Connect with us

    LATEST NEWS

    ಕಾಸರಗೋಡು: ಮಹಿಳೆಯೋರ್ವರ ಮೃತದೇಹ ಬಾವಿಯಲ್ಲಿ ಪತ್ತೆ

    ಕಾಸರಗೋಡು : ಮಹಿಳೆಯೋರ್ವರ ಮೃತದೇಹ ಬಾವಿಯಲ್ಲಿ ಪತ್ತೆಯಾದ ಘಟನೆ ನಗರ ಹೊರವಲಯದ ಬಟ್ಟಂಪಾರೆಯಲ್ಲಿ ನಡೆದಿದೆ.

    ಬಟ್ಟಂಪಾರೆಯ ಎಸ್ . ಶಿವ ರವರ ಪತ್ನಿ ಶರ್ಮಿಳಾ ( 44) ಮೃತ ಮಹಿಳೆ. ಸೋಮವಾರ ರಾತ್ರಿ ಸುಮಾರು11.30 ಗಂಟೆಯ ಬಳಿಕ ಇವರು ಮನೆಯಿಂದ ನಾಪತ್ತೆಯಾಗಿದ್ದರು. ಇದರಿಂದ ಮನೆಯವರು ಹುಡುಕಾಡಿದಾಗ ತಡರಾತ್ರಿ ಮನೆ ಸಮೀಪದ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ.

    ಕಾಸರಗೋಡಿನಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬಂದಿಗಳು ಮೃತ ದೇಹವನ್ನು ಮೇಲಕ್ಕೆತ್ತಿದರು . ಶರ್ಮಿಳಾರ ಪತಿ ಶಿವ ಅಮೈ ರಸ್ತೆ ಬಳಿಯ ಅಕೌಂಟೆಂಟ್ ಕಚೇರಿ ನಡೆಸುತ್ತಿದ್ದು ಇದೇ ಕಚೇರಿಯಲ್ಲಿ ಶರ್ಮಿಳಾ ಕೂಡಾ ಅಕೌಂಟೆಂಟ್ ಆಗಿ ದುಡಿಯುತ್ತಿದ್ದರು. ಕಾಸರಗೋಡು ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply