FILM
ಗಂಡು ಮಗುವಿಗೆ ಜನ್ಮ ನೀಡಿದ ಲಕ್ಮೀ ಬಾರಮ್ಮ ನಟಿ ಕವಿತಾ ಗೌಡ
ಬೆಂಗಳೂರು ಸೆಪ್ಟೆಂಬರ್ 19: ಕಿರುತೆರೆ ನಟಿ ಕವಿತಾ ಗೌಡ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಕನ್ನಡದ ಅತ್ಯಂತ ಜನಪ್ರಿಯ ಸೀರಿಯಲ್ ಲಕ್ಮೀ ಬಾರಮ್ಮದಲ್ಲಿ ಚಿನ್ನು ಪಾತ್ರದ ಮೂಲಕ ಪ್ರಖ್ಯಾತಿ ಪಡೆದಿದ್ದ ಕವಿತಾ ಗೌಡ ಹಾಗೂ ಚಂದನ್ ಗೌಡ ದಂಪತಿಗೆ ಗಂಡು ಮಗುವಾಗಿದೆ.
ಗಂಡು ಮಗು ಹುಟ್ಟಿರುವ ವಿಚಾರವನ್ನುಸ್ವತಃ ಕವಿತಾ ಗೌಡ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ. ‘ಯುವರಾಜನ ಆಗಮನ’ ಎಂದು ಅವರು ಪೋಸ್ಟ್ ಮಾಡಿದ್ದಾರೆ.ಇನ್ನು ಸೀರಿಯಲ್ ಹಾಗೂ ಸಿನಿಮಾಗಳ ಮೂಲಕ ಜನಪ್ರಿಯರಾಗಿರುವ ಚಂದನ್ ಗೌಡ ಕುಡ ವಿಶೇಷ ವಿಡಿಯೋ ಮೂಲಕ ಮಗ ಹುಟ್ಟಿದ ಖುಷಿಯನ್ನು ಹಂಚಿಕೊಂಡಿದ್ದಾರೆ. ಮಗುವಿನ ಕಾಲಿನ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ತಾವು ಅಪ್ಪನಾದ ಸಂಭ್ರಮ ಹಂಚಿದ್ದಾರೆ. ನಮ್ಮ ಮುದ್ದು ಕಂದಮ್ಮೆ ಧರೆಗಿಳಿದಿದ್ದಾನೆ ಎಂದೂ ಚಂದನ್ ಇದರಲ್ಲಿ ಬರೆದುಕೊಂಡಿದ್ದಾರೆ.
You must be logged in to post a comment Login