LATEST NEWS
ಕಾಸರಗೋಡು: ಹೈ ಟೆನ್ಶನ್ ತಂತಿ ಮೇಲೆ ಉರುಳಿ ಬಿದ್ದ ಮಸೀದಿ ಮಿನಾರ
ಕಾಸರಗೋಡು, ಫೆಬ್ರವರಿ 15; ರಸ್ತೆ ಅಗಲೀಕರಣಕ್ಕಾಗಿ ಮಸೀದಿ ಕೆಡವುವ ವೇಳೆ ಅಚಾತುರ್ಯವೊಂದು ನಡೆದಿದ್ದು, ವಿದ್ಯುತ್ ಹೈ ಟೆನ್ಶನ್ ತಂತಿ ಮೇಲೆ ಮಸೀದಿ ಮಿನಾರ (ಗೋಪುರ) ಉರುಳಿ ಬಿದ್ದ ಘಟನೆ ನಡೆದಿದೆ.
ಕೇರಳದ ಕಾಸರಗೋಡು ನಗರ ಹೊರವಲಯದ ನುಳ್ಳಿಪ್ಪಾಡಿಯಲ್ಲಿ ಘಟನೆ ನಡೆದಿದ್ದು, ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕಾಗಿ ನಡೆಯುತ್ತಿದ್ದ ಕಾರ್ಯಾಚರಣೆಯಲ್ಲಿ ಮಂಗಳವಾರ ಸಂಜೆ 6 ಗಂಟೆ ವೇಳೆಗೆ ಜೆಸಿಬಿ ಮಸೀದಿಯ ಮೇಲ್ಭಾಗದ ಮಿನಾರ ತೆರವುಗೊಳಿಸುತ್ತಿದ್ದ ಸಂದರ್ಭ ನೇರವಾಗಿ ಹೈಟೆನ್ಶನ್ ವಿದ್ಯುತ್ ತಂತಿ ಮೇಲೆ ಉರುಳಿ ಬಿದ್ದಿದೆ.
ಉರುಳಿ ಬಿದ್ದ ರಭಸಕ್ಕೆ ತಂತಿಗಳು ಸ್ಪರ್ಶಿಸಿ ಶಾರ್ಟ್ ಸರ್ಕ್ಯೂಟ್ ಉಂಟಾಗಿದ್ದು, ಹತ್ತಿರದ ಹತ್ತಾರು ಕಂಬಗಳು ಧರಶಾಹಿಯಾಗಿದೆ. ರಸ್ತೆಯಲ್ಲಿ ಓಡಾಡುತ್ತಿದ್ದ ಹತ್ತಾರು ವಾಹನಗಳ ಮಧ್ಯೆ ವಿದ್ಯುತ್ ಕಂಬಗಳು ಜಖಂ ಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲದೇ ಪಾರಾಗಿದ್ದಾರೆ. ಘಟನೆ ಬಳಿಕ ಕಾಸರಗೋಡು – ಚೆರ್ಕಳ ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಗಿದ್ದದು, ಮುಂಜಾಗ್ರತಾ ಕ್ರಮ ವಹಿಸದೇ ಮಾಡಿದ ಮಹಾ ಎಡವಟ್ಟು ಇದಾಗಿದೆ.
You must be logged in to post a comment Login