LATEST NEWS
ಕಾಸರಗೋಡು ದೋಣಿ ದುರಂತ, ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಕೂಡ ಪತ್ತೆ, 2 ಕ್ಕೇರಿದ ಮೃತರ ಸಂಖ್ಯೆ..!!
ಕಾಸರಗೋಡು : ಕಾಸರಗೋಡಿನ ಅರಬ್ಬಿ ಸಮುದ್ರದಲ್ಲಿ ನಡೆದ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಮೀನುಗಾರ ನಜೀಬ್ ಶವ ಪೂಂಜಾವಿ ತೀರದಲ್ಲಿ ಗುರುವಾರ ಪತ್ತೆಯಾಗಿದೆ. ಈ ಮೂಲಕ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಎರಡಕ್ಕೇರಿದೆ.
ನೌಕಾಪಡೆ , ಕರಾವಳಿ ಕಾವಲು ಪಡೆ, ಮೀನುಗಾರರು ನಿರಂತರ ಶೋಧ ನಡೆಸಿದ್ದರು. ಜಿಲ್ಲಾಧಿಕಾರಿ ಕೆ. ಇಂಪಾಶೇಖರ್, ಎಂ.ರಾಜ ಗೋಪಾಲ್, ಜಿಲ್ಲಾ ಪೊಲೀಸ್ ಮುಖ್ಯಸ್ಥ ಡಿ.ಶಿಲ್ಪಾ ನೇತೃತ್ವ ನೀಡಿದ್ದರು. ದುರಂತ ದಲ್ಲಿ ಅಬೂಬಕ್ಕರ್ , ಮತ್ತು ನಜೀಬ್ ಮೃತಪಟ್ಟಿದ್ದರು. ದುರಂತ ಕ್ಕೀಡಾ ಫೈಬರ್ ಬೋಟ್ ನ ಅರ್ಧ ಭಾಗ ಆಯಿತ್ತಲ ಸಮೀಪದ ಕಡಲ ಕಿನಾರೆ ಯಲ್ಲಿ ಗುರುವಾರ ಪತ್ತೆಯಾಗಿದೆ. ಬುಧವಾರ ಮಧ್ಯಾಹ್ನ ಆಯಿತ್ತಲ ಸಮುದ್ರದಲ್ಲಿ ಫೈಬರ್ ಬೋಟ್ ದುರಂತ ಕ್ಕೀಡಾಗಿ ದೋಣಿಯಲ್ಲಿದ್ದ 37 ಮಂದಿ ಸಮುದ್ರಪಾಲಾಗಿದ್ದರು. ಇದರಲ್ಲಿ 35 ಮಂದಿಯನ್ನು ರಕ್ಷಿಸಲಾಗಿತ್ತು. ಕರಾವಳಿ ಪೊಲೀಸರು, ಮೀನುಗಾರರು ಕಾರ್ಯಾಚರಣೆ ನಡೆಸಿ ಸಮುದ್ರಪಾಲಾದವರನ್ನು ಮೇಲಕ್ಕೆತ್ತಿ ರಕ್ಷಿಸಿದರು. ಓರ್ವ ಮೃತಪಟ್ಟು, ಓರ್ವ ನಾಪತ್ತೆ ಯಾಗಿದ್ದರು.
You must be logged in to post a comment Login