Connect with us

LATEST NEWS

ಮೇಯರ್ ಕಾರ್ಯಚರಣೆ, ಅನಾಧಿಕೃತ ನಿರ್ಮಾಣಗಳ ತೆರವು..

ಮಂಗಳೂರು, ಜುಲೈ 28 : ನಗರದಲ್ಲಿ ಬಿಲ್ಡರ್ ಗಳು ಸಾರ್ವಜನಿಕ ಸ್ಥಳವನ್ನು ಅತಿಕ್ರಮಿಸಿ ಕಟ್ಟಿದ ತಡೆಗೋಡೆ ಹಾಗೂ ಇತರ ನಿರ್ಮಾಣಗಳನ್ನು ಮಂಗಳೂರು ಮೇಯರ್ ಕವಿತಾ ಸನಿಲ್ ಅವರು ಇಂದು ಪಾಲಿಕೆ ಅಧಿಕಾರಿಗಳೊಂದಿಗೆ ಮಿಂಚಿನ ಕಾರ್ಯಚರಣೆ ನಡೆಸಿ ತೆರವುಗೊಳಿಸಿದ್ದಾರೆ.

ಇಂದು ಬೆಳಗ್ಗೆ ಮಹಾ ನಗರ ಪಾಲಿಕೆಯ ಆಯುಕ್ತ ಮೊಹಮ್ಮದ್ ನಜೀರ್ ಹಾಗೂ ಇತರ ಕಂದಾಯ ಅಧಿಕಾರಿಗಳೊಂದಿಗೆ ಖುದ್ದಾಗಿ ತೆರಳಿ ಸ್ಟೇಟ್ ಬ್ಯಾಂಕ್ ಪರಿಸರ, ಬಂದರ್ ಮಿಷನ್ ಸ್ಟ್ರೀಟ್ ರಸ್ತೆಗಳಲ್ಲಿ ಬಿಲ್ಡರ್ ಗಳು ಸಾರ್ವಜನಿಕ ಸ್ಥಳವನ್ನು ಒತ್ತುವರಿ ಮಾಡಿಕೊಂಡು ಕಟ್ಟಿದ ನಿರ್ಮಾಣಗಳನ್ನು ಜೆಸಿಬಿ ಮೂಲಕ ತೆರವು ಮಾಡಿಸಿದರು.

 ಈ ಸಂದರ್ಭದಲ್ಲಿ ಪೋಲಿಸ್ ಬಂದೋಬಸ್ತನ್ನು ಏರ್ಪಡಿಸಲಾಗಿತ್ತು. ಮೇಯರ್ ಅವರ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ಆದರೆ ಎಲ್ಲರಿಗೂ ಏಕ ರೂಪದ ಕಾನೂನು ಅನ್ವಯವಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಬಹುಮಹಡಿ ಕಟ್ಟಡಗಳ ಪಾರ್ಕಿಂಗ್ ಸ್ಥಳವನ್ನು ಅತಿಕ್ರಮಿಸಿ ವಾಣಿಜ್ಯ ಉದ್ದೇಶಕ್ಕಾಗಿ ಬಳಸುತ್ತಿರುವವರ ಮೇಲೆ ಯಾಕೆ ಕ್ರಮ ಇಲ್ಲ ಎಂದು ಪ್ರಶ್ನಿಸಿದ್ದಾರೆ.

ವಿಡಿಯೋ ವೀಕ್ಷಣೆಗಾಗಿ ಲಿಂಕನ್ನು ಒತ್ತಿರಿ…

Share Information
Advertisement
Click to comment

You must be logged in to post a comment Login

Leave a Reply