LATEST NEWS
ಜಸ್ಟಿಸ್ ಫಾರ್ ಆಸೀಫಾ : ಮಂಗಳೂರಿನಲ್ಲಿ ಎನ್ ಎಸ್ ಯು ಐ ನಿಂದ ಮೊಂಬತ್ತಿಯ ಪ್ರತಿಭಟನೆ
ಜಸ್ಟಿಸ್ ಫಾರ್ ಆಸೀಫಾ : ಮಂಗಳೂರಿನಲ್ಲಿ ಎನ್ ಎಸ್ ಯು ಐ ನಿಂದ ಮೊಂಬತ್ತಿಯ ಪ್ರತಿಭಟನೆ
ಮಂಗಳೂರು, ಎಪ್ರಿಲ್ 13 : ಜಮ್ಮುವಿನಲ್ಲಿ ಕತುವಾದಲ್ಲಿ ನಡೆದ ಪೈಶಾಚಿಕ ಕೃತ್ಯದಲ್ಲಿ ಸಾವನ್ನಪ್ಪಿದ ಬಾಲಕಿ ಹಸೀಫಾ ಗೇ ಮಂಗಳೂರಿನಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಮಂಗಳೂರಿನ ಮಹತ್ಮಾ ಗಾಂಧಿ ರಸ್ತೆಯಲ್ಲಿರುವ ಗಾಂಧಿ ಪ್ರತಿಮೆ ಬಳಿ ಮೊಂಬತ್ತಿಗಳನ್ನು ಉರಿಸಿ ಬಾಲಕಿ ಆಸಿಫಾಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಯುವ ಕಾಂಗ್ರೆಸ್ ಜಿಲ್ಲಾ ಘಟಕ ಆಯೋಜಿಸಿದ್ದ ಈ ಶ್ರದ್ದಾಂಜಲಿ ಸಭೆಯಲ್ಲಿ ನೂರಾರು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಪಾಲ್ಗೊಂಡು ಅಸಿಫಾ ಮೇಲೆ ನಡೆದ ಪೈಶಾಚಿಕ ಕೃತ್ಯವನ್ನು ಖಂಡಿಸಿದರು ಮತ್ತು ಈ ಪ್ರಕರಣವನ್ನು ಸಿಬಿಐ ಗೇ ವಹಿಸಬೇಕೆಂದು ಒತ್ತಾಯಿಸಿದರು.
ಆರೋಪಿಗಳು, ರಸ್ಸಾನಾ ಬಳಿಯ ಹುಲ್ಲುಗಾವಲಿನಲ್ಲಿ ತನ್ನ ಕುದುರೆಯನ್ನು ಮೇಯಿಸುತ್ತಿದ್ದ ಬಾಲಕಿಯನ್ನು ಜನವರಿ 10ರಂದು ಅಪಹರಿಸಿ ಸಮೀಪದ ಕಾಡಿಗೆ ಕರೆತಂದಿದ್ದರು.
ಅಲ್ಲಿ ಆಕೆಗೆ ಬಲವಂತದಿಂದ ನಿದ್ದೆಯ ಮಾತ್ರೆ ನುಂಗಿಸಿದ್ದರು.
ನಂತರ ಆಕೆಯನ್ನು ಊರಿನ ದೇವಸ್ಥಾನವೊಂದಕ್ಕೆ ಕರೆದುಕೊಂಡು ಹೋಗಿ ಕೂಡಿ ಹಾಕಲಾಗಿತ್ತು
ಅಲ್ಲಿ ಆಕೆಯ ಮೇಲೆ ಏಳೂ ಆರೋಪಿಗಳು ನಾಲ್ಕು ದಿನ ಸತತ ಅತ್ಯಾಚಾರ ನಡೆಸಿದ್ದರು.
ನಿತ್ರಾಣವಾಗಿದ್ದ ಆಕೆಯನ್ನು ಕೊಲ್ಲಲು ಮುಂದಾಗಿದ್ದರು.
ಬಾಲಕಿ ಮೇಲೆ ಕೊನೆಯ ಬಾರಿ ಅತ್ಯಾಚಾರ ನಡೆಸಿದ್ದ ಪೊಲೀಸ್ ಕಾನ್‌ಸ್ಟೆಬಲ್ ಕತ್ತು ಹಿಸುಕಿ ಆಕೆಯನ್ನು ಕೊಂದಿದ್ದನು.
ಈ ಪ್ರಕರಣ ಇದೀಗ ದೇಶ ವ್ಯಾಪಿ ಚರ್ಚೆಯಾಗುತ್ತಿದ್ದು, ಅಲ್ಲಿನ ಸರ್ಕಾರದ ಮೇಲೆ ತೀವೃ ಖಂಡನೆ ವ್ಯಕ್ತವಾಗಿದೆ.