Connect with us

LATEST NEWS

ಕಾಸರಗೋಡು – ಮಂಗಳೂರು ಸಂಚಾರಕ್ಕೆ 21 ದಿನಗಳ ಪಾಸ್ ವ್ಯವಸ್ಥೆ

ಮಂಗಳೂರು, ಆಗಸ್ಟ್ 14 : ಕಾಸರಗೋಡು – ಕರ್ನಾಟಕ ನಡುವೆ ನಿತ್ಯ ಸಂಚಾರಕ್ಕಾಗಿ 21 ದಿನಗಳ ಅವಧಿಗೆ ಪಾಸ್ ನೀಡಲಾಗುವುದು ಎಂದು ಕಾಸರಗೋಡು ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ತಿಳಿಸಿದ್ದಾರೆ.

ಪಾಸ್ ಪಡೆದವರು ಕಡ್ಡಾಯವಾಗಿ ಏಳು ದಿನಗಳಿಗೊಮ್ಮೆ ಆ್ಯಂಟಿಜೆನ್ ಟೆಸ್ಟ್ ಗೆ ಒಳಪಡಬೇಕು ಎಂಬ ನಿಯಮವನ್ನು ಸಡಿಲಿಸಲಾಗಿದ್ದು 21 ದಿನಗಳ ಬಳಿಕ ತಪಾಸಣೆ ನಡೆಸಿ ಪಾಸ್ ನವೀಕರಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಅಲ್ಲದೆ, ‌ಪಾಸ್ ಪಡೆಯುವ ಮುನ್ನ ಈ ಟೆಸ್ಟ್ ಮಾಡಿಕೊಳ್ಳಬೇಕಿದೆ. ಬಿಪಿಎಲ್ ಪಟ್ಟಿಯಲ್ಲಿ ಒಳಗೊಂಡವರಿಗೆ ಈ ಟೆಸ್ಟ್ ಉಚಿತವಾಗಿದ್ದು ಮಂಜೇಶ್ವರ, ಕಾಸರಗೋಡು, ಕಾಞಂಗಾಡಿನಲ್ಲಿ ತಪಾಸಣೆ ಸೌಲಭ್ಯ ಇರುತ್ತದೆ ಎಂದು ಹೇಳಿದ್ದಾರೆ.

ಖಾಸಗಿ ವಾಹನಗಳಲ್ಲಿ ಅಂತಾರಾಜ್ಯ ಸಂಚಾರ ಮಾಡುವ ಪ್ರಯಾಣಿಕರು ತಮ್ಮ ವಾಹನಗಳಿಗೆ ಈ ಕುರಿತ ಸ್ಟಿಕ್ಕರ್ ಹಾಕಿಕೊಳ್ಳಬೇಕು ಎಂದು ಇದೇ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂಚನೆ ನೀಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *