LATEST NEWS
ಕರ್ನಾಟಕ ರಾಜ್ಯ ಕ್ರೀಡಾ ನೀತಿ 2018 ರ ಪ್ರಮುಖ ಅಂಶಗಳು
ಕರ್ನಾಟಕ ರಾಜ್ಯ ಕ್ರೀಡಾ ನೀತಿ 2018 ರ ಪ್ರಮುಖ ಅಂಶಗಳು
ಕರ್ನಾಟಕ ರಾಜ್ಯ ಕ್ರೀಡಾ ನೀತಿಯು ನಾಲ್ಕು ಸ್ಥಂಭಗಳನ್ನು ಮತ್ತು 17 ಗುರಿಗಳನ್ನು ಹೊಂದಿದೆ.
ದೃಷ್ಟಿಕೋನ:
“ಕರ್ನಾಟಕ ರಾಜ್ಯದಲ್ಲಿ ಒಂದು ಸ್ಪರ್ಧಾತ್ಮಕ, ಸೂಕ್ತ, ಶಕ್ತಿಯುತವಾದ ವಾತಾವರಣವನ್ನು ನಿರ್ಮಾಣ ಮಾಡಿ ಕರ್ನಾಟಕದ ಜನತೆ ವಿಶಾಲ ಕ್ರೀಡಾ ಸಂಸೃತಿಯ ಅನುಭವವನ್ನು ಪಡೆಯುವುದಾಗಿದೆ ಮತ್ತು ಆರ್ಥಿಕ ವ್ಯವಸ್ಥೆಯನ್ನು ಸ್ವತಃ ನಿರ್ವಹಿಸಲು ಮತ್ತು ಆಟವಾಡಲು ಬಯಸುವ ಎಲ್ಲರೂ ಅವುಗಳನ್ನು ಅನುಭವಿಸಲು ಒಂದು ಸೂಕ್ತವಾದ ವೇದಿಕೆಯನ್ನು ಸೃಷ್ಟಿಸುವುದಾಗಿದೆ.”
ಕ್ರೀಡಾ ನೀತಿಯ ಮೌಲ್ಯಗಳು:
“ಉನ್ನತಿಗಾಗಿ ಕ್ರೀಡೆ”ಯು ಉನ್ನತಿಗಾಗಿ ಕ್ರೀಡೆಯಂತೆಯೇ ಸಮಾನವಾದ ಒತ್ತು ನೀಡಲಾಗಿದೆ; ಮತ್ತು ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮವಾದ ಬೆಳವಣಿಗೆಯನ್ನು ಕಾಣಲು ಅಗತ್ಯವಾದ ಸಹಾಯ ಮತ್ತು ಮಾರ್ಗವನ್ನು ತೋರಿಸುವುದಾಗಿದೆ.
“ಕ್ರೀಡಾ ಸಂಸ್ಕೃತಿ”ಯನ್ನು ಬೆಳೆಸಲು ಉತ್ತಮತೆ ಮತ್ತು ಅವಕಾಶಗಳನ್ನು ಒದಗಿಸುವುದು ಸಹಕಾರಿಯಾಗುತ್ತದೆ ಮತ್ತು ರಾಜ್ಯದಲ್ಲಿ ಕ್ರೀಡಾ ಸಂಸ್ಥೆಗಳನ್ನು ಬೆಳೆಸಲು ಮತ್ತು ಎಲ್ಲಾ ಕ್ರೀಡಾಸಕ್ತ ವಿದ್ಯಾರ್ಥಿಗಳು, ಅವರ ಪೋಷಕರು, ಶಾಲೆಗಳು ಮತ್ತು ಇತರೆ ಸಂಘಸಂಸ್ಥೆಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳನ್ನು ಬಲಪಡಿಸುವುದಾಗಿದೆ.
ಕ್ರೀಡಾ ಸಂಸ್ಕೃತಿಯನ್ನು “ಕ್ರೀಡಾ ಪರಿಸರ ವ್ಯವಸ್ಥೆ”ಯ ಮೂಲಕ ಜಾರಿಗೊಳಿಸಬಹುದಾಗಿದ್ದು, ಇದನ್ನು ಸಾಮಾಜಿಕ ಮತ್ತು ಕ್ರೀಡಾ ಕೈಗಾರಿಕೆಗಳು, ಕ್ರೀಡಾ ಶಿಕ್ಷಣ ಮತ್ತು ಕ್ರೀಡಾ ಉದ್ಯಮದಿಂದ ಸಾಧಿಸಬಹುದಾಗಿದೆ.
ಉದ್ದೇಶ:
ಕರ್ನಾಟಕದಲ್ಲಿ ಬೆಳೆದ ಅಥ್ಲ್ಲೀಟ್‍ಗಳು ಕನಿಷ್ಟ 4 ಚಿನ್ನದ ಪದಕಗಳನ್ನು ಒಲಪಿಂಕ್ಸ್/ಪ್ಯಾರಾಲಂಪಿಕ್ಸ್‍ನಲ್ಲಿ ಜಯಿಸುವುದು; ಮತ್ತು ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪ್ರತಿ ಬಾರಿಯೂ ಮೊದಲ 3ನೇ ಸ್ಥಾನ ಗಳಿಸುವುದು
ನಾಲ್ಕು ಸ್ಥಂಭಗಳು:
1. ಆಡಳಿತ ಮತ್ತು ಸಂಸ್ಥೆಗಳು
2. ಕ್ರೀಡಾ ಪರಿಸರ ವ್ಯವಸ್ಥೆ
3. ಭೌತಿಕ ಕ್ರೀಡಾ ಮೂಲಭೂತ ಸೌಕರ್ಯಗಳು
4. ಮಾನವೀಕ ಸೌಲಭ್ಯಗಳು
ಆಡಳಿತ ಮತ್ತು ಸಂಸ್ಥೆಗಳು
ಕರ್ನಾಟಕ ರಾಜ್ಯವು ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಅತ್ಯುತ್ತಮ ಅಭ್ಯಾಸಗಳನ್ನು ಕ್ರೀಡೆ ಮತ್ತು ಕ್ರೀಡಾ ಪ್ರಾಧಿಕಾರಗಳಲ್ಲಿ ಅಳವಡಿಸಿಕೊಳ್ಳುವುದು ಮತ್ತು ರಾಷ್ಟ್ರೀಯ ನೀತಿ ಮತ್ತು ನ್ಯಾಯಾಲಯದ ತೀರ್ಪುಗಳಿಗೆ ಬದ್ಧರಾಗಿರುವುದು.
ಕರ್ನಾಟಕ ರಾಜ್ಯವು ಸಮಾಜದಲ್ಲಿ ಯಾವುದೇ ಭೇದ-ಭಾವವಿಲ್ಲದೆ ಎಲ್ಲರಿಗೂ ಸೂಕ್ತವಾದ ಮತ್ತು ಸಮಾನವಾದ ವಾತಾವರಣಗಳನ್ನು ಕಲ್ಪಿಸುವ ಸಲುವಾಗಿ ಅಗತ್ಯವಾದ ನೀತಿಗಳನ್ನು ಮತ್ತು ಅಗತ್ಯವಾದ ಕಾನೂನುಗಳನ್ನು ಪರಿಚಯಿಸುವುದು.
ಕ್ರೀಡಾ ಕ್ಷೇತ್ರದಲ್ಲಿ ಎಲ್ಲಾ ರೀತಿಯ ಮೋಸ ವಂಚನೆಗಳನ್ನು ತಡೆಗಟ್ಟುವ ಸಲುವಾಗಿ ಮತ್ತು ಕ್ರೀಡಾ ಒಗ್ಗಟ್ಟನ್ನು ಬೆಳೆಸುವ ಸಂಬಂಧ ನಿಯಮ ಮತ್ತು ಅಗತ್ಯವಾದ ಕಾನೂನುಗಳನ್ನು ರೂಪಿಸುವುದು.
ಕ್ರೀಡಾ ಪರಿಸರ ವ್ಯವಸ್ಥೆ:
ಕರ್ನಾಟಕದ ಜಿ.ಡಿ.ಪಿಗಾಗಿ ಕ್ರೀಡಾ ಉದ್ದಿಮೆ, ಕ್ರೀಡಾ ವ್ಯಾಪಾರ, ಕ್ರೀಡಾ ಉದ್ಯಮಶೀಲತೆಯನ್ನು ಸುಮಾರು ರೂ.5000 ಕೋಟಿಯಷ್ಟು ವಾರ್ಷಿಕವಾಗಿ ಒದಗಿಸುವುದು.
ಕರ್ನಾಟಕ ಕ್ರೀಡಾ ಪ್ರಾಧಿಕರದ ಆಡಳಿತ ವೈಖರಿಯಲ್ಲಿ ವೃತ್ತಿಪರತೆಯನ್ನು ತಂದು ಬಲಪಡಿಸಲಾಗುವುದು.
ಬೆಂಗಳೂರನ್ನು ಪ್ರಮುಖ ರಾಷ್ಟ್ರೀಯ ಕ್ರೀಡಾ ಹಬ್ ಆಗಿ ಅಭಿವೃದ್ಧಿಪಡಿಸಿ ಪ್ರಪಂಚದ ಮೊದಲ 10 ಸ್ಥಾನಗಳಲ್ಲಿರುವಂತೆ ಮಾಡುವುದಾಗಿದೆ. ಬೆಂಗಳೂರನ್ನು ಕ್ರೀಡಾ ವಿಜ್ಞಾನ ಕೇಂದ್ರ ಮತ್ತು ಕ್ರೀಡಾ ತಾಂತ್ರಿಕ ಕೇಂದ್ರವಾಗಿ ಸಹ ಅಭಿವೃದ್ಧಿಪಡಿಸಲಾಗುವುದು
ಕ್ರೀಡಾ ಭೌತಿಕ ಮೂಲಭೂತ ಸೌಕರ್ಯಗಳು:
ಅಂತರಾಷ್ಟ್ರೀಯ ಗುಣಮಟ್ಟದ ಸೌಕರ್ಯಗಳನ್ನು ಒದಗಿಸುವ ಮೂಲಕ ಬೆಂಗಳೂರು ಒಂದು ಅತ್ಯುತ್ತಮವಾದ ಕ್ರೀಡಾ ಶ್ರೇಷ್ಠತಾ ಕೇಂದ್ರವಾಗಿ ಅಭಿವೃದ್ಧಿ ಹೊಂದಲಿದೆ.
ಕರ್ನಾಟಕ ರಾಜ್ಯದ ಪ್ರತಿಯೊಂದು ತಾಲ್ಲೂಕು ಮತ್ತು ನಗರಸಭೆಯು ಕನಿಷ್ಟ ಒಂದು ಸಮುದಾಯ ಕ್ರೀಡಾ ಕೇಂದ್ರವನ್ನು ಹೊಂದುವುದು ಮತ್ತು ಪ್ರತಿಯೊಂದು ಜಿಲ್ಲೆಯೂ ವೃತ್ತಿಪರತೆಯಿಂದ ನಿರ್ವಹಣೆಯಾಗುವ ಬಹು-ಕ್ರೀಡಾ ತರಬೇತಿ ಕೇಂದ್ರ, ಒಲಂಪಿಕ್ ಗುಣಮಟ್ಟದ ಈಜುಕೊಳ ದೊಂದಿಗೆ, ಅಗತ್ಯವಾದ ಸಲಕರಣೆಗಳು, ನುರಿತ ಪರಿಣಿತ ತರಬೇತಿದಾರರು, ಆಡಳಿತ ಮಾಹಿತಿ ವ್ಯವಸ್ಥೆ ಮತ್ತು ಸಮುದಾಯ ಕಾರ್ಯಕ್ರಮಗಳನ್ನು ಹೊಂದಿರುವುದು.
ಕರ್ನಾಟಕ ರಾಜ್ಯದಲ್ಲಿ 18 ವರ್ಷ ಮತ್ತು ಮೇಲ್ಪಟ್ಟ ಕ್ರೀಡಾಪಟುಗಳಿಗಾಗಿ ಅಂತರಾಷ್ಟ್ರೀಯ ಗುಣಮಟ್ಟದ ತರಬೇತಿ ಸೌಲಭ್ಯಗಳನ್ನು ಒಳಗೊಂಡ ಕ್ರೀಡಾ ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸುವುದು,
ಇದರಲ್ಲಿ ಮತ್ತು ಕ್ರೀಡಾ ವೃತ್ತಿಪರತೆ, ಆಡಳಿತ ಮತ್ತು ಕ್ರೀಡಾ ನಿರ್ವಹಣೆ ವಿಷಯಗಳನ್ನು ಭೋದಿಸಲು ಕಾಲೇಜು/ ವಿಶ್ವವಿದ್ಯಾಲಯಗಳನ್ನು ಹೊಂದುವುದು.
ಮಾನವೀಕ ಸೌಲಭ್ಯಗಳು:
ಕರ್ನಾಟಕ ರಾಜ್ಯದಲ್ಲಿ ಅರ್ಹ ಕ್ರೀಡಾ ತರಬೇತುದಾರರ ಸಂಖ್ಯೆಯನ್ನು ಅಗತ್ಯಾನುಸಾರ ಕಾಲಕಾಲಕ್ಕೆ ಹೆಚ್ಚಿಸುವುದು.
ಕರ್ನಾಟಕ ರಾಜ್ಯವನ್ನು ಕ್ರೀಡಾಪಟುಗಳಿಗೆ ಅವಶ್ಯಕವಾದ ಕ್ರೀಡಾ ವಿಜ್ಞಾನಕ್ಕೆ ಸಂಬಂಧಪಟ್ಟ ಸೇವಗಳಿಗೆ ಜಾಗತಿಕ ಕೇಂದ್ರವನ್ನಾಗಿ ಮಾಡುವುದು.
ಈ ಕೇಂದ್ರವು ಪರಿಣಿತ ಅನುಭವಿ ಫಿಸಿಯೋ ಥೆರಪಿಸ್ಟ, ವೈದ್ಯರು ಮತ್ತು ಮನೊವೈಜ್ಞಾನಿಕ ಸಲಹೆಗಾರರನ್ನು ಒಳಗೊಂಡಿರುವುದು.
ರಾಜ್ಯದಲ್ಲಿರುವ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಣವನ್ನು ಕಡ್ಡಾಯಗೊಳಿಸುವುದು ಮತ್ತು ಕರ್ನಾಟಕ ರಾಜ್ಯದಲ್ಲಿನ 100% ರಷ್ಟು ಮಕ್ಕಳು ಅಂದರೆ 6-14 ವರ್ಷದ ಮಕ್ಕಳು ದಿನಕ್ಕೆ ಕನಿಷ್ಟ ಳಿ ಗಂಟೆ ದೈಹಿಕ ಚಟುವಟಿಕೆ/ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದು.
ಅವರುಗಳಿಗೆ ಹಾಲು, ಮೊಟ್ಟೆ ಅಥವಾ ಹಣ್ಣುಗಳನ್ನು ನೀಡುವುದರ ಮೂಲಕ ಅವರು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಉತ್ತೇಜಿಸುವುದು.
ಪ್ರಾಥಮಿಕ ಶಾಲಾ ಮಟ್ಟದಿಂದ ಪದವಿಪೂರ್ವ ಮಟ್ಟದವರೆಗೂ ಪ್ರತಿ ದಿನ 60 ನಿಮಿಷಗಳ ಕಾಲ ಕ್ರೀಡಾ ಶಿಕ್ಷಣವನ್ನು ಕಡ್ಡಾಯಗೊಳಿಸುವುದು.
ಕರ್ನಾಟಕದಾದ್ಯಂತ ಎಲ್ಲಾ ಶಾಲೆಗಳು ದೈಹಿಕ ಶಿಕ್ಷಣ ಶಿಕ್ಷಕರನ್ನು ಹೊಂದುವ ಗುರಿಯತ್ತ ಕಾರ್ಯನಿರ್ವಹಿಸುವುದು.
ಪ್ರತಿಭಾನ್ವೇಷಣೆಯನ್ನು ಈ ಕೆಳಕಂಡ ಮೂರು ಹಂತಗಳಲ್ಲಿ ಮಾಡಲಾಗುವುದು.
ಹಂತ-1: ದೈಹಿಕ ಶಿಕ್ಷಕರಿಂದ ಗುರುತಿಸಲ್ಪಟ್ಟ ಶಾಲಾ ಮಕ್ಕಳು ಹಲವಾರು ಪರೀಕ್ಷೆಗಳಿಗೆ ಒಳಪಡುತ್ತಾರೆ ಅಂದರೆ ಅವರುಗಳ ಶಕ್ತಿ, ಸಾಮಥ್ರ್ಯ, ವೇಗ ಇವುಗಳನ್ನು ಅವರ ವಯೋಮಾನಕ್ಕೆ ನಿರ್ದಿಷ್ಟಪಡಿಸಿದಂತೆ ನಡೆಸಲಾಗುವುದು.
ಈ ಹಂತವನ್ನು ಪ್ರತಿ ತಾಲ್ಲೂಕು ಮಟ್ಟದಲ್ಲಿ ಕಾಲಕಾಲಕ್ಕೆ ಸಮುದಾಯ ತರಬೇತುದಾರರಿಂದ ನಡೆಸಲಾಗುವುದು.
ಹಂತ-2: ಒಂದನೇ ಹಂತದಲ್ಲಿ ಅರ್ಹತೆ ಗಳಿಸಿದ ಅಥ್ಲೀಟ್‍ಗಳನ್ನು ಅವರ ಮುಂದಿನ ಪ್ರತಿಭೆಯನ್ನು ಗುರುತಿಸಲು ಜಿಲ್ಲಾ ಮಟ್ಟದ ಪರೀಕ್ಷೆಗಳಿಗೆ ಕರೆತರಲಾಗುವುದು.
ಇಂತಹ ಪರೀಕ್ಷೆಗಳನ್ನು ಜಿಲ್ಲಾ ಮಟ್ಟದಲ್ಲಿ ಮಾಧ್ಯಮಿಕ ತರಬೇತುದಾರರಿಂದ ನಡೆಸಲಾಗುವುದು.
ಹಂತ-3: ಎರಡನೇ ಹಂತದಲ್ಲಿ ಅರ್ಹತೆ ಗಳಿಸಿದ ಅಥ್ಲೀಟ್‍ಗಳನ್ನು ಅಂತಿಮವಾಗಿ ಉನ್ನತ ಸಾಧನಾ ಘಟಕದಲ್ಲಿ ಸೂಕ್ತವಾದ ತರಬೇತುದಾರರಿಂದ ಪರೀಕ್ಷೆಗೆ ಒಳಪಡಿಸಲಾಗುವುದು.
ಈ ಮೂರೂ ಹಂತಗಳಲ್ಲಿ ಅರ್ಹತೆ ಗಳಿಸಿದ ಅಥ್ಲೀಟ್‍ಗಳು ಕಾರ್ಡೆಡ್ ಅಥ್ಲೀಟ್‍ಗಳಾಗುತ್ತಾರೆ ಮತ್ತು ಇವರು ಅನುದಾನ, ತರಬೇತಿ ಮುಂತಾದ ನೆರವಿಗೆ ಅರ್ಹರಾಗುತ್ತಾರೆ. (ಅಥ್ಲೀಟ್ ಕಾರ್ಡಿಂಗ್ ವ್ಯವಸ್ಥೆ)
ಕ್ರೀಡಾಪಟುಗಳಿಗೆ ಶೈಕ್ಷಣಿಕ ನೆರವು:
ಗ್ರೇಸ್ ಮಾಕ್ರ್ಸ್ / ಹೆಚ್ಚುವರಿ ಅಂಕಗಳು: ಪ್ರತಿಯೊಂದು ವಿಷಯಗಳಲ್ಲೂ ಪ್ರಾಥಮಿಕ ಶಾಲೆಯಿಂದ ವಿಶ್ವವಿದ್ಯಾಲಯದವರೆಗೂ (ಸಾಧನೆಗೆ ಅನುಗುಣವಾಗಿ ಪ್ರತಿಯೊಂದು ವಿಷಯದಲ್ಲೂ ಗರಿಷ್ಟ 25 ಅಂಕಗಳು: ಅಂತರಾಷ್ಟ್ರೀಯ-25 ಗರಿಷ್ಟ, ಮತ್ತು ರಾಷ್ಟ್ರೀಯ-15 ಗರಿಷ್ಟ ಮತ್ತು ರಾಜ್ಯ-10).
ಹಾಜರಾತಿ ರಿಯಾಯಿತಿ: ತರಬೇತಿ ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸಿದ ಅವಧಿಗೆ.
ಒಂದು ವೇಳೆ ಪರೀಕ್ಷೆ ಮತ್ತು ಪ್ರಾಂತೀಯ, ರಾಷ್ಟ್ರೀಯ ಅಥವಾ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗಳ ದಿನಾಂಕಗಳು ಒಂದೇ ದಿನ ಬಂದಲ್ಲಿ, ಕ್ರೀಡಾಪಟುಗಳಿಗೆ ಪ್ರತ್ಯೇಕವಾದ ಪರೀಕ್ಷೆಯನ್ನು ನಡೆಸುವುದು.
ಸಾಮಾನ್ಯ ಪ್ರವೇಶ ಪರೀಕ್ಷೆ (ಸಿ.ಇ.ಟಿ) ಮೂಲಕ ಕ್ರೀಡಾ ಮೀಸಲಾತಿ ಅಡಿಯಲ್ಲಿ ಕ್ರೀಡಾಪಟುಗಳಿಗೆ ಪ್ರವೇಶಾತಿ.
ಒಲಂಪಿಕ್ ಕ್ರೀಡೆಗಳಲ್ಲಿ ವೈಯಕ್ತಿಕ ಮತ್ತು ತಂಡ ಇವುಗಳ ಅನುಸಾರ ಆದ್ಯತೆಯನ್ನು ನೀಡುವುದು. ವೈಯಕ್ತಿಕ ಕ್ರೀಡೆಯು ಹೆಚ್ಚಿನ ಆದ್ಯತೆಯನ್ನು ಪಡೆಯುತ್ತದೆ.
ಸಿ.ಇ.ಟಿ. ಶಿಫಾರಸ್ಸನ್ನು ಕರ್ನಾಟಕ ಒಲಂಪಿಕ್ ಸಂಸ್ಥೆಯು ಒಪ್ಪುವುದು ಮತ್ತು ಅಂತಿಮವಾಗಿ ಡಿ.ವೈ.ಇ.ಎಸ್. ರವರು ಅನುಮೋದಿಸುತ್ತಾರೆ.
ಕ್ರೀಡಾಪಟುಗಳಿಗೆ ವೃತ್ತಿಪರ ಕ್ರೀಡಾ ಜೀವನದ ನಂತರದಲ್ಲಿ ನೆರವು.
• ಎಲ್ಲಾ ಮಾಜಿ ಕ್ರೀಡಾಪಟುಗಳಿಗೆ ಪಿಂಚಣಿ ಯೋಜನೆ (ನಿಗಧಿತ ವಾರ್ಷಿಕ ವರಮಾನಕ್ಕಿಂತ ಕಡಿಮೆ ಇರುವವರಿಗೆ) ಮತ್ತು ಸದರಿ ಪಿಂಚಣಿ ಯೋಜನೆಯು ಪ್ರತಿ ಎರಡು ವರ್ಷಗಳಿಗೊಮ್ಮೆ ಪರಿಶೀಲಿಸಲ್ಪಡುವುದು.
• ವಸತಿ ನಿವೇಶನಗಳ ಹಂಚಿಕೆ / ಒಲಂಪಿಕ್ಸ್ / ಪ್ಯಾರಾಲಂಪಿಕ್ಸ್‍ನಲ್ಲಿ ಪದಕಗಳನ್ನು ಗೆದ್ದಿರುವವರು ಅಥವಾ ಏಷಿಯನ್/ಕಾಮನ್‍ವೆಲ್ತ್ ಆಟಗಳಲ್ಲಿ ಚಿನ್ನದ ಪದಕ ಗೆದ್ದಿರುವವರಿಗೆ ನಿವೇಶನಗಳ ಹಂಚಿಕೆಯಲ್ಲಿ ಆದ್ಯತೆ ಒದಗಿಸಲು ಪ್ರಯತ್ನಿಸುವುದು.
• ನಿವೃತ್ತ ಅಥ್ಲೀಟ್‍ಗಳಿಗೆ ರಾಜ್ಯದ ಸ್ಟ್ರಾಟಜಿಕ್ ಕೋಚ್ ಡೆವಲಪ್‍ಮೆಂಟ್ ಕಾರ್ಯಕ್ರಮದಲ್ಲಿ ಸಕ್ರಿಯ ನೇಮಕಾತಿ.
• ರಾಜ್ಯ ಸರ್ಕಾರಿ ಸೇವೆಗೆ ನೇರ ನೇಮಕಾತಿ.
ದರ್ಜೆ-1 ಪತ್ರಾಂಕಿತ ಅಧಿಕಾರಿ: ಒಲಂಪಿಕ್ಸ್‍ನಲ್ಲಿ ಪದಕ ಗೆದ್ದಿರುವ ಕ್ರೀಡಾಪಟು ಮತ್ತು
ದರ್ಜೆ-2 ಪತ್ರಾಂಕಿತ ಅಧಿಕಾರಿ, ಏಷಿಯನ್ ಗೇಮ್ಸ್ ಮತ್ತು ಕಾಮನ್‍ವೆಲ್ತು ಗೇಮ್ಸ್‍ಗಳಲ್ಲಿ ಪದಕ ಗೆದ್ದಿರುವವರು ಇವರಿಗೆ ಅವರ ವಿದ್ಯಾಭ್ಯಾಸ, ಅಸಕ್ತಿ, ಪರಿಣಿತಿಗೆ ಸಂಬಂಧಪಟ್ಟಂತೆ ಅವರ ಸಾಧನೆಯ ಅನುಸಾರ ರಾಜ್ಯ ಸರ್ಕಾರಿ ಇಲಾಖೆಗಳಲ್ಲಿ ಒದಗಿಸುವುದು.
ಮೀಸಲಾತಿ
ಒಲಂಪಿಕ್‍ನಲ್ಲಿರುವ ಕ್ರೀಡೆಗಳಲ್ಳಿ ಸಾಧನೆ ಮಾಡಿದ ಕ್ರೀಡಪಟುಗಳಿಗೆ ಅವರ ವಿದ್ಯಾರ್ಹತೆ ಪ್ರಕಾರ ರಾಜ್ಯ ಸರ್ಕಾರದ ಎಲ್ಲಾ ಇಲಾಖೆ, ಮಂಡಳಿ ಮತ್ತು ಕಾರ್ಪೊರೇಷನ್‍ಗಳಲ್ಲಿ ಸಿ ಮತ್ತು ಡಿ ವರ್ಗದಲ್ಲಿ 3% ಮೀಸಲಾತಿ.
ಖಾಸಗಿ ಕ್ಷೇತ್ರಗಳಲ್ಲಿ ಲಾಭದಾಯಕ ವೃತ್ತಿಯನ್ನು ಪಡೆಯಲು ಅನುಕೂಲವಾಗುವಂತೆ ತರಬೇತಿ ಶಿಬಿರ ಮತ್ತು ಉದ್ಯೋಗ ಮೇಳಗಳನ್ನು ನಡೆಸುವುದು.
ಖಾಸಗಿ ಕ್ಷೇತ್ರ ಮತ್ತು ಸರ್ಕಾರೇತರ ಸಂಸ್ಥೆಗಳಿಂದ ತರಬೇತಿ ಕಾರ್ಯಕ್ರಮಗಳಿಗೆ ಸಹಾಯ
ಬ್ರಾಂಡ್ ಅಂಬಾಸಿಡರ್ಸ್:
ಖ್ಯಾತ ಕ್ರೀಡಾಪಟುಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವುದು.
ಕ್ರೀಡಾ ವಿಜ್ಞಾನ/ಔಷಧ:
ಕ್ರೀಡಾಪಟುಗಳು ಅತ್ಯುತ್ತಮ ಸಾಧನೆಯನ್ನು ತೋರುವಲ್ಲಿ ಮತ್ತು ಕಾಪಾಡುವಲ್ಲಿ ಕ್ರೀಡಾ ವಿಜ್ಞಾನ/ಔಷಧಗಳು ಅವಶ್ಯಕವಾಗಿರುತ್ತವೆ. ಕ್ರೀಡಾ ವಿಜ್ಞಾನ/ಔಷಧಗಳು ಆರ್ಥೊಪೆಡಿಕ್, ಫಿಸಿಯೋಥೆರಪಿ, ಟ್ರೈನರ್ಸ್, ನ್ಯೂಟ್ರಿಷಿಯನ್, ಬಯೋಮೆಕಾನಿಕ್ಸ್, ಟ್ರೈನಿಂಗ್ ಮೆಥಡ್, ರೀಹ್ಯಾಬಿಲಿಟೇಷನ, ಮತ್ತು ಚಿಕಿತ್ಸೆ ಮತ್ತು ಗಾಯಗಳ ಸಂಬಂಧಿತ ಕ್ರೀಡೆ ಮತ್ತು ವ್ಯಾಯಾಮಗಳನ್ನು ಒಳಗೊಂಡಿರುತ್ತದೆ.
ಖಾಸಗಿ ಸಂಸ್ಥೆಗಳ ತೊಡಗಿಸುವಿಕೆ
ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ಇತರೆ ಕ್ರೀಡಾ ಮನೋರಂಜನಾ ಕ್ಷೇತ್ರದಲ್ಲಿ ಕಾರ್ಪೊರೇಟ್ ಸಂಸ್ಥೆಗಳು ಉತ್ತೇಜನ ನೀಡುತ್ತಿದ್ದು, ಇವುಗಳು ಕ್ರೀಡೆಯ ಮೇಲೆ ಹೂಡಿಕೆ ಮಾಡಲು ಸಾಮಥ್ರ್ಯ ಉಳ್ಳವರಾಗಿರುತ್ತಾರೆ.. ಅಲ್ಲದೆ ಕಾರ್ಪೊರೇಟ್ ಸಂಸ್ಥೆಗಳು ಕ್ರೀಡೆಯ ಮೇಲೆ ಬಂಡವಾಳ ಹೂಡುವುದನ್ನು ತಮ್ಮ ಸಾಮಾಜಿಕ ಜವಾಬ್ದಾರಿ ಸೇವೆ (ಸಿ.ಎಸ್.ಆರ್) ರ ಒಂದು ಭಾಗವಾಗಿರುತ್ತದೆ. ಖಾಸಗಿ ಸಂಸ್ಥೆಗಳಿಂದ ಬಂಡವಾಳ ಕ್ರೂಢೀಕರಿಸಿ ಕ್ರೀಡೆ ಮತ್ತು ಕ್ರೀಡಾಪಟುಗಳ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗುವುದು
ತರಬೇತುದಾರರ ಅಭಿವೃದ್ಧಿ ಕಾರ್ಯಕ್ರಮ:
ನಾಲ್ಕು ಪ್ರಮುಖ ಅಂಶಗಳ ಬಗ್ಗೆ ಗಮನ ಹರಿಸುತ್ತದೆ.
• ಸೂಕ್ತ ತರಬೇತಿ ಪ್ರತಿಭೆಯನ್ನು ಗುರುತಿಸುವುದು.
• ನಿರಂತರ ತರಬೇತಿ ವಿಧಾನ ಮತ್ತು ತರಬೇತಿ ಶಿಕ್ಷಣ
• ಗುಣಮಟ್ಟ ಅಭಿವೃದ್ಧಿ ಕಾರ್ಯಕ್ರಮಗಳು
• ಭವಿಷ್ಯ ರೂಪಿಸುವುದು, ಬಹುಮಾನಗಳು ಮತ್ತು ಉತ್ತೇಜನಗಳು.
ಇವುಗಳನ್ನು ಅಕಾಡೆಮಿಗಳು, ರಾಷ್ಟ್ರೀಯ ಮತ್ತು ರಾಜ್ಯ ಕ್ರೀಡಾ ಫೆಡರೇಷನ್, ಹಾಲಿ ಇರುವ ಅತ್ಯುತ್ತಮ ತರಬೇತಿದಾರರು ಮತ್ತು ಶಿಕ್ಷಣ ಸಂಸ್ಥೆಗಳ ಪಾಲುದಾರಿಕೆಯೊಂದಿಗೆ ಸಾಧಿಸಬಹುದು.
ತರಬೇತುದಾರರ ಸಂಖ್ಯೆಯಲ್ಲಿ ಹೆಚ್ಚಳ, ತರಬೇತುದಾದರರ ಸಾಮಥ್ರ್ಯ ಅಭಿವೃದ್ಧಿಗಾಗಿ ಕ್ರಮ ವಹಿಸುವುದು.
ತರಬೇತುದಾರರ ವರ್ಗೀಕರಣ:
ಉನ್ನತ್ಠ, ಮಾಧ್ಯಮಿಕ ಮತ್ತು ಸಮುದಾಯ
ರಾಜ್ಯದಲ್ಲಿ ಕ್ರೀಡಾ ಪ್ರತಿಭೆಯನ್ನು ಬಲವರ್ಧನೆಗೊಳಿಸಲು ಮೂರು ಹಂತಗಳ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸುವುದು.
ಹಂತ 1 : ಕ್ರೀಡಾ ಹಾಸ್ಟೆಲ್‍ಗಳು
ಹಂತ 2 : ಕ್ರೀಡಾ ಅಕಾಡೆಮಿಗಳು
ಹಂತ 3 : ಕ್ರೀಡಾ ಶ್ರೇಷ್ಠತಾ ಕೇಂದ್ರಗಳು
ಕೌಶಲ್ಯ ತರಬೇತಿ ಕಾರ್ಯಕ್ರಮದ ಮೂಲಕ ಮಾಜಿ ಕ್ರೀಡಾಪಟುಗಳ ಸಾಮಥ್ರ್ಯಗಳನ್ನು ವೃದ್ಧಿಸುವುದು.
ತಮ್ಮ ಕ್ರೀಡಾ ಜೀವನದ ಮುಖ್ಯ ಘಟ್ಟವನ್ನು ಮುಗಿಸಿ ತಮ್ಮ ಜೀವನಕ್ಕಾಗಿ ದಾರಿ ಹುಡುಕುತ್ತಿದ್ದು, ಕ್ರೀಡೆಗಾಗಿ ಯಾವುದಾದರೂ ಕೊಡುಗೆಯನ್ನು ನೀಡಲು ಬಯಸುತ್ತಿರುವ ಕ್ರೀಡಾಪಟುಗಳನ್ನು ಗುರುತಿಸಿ ಅವರನ್ನು ಡಿ.ವೈ.ಇ.ಎಸ್.ಗೆ ಸೇರಿಸಿಕೊಳ್ಳುವುದು. ಕೌಶಲ್ಯ ತರಬೇತಿ ಮೂಲಕ ಸಾಮಥ್ರ್ಯ ಅಭಿವೃದ್ಧಿಯು ಈ ನಿಟ್ಟಿನಲ್ಲಿ ಒಂದು ಪ್ರಮುಖ ಹಂತವಾಗಿದೆ. ಆದ್ದರಿಂದ ಕಡ್ಡಾಯವಾಗಿ ಡಿ.ವೈ.ಇ.ಎಸ್ ತರಬೇತಿ ಕಾರ್ಯಕ್ರಮಗಳನ್ನು ಅಂದರೆ, ಈಜು ತರಬೇತುದಾರರ ತರಬೇತಿ, ಜೀವ ರಕ್ಷಕ ತರಬೇತಿ, ಫಿಟ್ನೆಸ್ ತರಬೇತುದಾರರ ತರಬೇತಿ, ಗುರುತುಗಾರರು, ಕ್ರೀಡಾ ಕ್ಷೇತ್ರ ನಿರ್ವಹಣಾ ಸಿಬ್ಬಂತಿ, ವ್ಯಕ್ತಿತ್ವ ವಿಕಸನ ತರಬೇತಿ, ಸಂವಹನ ಕೌಶಲ್ಯ ತರಬೇತಿ ಮುಂತಾದವುಗಳನ್ನು ಕ್ರೀಡಾ ಕ್ಷೇಮಾಭಿವೃದ್ಧಿಯ ಭಾಗವಾಗಿ ಹಮ್ಮಿಕೊಳ್ಳುವುದು. ಇದಕ್ಕಾಗಿ, ಈ ವಿಷಯದಲ್ಲಿ ಪರಿಣಿತಿ ಹೊಂದಿರುವ ಹಾಗೂ ಅನುಭವ ಹೊಂದಿರುವ ಏಜೆನ್ಸಿಗಳನ್ನು ಗುರುತಿಸಿ ಅವರೊಂದಿಗೆ ಸೇರಿ ಅಂತರಾಷ್ಟ್ರೀಯ ಮಾನ್ಯತೆ ಪಡೆದಿರುವ ಪ್ರಮಾಣ ಪತ್ರಗಳನ್ನು ನೀಡುವುದು.
ವಿಶೇಷ ಚೇತನರಿಗಾಗಿ ಕ್ರೀಡೆ:
ಜಾಗೃತಿ ಮೂಡಿಸಿ, ತಡೆಗಳನ್ನು ನಿವಾರಿಸಿ, ಭಾಗವಹಿಸುವಿಕೆಯನ್ನು ವಿಸ್ತರಿಸಿ, ವಿಶೇಷ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ತರಬೇತಿಯನ್ನು ನೀಡುವುದು.