Connect with us

LATEST NEWS

ರಾಜ್ಯದಲ್ಲಿರುವುದು ತುಘಲಕ್ ಸರಕಾರ-ಬಿ.ಎಸ್.ವೈ

Share Information

ಮಂಗಳೂರು, ಸೆಪ್ಟಂಬರ್ 7: ಬಿಜೆಪಿ ಕಾರ್ಯಕರ್ತರು ಚಾಕು, ಚೂರಿ ಹಿಡಿದುಕೊಂಡು ಪ್ರತಿಭಟನೆ ನಡೆಸುತ್ತಿಲ್ಲ, ಶಾಂತಿಯುತ ಪ್ರತಿಭಟನೆಗೂ ಅವಕಾಶ ನೀಡದ ಸಿದ್ಧರಾಮಯ್ಯನವರದು ತುಘಲಕ್ ಸರಕಾರ ಎಂದು ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.


ಮಂಗಳೂರಿನಲ್ಲಿ ಬಿಜೆಪಿ ಯುವಮೋರ್ಚಾ ಆಯೋಜಿಸಿದ್ದ ಮಂಗಳೂರು ಚಲೋ ಬೈಕ್ ರಾಲಿಯಲ್ಲಿ ಪಾಲ್ಗೊಳ್ಳಲು ಮಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.

ಬಿಜೆಪಿ ಯುವಮೋರ್ಚಾ ಮತೀಯ ಸಂಘಟನೆಯನ್ನು ನಿಶೇಧಿಸಬೇಕು ಎಂದು ಬೈಕ್ ರಾಲಿ ಹಮ್ಮಿಕೊಂಡಿದೆ. ಇದರಲ್ಲಿ ಯಾವ ಕಾರ್ಯಕರ್ತನೂ ಚಾಕು ಹಾಗೂ ಚೂರಿ ಹಿಡಿದು ಪ್ರತಿಭಟನೆ ನಡೆಸುತ್ತಿಲ್ಲ. ಶಾಂತಿಯುತ ಹೋರಾಟಕ್ಕೂ ಸಿದ್ಧರಾಮಯ್ಯ ಸರಕಾರ ಅವಕಾಶ ನೀಡುವುದಿಲ್ಲವೆಂದಾದರೆ ಪ್ರಜಾಪ್ರಭುತ್ವಕ್ಕೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದ ಅವರು ರಾಜ್ಯವನ್ನು ಆಳುತ್ತಿರುವುದು ತುಘಲಕ್ ಸರಕಾರ ಎಂದರು. ಜಿಲ್ಲಾ ಉಸ್ತುವಾರಿ ಸಚಿವರನ್ನು ಕೂಡಲೇ ಸಚಿವ ಸ್ಥಾನದಿಂದ ಕೈ ಬಿಡಬೇಕೆಂದು ಒತ್ತಾಯಿಸಿದ ಅವರು ಬಿಜೆಪಿ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಈ ವಿಚಾರವನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲಿದೆ ಎಂದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಇದಕ್ಕೆ ಪತ್ರಕರ್ತೆ ಗೌರಿ ಲಂಕೇಶ್ ಸಾವೇ ಉದಾಹರಣೆ ಎಂದು ಅವರು ಕಿಡಿಕಾರಿದರು.

 


Share Information
Advertisement
Click to comment

You must be logged in to post a comment Login

Leave a Reply