Connect with us

LATEST NEWS

ಈಕೆ ತಾಯ್ತನಕ್ಕೆ ಕಳಂಕ – ಅಪ್ರಾಪ್ತ ಹೆಣ್ಮುಮಕ್ಕಳನ್ನು ಪ್ರಿಯಕರನಿಗೆ ಅತ್ಯಾಚಾರ ಮಾಡಲು ಬಿಟ್ಟ ತಾಯಿಗೆ 40 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ

ಕೇರಳ ನವೆಂಬರ್ 28: ತನ್ನ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ತನ್ನ ಪ್ರಿಯಕರನಿಗೆ ಅತ್ಯಾಚಾರವೆಸಗಲು ಬಿಟ್ಟ ತಾಯಿಗೆ ಕೇರಳದ ವಿಶೇಷ ತ್ವರಿತ ನ್ಯಾಯಾಲಯ 40 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.


ಮಾರ್ಚ್ 2018 ರಿಂದ 2019ರ ನಡುವೆ ಈ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಆರೋಪಿ ಮಹಿಳೆ ತನ್ನ ಮಾನಸಿಕ ಅಸ್ವಸ್ಥ ಪತಿಯನ್ನು ತೊರೆದು ಪ್ರಿಯಕರ ಶಿಶುಪಾಲನ್ ಎಂಬವನ ಜೊತೆ ತನ್ನ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳೊಂದಿಗೆ ವಾಸಿಸುತ್ತಿದ್ದಳು.

ಈ ನಡುವೆ ಶಿಶುಪಾಲನ್ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವೆಸಗಿದ್ದಾನೆ. ಇದಕ್ಕೆ ಮಕ್ಕಳ ತಾಯಿಯೇ ಸಹಕಾರ ನೀಡಿದ್ದು, ತಾಯಿ ಮಗುವನ್ನು ಪದೇ ಪದೇ ತನ್ನ ಮನೆಗೆ ಕರೆದೊಯ್ದು ಆಕೆಯ ಸಮ್ಮುಖದಲ್ಲೇ ಮಗುವಿನ ಮೇಲೆ ಹಲ್ಲೆ ನಡೆಸಿದ್ದಾನೆ. ಸಂತ್ರಸ್ತ ಬಾಲಕಿಯ ಸಹೋದರಿ ಮನೆಗೆ ಬಂದಾಗ ನಡೆದಿರುವ ವಿಚಾರವನ್ನು ತಿಳಿಸಿದ್ದಾಳೆ. ಬೆದರಿಕೆ ಹಾಕಿದ್ದರಿಂದ ಮಕ್ಕಳು ಮಾಹಿತಿ ಬಹಿರಂಗಪಡಿಸಿರಲಿಲ್ಲ.

ಹೇಗೋ ಅಕ್ಕ ತಂಗಿ ತಪ್ಪಿಸಿಕೊಂಡು ಅಜ್ಜಿಯ ಮನೆಗೆ ಹೋಗಿದ್ದರು, ಅಜ್ಜಿ ಈ ಘಟನೆಯನ್ನು ಪೊಲೀಸರಿಗೆ ತಿಳಿಸಿದ್ದಾರೆ. ಹಾಗೂ ಮಕ್ಕಳನ್ನು ಮನೆಗೆ ಕರೆಸಿಕೊಂಡಿದ್ದಾರೆ. ಅಲ್ಲಿ ನಡೆದ ಕೌನ್ಸೆಲಿಂಗ್​ನಲ್ಲಿ ಮಕ್ಕಳು ನಡೆದ ಘಟನೆಯನ್ನು ವಿವರಿಸಿದ್ದಾರೆ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆರ್​ಎಸ್ ವಿಜಯ್ ಮೋಹನ್ ಎಎನ್​ಐಗೆ ಮಾಹಿತಿ ನೀಡಿದ್ದು, ಅಪರಾಧಕ್ಕಾಗಿ ಮಹಿಳೆಗೆ 40 ವರ್ಷಗಳ ಜೈಲು ಶಿಕ್ಷೆ ಹಾಗೂ 20 ಸಾವಿರ ರೂ. ದಂಡವನ್ನು ವಿಧಿಸಲಾಗಿದೆ.

ಇಬ್ಬರು ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆದಿದೆ. ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಆರೋಪಿ ಮಹಿಳೆಯ ಪತಿ ಮಾನಸಿಕ ಅಸ್ವಸ್ಥನಾಗಿರುವ ಕಾರಣ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಪ್ರೇಮಿಯೊಂದಿಗೆ ವಾಸವಾಗಿದ್ದಳು. ಏಳು ವರ್ಷದವಳಿದ್ದಾಗಲೇ ಶಿಶುಪಾಲನ್ ಆಕೆಯ ಮೇಲೆ ದೌರ್ಜನ್ಯವೆಸಗಿದ್ದ. ಆದರೆ ತಾಯಿ ಏನೂ ಮಾಡಲಿಲ್ಲ. ಬದಲಾಗಿ ಪ್ರೇಮಿಗೆ ಸಹಾಯ ಮಾಡಿದ್ದಳು. ಆಕೆ ತಾಯಿ ಎನ್ನುವ ಹೆಸರಿಗೆ ಕಳಂಕ, ಯಾವುದೇ ಕ್ಷಮೆಗೆ ಆಕೆ ಅರ್ಹಳಲ್ಲ ಎಂದು ನ್ಯಾ. ಆರ್​ ರೇಖಾ ಹೇಳಿದ್ದಾರೆ.

 

ವಿಚಾರಣೆ ವೇಳೆ ಮೊದಲ ಆರೋಪಿ ಶಿಶುಪಾಲನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಾಗಾಗಿ ತಾಯಿಯ ವಿರುದ್ಧವೇ ವಿಚಾರಣೆ ನಡೆದಿದೆ. ಸದ್ಯ ಮಕ್ಕಳು ಮನೆಯಲ್ಲಿ ವಾಸವಾಗಿದ್ದಾರೆ. ಪ್ರಕರಣದಲ್ಲಿ ಇಪ್ಪತ್ತೆರಡು ಸಾಕ್ಷಿಗಳನ್ನು ಪರೀಕ್ಷಿಸಲಾಯಿತು ಮತ್ತು ಮೂವತ್ಮೂರು ದಾಖಲೆಗಳನ್ನು ಸಲ್ಲಿಸಲಾಯಿತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *