LATEST NEWS
ಕಾಸರಗೋಡು : ಜನರ ಆತಂಕಕ್ಕೆ ಕಾರಣವಾದ ಅಪರಿಚಿತ ದ್ರೋಣ್, ಸ್ಥಳಕ್ಕೆ ಪೊಲೀಸರ ದೌಡು..!!
ಕಾಸರಗೋಡು : ಕೇರಳದ ಕಾಸರಗೋಡಿನ ಜನ ನಿಭಿಡ ಪ್ರದೇಶದಲ್ಲಿ ಅಪರಿಚಿತ ದ್ರೋಣ್ ಪತ್ತೆಯಾಗಿದೆ. ಜಿಲ್ಲೆಯ ಚಿಗುರುಪಾದೆ ಎಂಬಲ್ಲಿ ಈ ವಿಮಾನ ಆಕಾರದ ದ್ರೋಣ್ ಪತ್ತೆಯಾಗಿದ್ದು ಸ್ಥಳಕ್ಕೆ ಮಂಜೇಶ್ವರ ಪೋಲೀಸರ ಧಾವಿಸಿದ್ದಾರೆ.
ಈ ಅಪರಿಚಿತ ದ್ರೋಣ್ ನಿಂದ ಸ್ಥಳೀಯ ಜನ ಆತಂಕಿತರಾಗಿದ್ದು ಪುಟ್ಟ ವಿಮಾನ ಆಕಾರದ ಈ ದ್ರೋಣ್ ವೀಕ್ಷಣೆಗೆ ಸುತ್ತ ಮುತ್ತಲ ಜನ ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ.
ದ್ರೋಣ್ ಮಾಹಿತಿ ಪಡೆದ ಪೊಲೀಸರು ಅದರ ವಾರಿಸುದಾರ ಮಾಹಿತಿ ಕಲೆ ಹಾಕಿದ್ದು ಕೊನೆಗೂ ಅದು ಗೇಲ್ ಕಂಪೆನಿಗೆ ಸೇರಿದ್ದಾಗಿ ವಿಚಾರಣೆಯಿಂದ ಗೊತ್ತಾಗಿದ್ದು ಗ್ಯಾಸ್ ಪೈಪ್ ಲೈನ್ ಸಂಬಂಧಿಸಿದಂತೆ ಸರ್ವೆ ನಡೆಸುತ್ತಿದ್ದಾಗ ಏಕಾಏಕಿ ಜಿಪಿಎಸ್ ಸಂಪರ್ಕ ಕಡಿದುಕೊಂಡು ಜನನಿಭಿಡ ಪ್ರದೇಶದಲ್ಲಿ ಹೋಗಿ ದ್ರೋಣ್ ಬಿದ್ದಿತ್ತು ಎನ್ನಲಾಗಿದೆ. ತೀವ್ರ ವಿಚಾರಣೆ ಬಳಿಕ ಗೇಲ್ ಕಂಪನಿ ಸಿಬ್ಬಂದಿ ದ್ರೋಣ್ ನ್ನು ವಶಕ್ಕೆ ಪಡೆದು ಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.