LATEST NEWS
ಕರ್ಣಾಟಕ ಬ್ಯಾಂಕ್ ಗೆ ಆರು ಪ್ರಶಸ್ತಿ

ಮಂಗಳೂರು ಜನವರಿ 29: ಬ್ಯಾಂಕಿಂಗ್ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ನಡೆದ ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್‌ನ 20ನೇ ವಾರ್ಷಿಕ ಬ್ಯಾಂಕಿಂಗ್ ತಂತ್ರಜ್ಞಾನ ಸಮ್ಮೇಳನದಲ್ಲಿ ಕರ್ಣಾಟಕ ಬ್ಯಾಂಕ್ 6 ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.
ಅತ್ಯುತ್ತಮ ಟೆಕ್ ಟ್ಯಾಲೆಂಟ್ ಮತ್ತು ಸಂಸ್ಥೆ, ಅತ್ಯುತ್ತಮ ಐಟಿ ಸುರಕ್ಷೆ ನಿರ್ವಹಣೆ, ಅತ್ಯುತ್ತಮ ತಂತ್ರಜ್ಞಾನ ಬ್ಯಾಂಕ್, ಅತ್ಯುತ್ತಮ ಫಿನ್‌ಟೆಕ್ ಮತ್ತು ಡಿಪಿಐ ಅಳವಡಿಕೆ ವಿಭಾಗದಲ್ಲಿ ರನ್ನರ್ ಅಪ್ ಹಾಗೂ ಅತ್ಯುತ್ತಮ ಡಿಜಿಟಲ್ ಮಾರಾಟ, ಪಾವತಿ ಮತ್ತು ತೊಡಗಿಸಿಕೊಳ್ಳುವಿಕೆ, ಕೃತಕ ಬುದ್ಧಿಮತ್ತೆ ಮತ್ತು ಮಷಿನ್ ಲರ್ನಿಂಗ್‌ನಲ್ಲಿ ವಿಶೇಷ ಉಲ್ಲೇಖ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ಈ ಬಗ್ಗೆ ಹರ್ಷ ವ್ಯಕ್ತಪಡಿಸಿದ ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶ್ರೀಕೃಷ್ಣನ್ ಎಚ್ ಹೊಸ ಯುಗದ ಬ್ಯಾಂಕಿಂಗ್ ತಂತ್ರಜ್ಞಾನ ಅಳವಡಿಕೆಯಲ್ಲಿ ಕರ್ಣಾಟಕ ಬ್ಯಾಂಕ್ ಮುಂಚೂಣಿಯಲ್ಲಿದೆ. ನಿರಂತರ ನಾವೀನ್ಯತೆ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ನೀಡುವುದು ಬ್ಯಾಂಕ್‌ನ ಬದ್ಧತೆಯಾಗಿದೆ ಎಂದಿದ್ದಾರೆ.
1 Comment