LATEST NEWS
ಬ್ರಾ ತೆಗೆಸಿದ ಪ್ರಕರಣ – ನೀಟ್ ಪರೀಕ್ಷೆ ಸಂದರ್ಭ ನಡೆದ ಘಟನೆ ವಿವರಿಸಿದ ವಿಧ್ಯಾರ್ಥಿನಿ…!!
ಕೊಲ್ಲಂ :ಕೇರಳದ ಕೊಲ್ಲಂನಲ್ಲಿ ನೀಟ್ ಪರೀಕ್ಷೆ ಸಂದರ್ಭ ವಿಧ್ಯಾರ್ಥಿನಿಯರ ಒಳ ಉಡುಪಿ ಬ್ರಾ ತೆಗೆಸಿದ ಪ್ರಕರಣ ಇದೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ದೂರುಗಳು ದಾಖಲಾಗಲಾರಂಭಿಸಿದೆ. ಇನ್ನು ಘಟನೆಯ ಸಂಪೂರ್ಣ ಮಾಹಿತಿಯನ್ನು ಎನ್ ಡಿಟಿವಿ ಜೊತೆ ವಿಧ್ಯಾರ್ಥಿನಿಯೊಬ್ಬಳು ಹಂಚಿಕೊಂಡಿದ್ದಾಳೆ ಪರೀಕ್ಷೆ ಸಂದರ್ಭ ತನ್ನ ಎದೆಯನ್ನು ಮುಚ್ಚಿಕೊಳ್ಳಲು ತಾನು ತಲೆ ಕೂದಲನ್ನು ಬಳಸಿ ಪರೀಕ್ಷೆಗೆ ಕುಳಿತಾಗ ತನಗೆ ಆದ ಅವಮಾನವನ್ನು ವಿವರಿಸಿದ್ದಾಳೆ.
ಎನ್ ಡಿಟಿವಿ ಜೊತೆ ಮಾತನಾಡಿರುವ ವಿಧ್ಯಾರ್ಥಿನಿ ಇದು “ಅತ್ಯಂತ ಕೆಟ್ಟ ಅನುಭವ” ಎಂದು ಹೇಳಿದ್ದಾರೆ. ಪರೀಕ್ಷೆ ಹಾಲ್ ಗೆ ತೆರಳಿದಾಗ ಅಲ್ಲಿನ ಸಿಬ್ಬಂದಿ ನನಗೆ ಕರೆದು ಸ್ಕ್ಯಾನಿಂಗ್ ಇದೆ ಎಂದು ಹೇಳಿದರು. ಅವರು ಸ್ಕ್ಯಾನ್ ಮಾಡಿದ ನಂತರ ನಮ್ಮನ್ನು ಬಿಡುತ್ತಾರೆ ಎಂದು ನಾವು ಭಾವಿಸಿದ್ದೇವೆ ಆದರೆ ಅವರು ನಮ್ಮನ್ನು ಎರಡು ಸರತಿಯಲ್ಲಿ ನಿಲ್ಲುವಂತೆ ಮಾಡಿದರು – ಒಂದು ಲೋಹದ ಕೊಕ್ಕೆಗಳಿಲ್ಲದ ಬ್ರಾಗಳನ್ನು ಧರಿಸಿರುವ ಹುಡುಗಿಯರಿಗೆ, ಮತ್ತು ಇನ್ನೊಂದು ಸಾಲು ಬೆರೆಯವರಿಗೆ ಇತ್ತು, ಅಲ್ಲಿನ ಸಿಬ್ಬಂದಿ ನನ್ನನ್ನು ಕೇಳಿದರು,
ನೀವು ಲೋಹದ ಕೊಕ್ಕೆ ಇರುವ ಒಳ ಉಡುಪುಗಳನ್ನು ಧರಿಸಿದ್ದೀರಾ? ನಾನು ಹೌದು ಎಂದು ಹೇಳಿದೆ, ಆದ್ದರಿಂದ ಆ ಸಾಲಿಗೆ ಸೇರಲು ಹೇಳಿದರು. ಆ ಸಂದರ್ಭ ನನಗೆ ಏನಾಗುತ್ತಿದೆ ಮತ್ತು ಏಕೆ ಎಂದು ತನಗೆ ಅರ್ಥವಾಗುತ್ತಿಲ್ಲ ಎಂದು ವಿಧ್ಯಾರ್ಥಿನಿ ಹೇಳಿದ್ದು,
ಪರೀಕ್ಷಾ ಕೇಂದ್ರದಲ್ಲಿರುವ ಸಿಬ್ಬಂದಿ ನಮ್ಮ ಬ್ರಾ ತೆಗೆದು ಮೇಜಿನ ಮೇಲೆ ಇಡಲು ಅವರು ಕೇಳಿದರು. ಎಲ್ಲಾ ವಿಧ್ಯಾರ್ಥಿನಿಯರ ಬ್ರಾಗಳು ಒಟ್ಟಿಗೆ ಜೋಡಿಸಲ್ಪಟ್ಟಿದ್ದವು. ನಾವು ಹಿಂತಿರುಗಿದಾಗ ನಮ್ಮದು ಹಿಂತಿರುಗುತ್ತದೆಯೇ ಎಂದು ನಮಗೆ ತಿಳಿದಿರಲಿಲ್ಲ. ನಾವು ಹಿಂತಿರುಗಿದಾಗ ಬ್ರಾ ಇಟ್ಟಿದ್ದ ರೂಂ ಅದು ಕಿಕ್ಕಿರಿದಿತ್ತು. ಕೆಲವು ಹುಡುಗಿಯರು ನಾಚಿಕೆಯಿಂದ ಅಳುತ್ತಿದ್ದರು. ಮಹಿಳಾ ಭದ್ರತಾ ಉದ್ಯೋಗಿಯೊಬ್ಬರು, “ನೀವು ಯಾಕೆ ಅಳುತ್ತೀರಿ?” ನಿಮ್ಮ ಬ್ರಾ ನ್ನು ನಿಮ್ಮ ಕೈಯಲ್ಲಿ ತೆಗೆದುಕೊಂಡು ಬಿಡಿ, ಅವುಗಳನ್ನು ಧರಿಸುವ ಅಗತ್ಯವಿಲ್ಲ ಎಂದು ಹೇಳಿದರು. ಅದನ್ನು ಕೇಳಿ ನಮಗೆ ತುಂಬಾ ಮುಜುಗರವಾಯಿತು.
ಆದರೆ ಎಲ್ಲರೂ ಬದಲಾಯಿಸಲು ಕಾಯುತ್ತಿದ್ದರು. ರೂಂ ಸಂಪೂರ್ಣ ಕತ್ತಲೆಯಾಗಿತ್ತು ಮತ್ತು ಬದಲಾಯಿಸಲು ಸ್ಥಳ ಕೂಡ ಇರಲ್ಲಿಲ್ಲ… ಇದು ಭಯಾನಕ ಅನುಭವವಾಗಿದೆ. .ನಾವು ಪರೀಕ್ಷೆ ಬರೆಯುವಾಗ ಶಾಲು ಹೊದಿಸಲು ಇಲ್ಲದ ಕಾರಣ ತಲೆಗೂದಲು ಹಾಕಿಕೊಂಡೆವು.. ಪರೀಕ್ಷೆ ಹಾಲ್ ನಲ್ಲಿ ಹುಡುಗರು ಮತ್ತು ಹುಡುಗಿಯರಿದ್ದು ನಿಜಕ್ಕೂ ಕಷ್ಟ ಮತ್ತು ಅನಾನುಕೂಲವಾಗಿತ್ತು” ಎಂದು ಬಾಲಕಿ ಆರೋಪಿಸಿದ್ದಾರೆ.
"Take Bra In Hand And Leave": Kerala Girl Describes NEET Exam Horror https://t.co/Aqr4924uOs pic.twitter.com/ostn0JCgcg
— NDTV (@ndtv) July 19, 2022