LATEST NEWS
ಕಾಸರಗೋಡು : ಪೊಲೀಸರು ಚೇಸ್ ಮಾಡಿದ್ದ ಕಾರು ನಿಯಂತ್ರಣ ತಪ್ಪಿ ಪಲ್ಟಿ – ವಿದ್ಯಾರ್ಥಿ ಮೃತ್ಯು..!
ಪೊಲೀಸರು ಚೇಸ್ ಮಾಡಿದ್ದ ಪರಿಣಾಮ ಕಾರೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿ ಕಾಲೇಜ್ ವಿದ್ಯಾರ್ಥಿ ಮೃತ ಪಟ್ಟ ಘಟನೆ ಕೇರಳದ ಕಾಸರಗೋಡಿನಲ್ಲಿ ಸಂಭವಿಸಿದೆ.
ಕಾಸರಗೋಡು : ಪೊಲೀಸರು ಚೇಸ್ ಮಾಡಿದ್ದ ಪರಿಣಾಮ ಕಾರೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿ ಕಾಲೇಜ್ ವಿದ್ಯಾರ್ಥಿ ಮೃತ ಪಟ್ಟ ಘಟನೆ ಕೇರಳದ ಕಾಸರಗೋಡಿನಲ್ಲಿ ಸಂಭವಿಸಿದೆ.
ಅಂಗಡಿಮುಗರ್ ಶಾಲೆಯ ಪ್ಲಸ್ ಟು ವಿದ್ಯಾರ್ಥಿ ಕಣ್ಣೂರಿನ ಪೆರಾಲ್ ಫರ್ಹಾಸ್ (17) ಮೃತ ದುರ್ದೈವಿಯಾಗಿದ್ದಾರೆ. ಪುತ್ತಿಗೆ ಪಲ್ಲಂತದಲ್ಲಿ ಈ ಅವಘಡ ಸಂಭವಿಸಿದೆ.
ಓಣಂ ಆಚರಣೆಯ ಅಂಗವಾಗಿ ಫರ್ಹಾಸ್ ಮತ್ತು ಆತನ ಸಹ ವಿದ್ಯಾರ್ಥಿಗಳು ಶಾಲೆಗೆ ಬಂದಿದ್ದರು.
ಫರ್ಹಾಸ್ ಮತ್ತು ಆತನ ವಿದ್ಯಾರ್ಥಿಗಳು ಮಧ್ಯಾಹ್ನ ಮಸೀದಿಗೆ ಹೋಗುತ್ತಿದ್ದಾಗ ಖತೀಬ್ ನಗರದಲ್ಲಿ ಠಿಕಾಣಿ ಹೂಡಿದ್ದ ಕುಂಬಳೆ ಪೊಲೀಸರು ಕಾರನ್ನು ಬೆನ್ನಟ್ಟಿದ್ದರು.
ಕಾರನ್ನು ನಿಲ್ಲಿಸಿದ ನಂತರ, ಅಲ್ಲಿದ್ದ ಪೊಲೀಸ್ ಅಧಿಕಾರಿ ಅವರು ಪ್ರಯಾಣಿಸುತ್ತಿದ್ದ ಕಾರಿನ ಬಾಗಿಲನ್ನು ಒದ್ದು ಫರ್ಹಾಸ್ ಮತ್ತು ಇತರರನ್ನು ನಿಂದಿಸಿದರು.
ಇದರಿಂದ ಗಾಬರಿಗೊಂಡ ವಿದ್ಯಾರ್ಥಿಗಳು ಕಾರನ್ನು ಓಡಿಸಿಕೊಂಡು ಹೋಗಿದ್ದು ಪೊಲೀಸರು ಕಾರನ್ನು ಆರು ಕಿಲೋಮೀಟರ್ ವರೆಗೆ ಬೆನ್ನಟ್ಟಿದ್ದಾರೆ.
ಈ ನಡುವೆ ಕಾರು ನಿಯಂತ್ರಣ ತಪ್ಪಿ ಗದ್ದೆಗೆ ಪಲ್ಟಿಯಾಗಿ ವಿದ್ಯಾರ್ಥಿಗಳು ಗಾಯಗೊಂಡಿದ್ದು ಗಂಭೀರವಾಗಿ ಗಾಯಗೊಂಡಿದ್ದ ಫರ್ಹಾಸ್‌ನನ್ನು ಮೊದಲು ಕುಂಬಳೆ ಆಸ್ಪತ್ರೆಗೆ ರವಾನಿಸಲಾಗಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿತ್ತು.
ಆದರೆ ಬೆನ್ನು ಹುರಿ ಮುರಿದು ಪ್ರಜ್ಞಾಹೀನರಾಗಿದ್ದ ಫರ್ಹಾನ್ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಅಪಘಾತಕ್ಕೆ ಕಾರಣರಾದ ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು ಮತ್ತು ಕೊಲೆ ಪ್ರಕರಣ ದಾಖಲಿಸಬೇಕು ಎಂದು ಮೃತನ ತಾಯಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.