KARNATAKA
ಕಾರವಾರ ಶಿಕ್ಷಕನ ಬಲಿ ಪಡೆದ ಲಾರಿ
ಕಾರವಾರ ಡಿಸೆಂಬರ್ 22: ಲಾರಿಯೊಂದು ಬೈಕ್ ಗೆ ಗುದ್ದಿದ ಪರಿಣಾದ ಬೈಕ್ ಲ್ಲಿ ಸವಾರ ಸ್ಧಳದಲ್ಲೇ ಸಾವನಪ್ಪಿದ ಘಟನೆ ನಗರದ ಮಧ್ಯಭಾಗದ ಹಬ್ಬುವಾಡ ರಸ್ತೆಯಲ್ಲಿ ನಡೆದಿದೆ. ಮೃತರನ್ನು ಶಾಲೆಗೆ ಹೋಗುತ್ತಿದ್ದ ಶಿಕ್ಷಕ ಉಮೇಶ್ ಗುನಗಿ (50) ಎಂದು ಗುರುತಿಸಲಾಗಿದೆ.
ಇವರು ಶುಕ್ರವಾರ ಬೆಳಿಗ್ಗೆ ತನ್ನ ತಂದೆಯನ್ನು ಚಿಕಿತ್ಸೆಗಾಗಿ ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಬಳಿಕ ದೇವಳಮಕ್ಕಿ ಶಾಲೆ ತೆರಳುತ್ತಿದ್ದರು. ಈ ವೇಳೆ ಅತೀವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಬಂದ ಲಾರಿ ಚಾಲಕ, ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದಲ್ಲಿ ಶಿಕ್ಷಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಅಪಘಾತದಲ್ಲಿ ಮೃತರ ಕಡೆಯವರು, ಸಾರ್ವಜನಿಕರು ಅವೈಜ್ಞಾನಿಕವಾಗಿ ನಡೆಯುತ್ತಿರುವ ರಸ್ತೆ ಕಾಮಗಾರಿಯೇ ಅಪಘಾತಕ್ಕೆ ಕಾರಣ ಎಂದು ಆಕ್ರೋಶ ಹೊರಹಾಕಿದ್ದರು. ಅಪಘಾತ ನಡೆದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಣ ಮಾಡುತ್ತಿದ್ದಾರೆ. ಟ್ರಾಫಿಕ್ ಪೊಲೀಸರು ಅಪಘಾತದ ವಿವರ ಪಡೆದು ಪ್ರಕರಣ ದಾಖಲಿಸುತ್ತಿದ್ದಾರೆ.
You must be logged in to post a comment Login