Connect with us

    LATEST NEWS

    ಕಾಸರಗೋಡು: ಕರಾವಳಿ ಪೊಲೀಸ್ ಪಡೆಯ ಇಬ್ಬರು ಸಿಬಂದಿ ಸಮುದ್ರ ಪಾಲು..!

    ಕರಾವಳಿ ಪೊಲೀಸ್  ಪಡೆಯ ಸಿಬಂದಿ ಸಮುದ್ರಪಾಲಾದ ಘಟನೆ ಕೇರಳದ ಕಾಸರಗೋಡಿನಲ್ಲಿ ಸಂಭವಿಸಿದೆ.

    ಕಾಸರಗೋಡು: ಕರಾವಳಿ ಪೊಲೀಸ್  ಪಡೆಯ ಸಿಬಂದಿ ಸಮುದ್ರಪಾಲಾದ ಘಟನೆ ಕೇರಳದ ಕಾಸರಗೋಡಿನಲ್ಲಿ ಸಂಭವಿಸಿದೆ.

    ರಾಜೇಶ್ ( 35) ಮತ್ತು ರಕ್ಷಣಾ ಬೋಟ್ ನ ಸಿಬಂದಿ ಸನೀಶ್ ( 32) ಸಮುದ್ರ ಪಾಲಾಗಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಸಂಜೆ 6:45 ರ ಸುಮಾರಿಗೆ ನೀಲೇಶ್ವರಂ ತೈಕ್ಕಡಪ್ಪುರಂ ಬೋಟ್ ಜೆಟ್ಟಿಯ ಪಶ್ಚಿಮ ಭಾಗದಲ್ಲಿ ಈ ಘಟನೆ ನಡೆದಿದೆ. ದಡದಿಂದ ಸಮುದ್ರಕ್ಕೆ ಈಜುತ್ತಾ ಬಲೆ ಹಿಡಿದು ಮೀನು ಹಿಡಿಯುತ್ತಿದ್ದಾಗ ರಾಜೇಶ್ ಅಕಸ್ಮಿಕವಾಗಿ  ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ರಾಜೇಶ್‌ನನ್ನು ರಕ್ಷಿಸುವ ವೇಳೆ ಕಾಸರಗೋಡು ಸಮುದ್ರ ರಕ್ಷಣಾ ಸಿಬ್ಬಂದಿ ಸನೀಷ್‌ ಕೂಡ ನೀರುಪಾಲಾಗಿದ್ದಾರೆ.

    ಕರಾವಳಿ ಪೊಲೀಸರು , ಸ್ಥಳೀಯರು ಶೋಧ ನಡೆಸಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಮೃತದೇಹಗಳನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದ್ದು ಈ ಸಂಬಂಧ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *