Connect with us

  LATEST NEWS

  ಕಾರ್ಕಳ – ಮನಗೆ ನುಗ್ಗಿ ಚಿನ್ನಾಭರಣ ಕದ್ದ ಕಳ್ಳ ಅರೆಸ್ಟ್…!!

  ಉಡುಪಿ ಮಾರ್ಚ್ 19: ಫೆಬ್ರವರಿಯಲ್ಲಿ ಕಾರ್ಕಳ ತಾಲೂಕಿನ ನಿಟ್ಟೆ ಗ್ರಮಾದ ಕೈಲಾಜೆ ಪಾದೆಮನೆ ರಾಘವೇಂದ್ರ ಭಟ್ ಅವರ ಮನೆಯಿಂದ ಕಳ್ಳತನ ಮಾಡಿದ್ದ ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಹುಬ್ಬಳ್ಳಿ ನಿವಾಸಿ ಎಲ್ಲನಗೌಡ ಪಾಟೀಲ್ ಎಂದು ಗುರುತಿಸಲಾಗಿದೆ. ಕಳ್ಳತನ ಮಾಡಿದ 5.50 ಲಕ್ಷ ಮೌಲ್ಯದ ಚಿನ್ನದ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.


  ದಿನಾಂಕ 23.02.2023 ರಂದು ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಕೈಲಾಜೆ ಪಾದೆಮನೆ ರಾಘವೇಂದ್ರ ಭಟ್ ರವರ ಮನೆಗೆ ನುಗ್ಗಿದ ಕಳ್ಳ ಸುಮಾರು ಐದೂವರೆ ಲಕ್ಷ ಬೆಲೆಬಾಳುವ ಚಿನ್ನದ ಆಭರಣಗಳು ಮತ್ತು ನಗದು ರೂ. 5500/- ನ್ನು ಕಳ್ಳತನ ಮಾಡಿದ್ದ, ಈ ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಕಾರ್ಕಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಮತ್ತು ಸಿಬ್ಬಂದಿಗಳ ತಂಡವು ಆರೋಪಿತನಾದ ಹುಬ್ಬಳ್ಳಿ ಮಾರುತಿ ನಗರದ ಚಂದ್ರಗೌಡ ಪಾಟೀಲ್, ತಂದೆ: ಎಲ್ಲನಗೌಡ ಪಾಟೀಲ್, (ಪ್ರಾಯ: 56 ವರ್ಷ) ಎಂಬಾತನನ್ನು ದಸ್ತಗಿರಿ ಗೊಳಿಸಿ ಕಳ್ಳತನ ಮಾಡಿದ್ದ 5.50 ಲಕ್ಷ ಮೌಲ್ಯದ ಚಿನ್ನದ ಆಭರಣಗಳನ್ನು ಪತ್ತೆ ಮಾಡಿರುತ್ತಾರೆ.

  Share Information
  Advertisement
  Click to comment

  You must be logged in to post a comment Login

  Leave a Reply