Connect with us

LATEST NEWS

ಕಾರ್ಕಳ – ಪರುಶುರಾಮನ ಸೃಷ್ಠಿಯ ನಾಡಲ್ಲೇ ನಾಪತ್ತೆಯಾದ ಪರಶುರಾಮನ ಮೂರ್ತಿ ದೂರು ದಾಖಲು

ಕಾರ್ಕಳ ಅಕ್ಟೋಬರ್ 15: ಬೈಲೂರಿನ ವಿವಾದಿತ ಪರಶುರಾಮ ಮೂರ್ತಿಯ ಅಸಲಿ ಬಣ್ಣ ಇದೀಗ ಬಯಲಾಗಿದ್ದು, ಪರಶುರಾಮ ಮೂರ್ತಿ ಇದೀಗ ಇದ್ದಕ್ಕಿದ್ದಂತೆ ಕಾಣೆಯಾಗಿದ್ದು, ಮೂರ್ತಿಯ ಸುತ್ತ ಕಪ್ಪು ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿದ್ದು, ಇದೀಗ ಡ್ರೋಣ್ ಕ್ಯಾಮರಾದಲ್ಲಿ ಕಪ್ಪು ಪ್ಲ್ಯಾಸ್ಟಿಕ್ ಹೊದಿಕೆಯ ಒಳಗಿನ ಪರುಶುರಾಮ ಮುೂರ್ತಿ ಅಸಲಿ ಬಣ್ಣ ಬಯಲಾಗಿದ್ದು, ಇದೀಗ ಪರಶುರಾಮನ ಪಾದ ಮತ್ತು ಕಾಲು ಬಿಟ್ಟು ಉಳಿದ ಭಾಗ ಮಾಯವಾಗಿರುವುದು ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕಾರ್ಕಳದ ಬೈಲೂರಿನಲ್ಲಿ ನಿರ್ಮಿಸಲಾಗಿರುವ ಪರುಶುರಾಮನ ಮೂರ್ತಿ ನಕಲಿ ಎನ್ನುವುದು ಇದೀಗ ಸಾಬೀತಾಗಿದ್ದು, ಇದೀಗ ಪರುಶುರಾಮ ಮೂರ್ತಿಯ ನಕಲಿ ಎಂಬ ವಿರುದ್ದ ಹೋರಾಟ ನಡೆಸಿದ ಹೋರಾಟಗಾರರು ಮೂರ್ತಿ ಕಾಣೆಯಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನು ಪರುಶುರಾಮ ಮೂರ್ತಿ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಉಮ್ಮಿಕಲ್ ಬೆಟ್ಟಕ್ಕೆ ಕಾಂಗ್ರೆಸ್‌ ಮುಖಂಡ ಉದಯ ಕುಮಾರ್‌ ಶೆಟ್ಟಿ ಭೇಟಿ ಶನಿವಾರ ಭೇಟಿ ನೀಡಿದರು.


ಈ ಸಂದರ್ಭ ಪ್ರತಿಕ್ರಿಯಿಸಿದ ಅವರು, ಪರಶುರಾಮನ ಕಂಚಿನ ಮೂರ್ತಿಯ ಕಾಲಿನ ಭಾಗ ಮಾತ್ರವಿದ್ದು, ದೇಹದ ಉಳಿದ ಭಾಗಗಳನ್ನು ತೆರವುಗೊಳಿಸಲಾಗಿದೆ. ಆದರೆ ನಿರ್ಮಿತಿ ಕೇಂದ್ರದ ಮೇಲ್ವಿಚಾರಣೆಯಲ್ಲಿ ಕಾಮಗಾರಿ ನಡೆಯುತ್ತಿದೆ.

ಇದರ ಪರಿಶೀಲನೆಗಾಗಿ ಎನ್‌ಐಟಿಕೆ ಹಾಗೂ ಎಂಐಟಿ ತಂತ್ರಜ್ಞರ ತಂಡ ಅಗಮಿಸಿ ಮೂರ್ತಿಯ ಅಡಿಪಾಯ ಪರಿಶೀಲನೆ ನಡೆಸಬೇಕು.

ಬೈಲೂರು ಪರಶುರಾಮ ಥೀಮ್ ಪಾರ್ಕ್‌ಗೆ ವಿವಿಧ ರಾಜ್ಯಗಳಿಂದಲೂ ಪ್ರವಾಸಿಗರು ಬರಬೇಕು. ಪ್ರವಾಸೋದ್ಯಮ ಬೆಳೆಯಬೇಕು. ಆದರೆ ಜನರ ದಿಕ್ಕು ತಪ್ಪಿಸಿ ಕಾಮಗಾರಿ ನಡೆಸುವುದು ತಪ್ಪು ಎಂದರು.

ತೆರವುಗೊಳಿಸಿದ ಪರಶುರಾಮ ಮೂರ್ತಿಯ ಡೋನ್ ಚಿತ್ರ ಸೆರೆಹಿಡಿಯಲಾಗಿದೆ. ಆ ಮೂಲಕ ಪರಶುರಾಮ ಥೀಮ್ ಪಾರ್ಕ್‌ನ ಪರಶುರಾಮ ಮೂರ್ತಿಯ ಕಾಲಿನ ಭಾಗ ಬಿಟ್ಟು ಉಳಿದ ಫೈಬರ್‌ನಿಂದ ನಿರ್ಮಿಸಲಾದ ಭಾಗವನ್ನು ತೆರವುಗೊಳಿಸಲಾಗಿದೆ.

 

Share Information
Advertisement
Click to comment

You must be logged in to post a comment Login

Leave a Reply