LATEST NEWS
ಕೈರಂಗಳ ದನ ಕಳ್ಳತನ, ಮೂರು ಆರೋಪಿಗಳ ಬಂಧನ
ಕೈರಂಗಳ ದನ ಕಳ್ಳತನ, ಮೂರು ಆರೋಪಿಗಳ ಬಂಧನ
ಮಂಗಳೂರು, ಎಪ್ರಿಲ್ 13 : ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕು ಕೈರಂಗಳ ಗ್ರಾಮದ ಪುಣ್ಯಕೋಟಿ ನಗರದಲ್ಲಿರುವ ಅಮೃತಧಾರ ಗೋ ಶಾಲೆಯಲ್ಲಿ ಜರುಗಿದ ಗೋವಿನ ಕಳ್ಳತನಕ್ಕೆ ಸಂಬಂಧಿಸಿದ ಈ ಪ್ರಕರಣದಲ್ಲಿ ಭಾಗಿಯಾದ ಮೂವರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.
ಬಂಧಿತರನ್ನು ಕಸಬ ಬೆಂಗ್ರೆಯ ಅಹಮ್ಮದ್ ಕಬೀರ್, ಮಂಜೇಶ್ವರ ಪೈವಳಿಕೆಯ ಅಬೂಬಕ್ಕರ್ ಸಿದ್ದಿಕಿ, ಹಾಗೂ ಉಳ್ಳಾಲ ಮಿಲ್ಲತ್ ನಗರದ ಮಹಮ್ಮದ್ ಇಮ್ರಾನ್ ಎಂದು ಗುರುತ್ತಿಸಲಾಗಿದೆ,
ಆರೋಪಿಗಳ ವಶದಿಂದ ಕೃತ್ಯಕ್ಕೆ ಬಳಸಿದ ಕೆಎ.01ಎಂ.ಬಿ.1253 ನಂಬರಿನ ಕಾರು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಆರೋಪಿಗಳು ಈ ಮೊದಲು ಉಳ್ಳಾಲ, ಕಂಕನಾಡಿ, ವಿಟ್ಲ ಕೊಣಾಜೆ ಠಾಣಾ ಸರಹದ್ದಿನಲ್ಲಿ ಇದೇ ರೀತಿ ಹಟ್ಟಿಯಿಂದ ದನಗಳನ್ನು ಕದ್ದ ಬಗ್ಗೆ ವಿಚಾರಣೆಯಲ್ಲಿ ತಿಳಿದು ಬಂದಿರುತ್ತದೆ.
ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ.
You must be logged in to post a comment Login