LATEST NEWS
ರಾಜ್ಯದಲ್ಲಿ ಬಂದ್ ಮತ್ತೆ ಮಂದೂಡಿಕೆ ಸಾಧ್ಯತೆ – ಶ್ರೀರಾಮುಲು
ರಾಜ್ಯದಲ್ಲಿ ಬಂದ್ ಮತ್ತೆ ಮಂದೂಡಿಕೆ ಸಾಧ್ಯತೆ – ಶ್ರೀರಾಮುಲು
ಮಂಗಳೂರು ಮಾರ್ಚ್ 17: ಕರೋನಾ ವೈರಸ್ ಮುಂಜಾಗೃತೆ ಕ್ರಮವಾಗಿ ರಾಜ್ಯದಲ್ಲಿರುವ ಒಂದು ವಾರಗಳ ಹೇರಿರುವ ಬಂದ್ ನ್ನು ಮತ್ತೆ ಮುಂದೂಡುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಸುಳಿವು ನೀಡಿದ್ದಾರೆ. ಮಂಗಳೂರಿನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಸದ್ಯದ ಪರಿಸ್ಥಿತಿ ಮುಂದುವರಿದ್ರೆ ಮತ್ತೆ ಬಂದ್ ಅನಿವಾರ್ಯವಾಗಲಿದ್ದು, ಮಾಲ್,ಥಿಯೇಟರ್ ಗಳ ಬಂದ್ ಅವಧಿ ವಿಸ್ತೀರ್ಣ ಅನಿವಾರ್ಯ ಎಂದು ತಿಳಿಸಿದರು.
ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ ಕಾಸರಗೋಡು ನಿವಾಸಿಯೊಬ್ಬರಲ್ಲಿ ಕರೋನಾ ವೈರಸ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಗಳು ಮಾಹಿತಿ ಪಡೆದುಕೊಳ್ಳುತ್ತಿದ್ದು, ಆತನ ಪರಿಚಯಸ್ಥರು,ಸ್ನೇಹಿತರು,ಸಂಬಂಧಿಕರ ಮಾಹಿತಿ ಪಡೆದು ಕೊಳ್ಳುತ್ತಿದ್ದಾರೆ ಎಂದು ಶ್ರೀರಾಮುಲು ತಿಳಿಸಿದರು.
ಮಂಗಳೂರಿನಲ್ಲಿ ಕರೋನಾ ಪರೀಕ್ಷೆ ಲ್ಯಾಬ್ ಮಾಡೋದಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ಶೀಘ್ರದಲ್ಲೇ ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಯಲ್ಲಿ ಲ್ಯಾಬ್ ತೆರೆಯಲಾಗುವುದು ಎಂದರು.
ಮಾಸ್ಕ್ ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಗಮನಕ್ಕೆ ಬಂದರೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ, ಒಂದು ವೇಳೆ ಹೆಚ್ಚಿನ ಬೆಲೆಗೆ ಮಾಸ್ಕ್ ಮಾರಾಟ ಗಮನಕ್ಕೆ ಬಂದರೆ ಆ ಮೆಡಿಕಲ್ ಶಾಪ್ ಗಳ ಲೈಸೆನ್ಸ್ ರದ್ದು ಮಾಡುತ್ತೇನೆ ದ.ಕ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.