮಹತ್ಯೆ ಎಂದು ಬಿಂಬಿಸಿರುವ ಈ ಘಟನೆ ಹಲವು ಸಂಶಯಾಸ್ಪದ ರೀತಿಯಲ್ಲಿ ಮೃತದೇಹ ಪತ್ತೆಯಾಗಿರುವುದರಿಂದ ಊರಿನ ಸುತ್ತಮುತ್ತ ಭಯದ ವಾತಾವರಣ ನಿರ್ಮಾನವಾಗಿದೆ. ಮೃತನ ಮನೆಯವರನ್ನು ಸೂಕ್ತ ತನಿಖೆ ನಡೆಸಿ ನ್ಯಾಯ ನೀಡುವಂತೆ ಜಿಲ್ಲಾ ಪೋಲೀಸ್ ಆಧೀಕ್ಷಕರಿಗೆ ದಲಿತ ಮುಖಂಡರಾದ ವಾಸುದೇವ ಮುದ್ದೂರು, ಗಣೇಶ್ ನೆರ್ಗಿ, ಹರೀಶ್ ಸಲ್ಯಾನ್, ರವಿ ಲಕ್ಷ್ಮೀನಗರ ಆಗ್ರಹಿಸಿದ್ದಾರೆ.