KARNATAKA
ಅಂದು ಗಡಿ ಒಪನ್ ಮಾಡಿ ಅಂದ ಕೇರಳ ಸಿಎಂ….ಇಂದು ಮುಚ್ಚೋಕೆ ಆದೇಶ..!
ಅಂದು ಗಡಿ ಒಪನ್ ಮಾಡಿ ಅಂದ ಕೇರಳ ಸಿಎಂ….ಇಂದು ಮುಚ್ಚೋಕೆ ಆದೇಶ..!
ಮಂಗಳೂರು ಎಪ್ರಿಲ್ 28: ಕರ್ನಾಟಕ ಕೇರಳ ಗಡಿ ಬಂದ್ ಮಾಡಿದ್ದಕ್ಕೆ ಸುಪ್ರೀಕೋರ್ಟ್ ಮೆಟ್ಟಿಲೇರಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್ ಈಗ ಕರ್ನಾಟಕ ಮತ್ತು ತಮಿಳುನಾಡು ರಾಜ್ಯದ ಜನರ ಕೇರಳ ಪ್ರವೇಶವನ್ನು ನಿರ್ಬಂಧಿಸಿದ್ದಾರೆ.
ಪಕ್ಕದ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿದ್ದಂತೆ, ಕೇರಳ ಸಿಎಂ ಕೇರಳ ರಾಜ್ಯದ ಎಲ್ಲಾ ಗಡಿಗಳನ್ನು ಬಂದ್ ಮಾಡಲು ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಈ ಹಿಂದೆ ಕೇರಳ ಗಡಿ ಭಾಗದಿಂದ ಕೊರೋನಾ ಸೋಂಕಿತರು ದ.ಕ ಜಿಲ್ಲೆಗೆ ಪ್ರವೇಶಿಸುವುದನ್ನು ತಡೆಯಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಗಡಿ ರಸ್ತೆಯನ್ನು ಬಂದ್ ಮಾಡಿತ್ತು.
ಇದನ್ನು ವಿರೋಧಿಸಿ ಕೇರಳ ಮುಖ್ಯಮಂತ್ರಿ ಸುಪ್ರೀಂಕೋರ್ಟ್ ಮೆಟ್ಟಲೇರಿದ್ದರು. ಆದರೆ ಈಗ ಅವರೇ ಗಡಿ ರಸ್ತೆ ಬಂದ್ ಮಾಡಲು ಸೂಚಿಸಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಕೇರಳ ಸರ್ಕಾರದ ಆದೇಶದ ಕುರಿತು ಟ್ವೀಟ್ ಮಾಡಿರುವ ಶಾಸಕ ವೇದವ್ಯಾಸ ಕಾಮತ್, ಕರ್ನಾಟಕ ಹಾಗೂ ತಮಿಳುನಾಡಿನ ಅಂತಾರಾಜ್ಯ ಗಡಿ ರಸ್ತೆಗಳನ್ನು ಬಂದ್ ಮಾಡಲು ಆದೇಶಿಸಿರುವುದು ಪಿಣರಾಯಿ ವಿಜಯನ್ ಅವರ ದ್ವಿಮುಖ ನೀತಿಯನ್ನು ತೋರಿಸುತ್ತದೆ. ಹಿಂದೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಗಡಿ ರಸ್ತೆಯನ್ನು ಬಂದ್ ಮಾಡಿದಾಗ ಕೇರಳ ಮುಖ್ಯಮಂತ್ರಿ ಸುಪ್ರೀಂಕೋರ್ಟಿಗೆ ಹೋಗಿದ್ದರು. ಈಗ ಅವರೇ ಗಡಿ ರಸ್ತೆ ಬಂದ್ ಮಾಡಲು ಸೂಚಿಸಿದ್ದಾರೆ ಎಂದು ಟೀಕಿಸಿದ್ದಾರೆ.