Connect with us

    LATEST NEWS

    ಶೃದ್ದಾಂಜಲಿ ಪೋಟೋ ನೋಡಿ ಕಣ್ಣೀರು ಹಾಕಿದ ಕಾರ್ಕಳ ಕಾಂಗ್ರೇಸ್ ಅಭ್ಯರ್ಥಿ ಗೋಪಾಲ ಭಂಡಾರಿ

    ಶೃದ್ದಾಂಜಲಿ ಪೋಟೋ ನೋಡಿ ಕಣ್ಣೀರು ಹಾಕಿದ ಕಾರ್ಕಳ ಕಾಂಗ್ರೇಸ್ ಅಭ್ಯರ್ಥಿ ಗೋಪಾಲ ಭಂಡಾರಿ

    ಉಡುಪಿ ಎಪ್ರಿಲ್ 19: ಕಾರ್ಕಳದಲ್ಲಿ ಕಾಂಗ್ರೆಸ್‌ ನ ಭಿನ್ನಮತ ತಾರಕಕ್ಕೇರಿದೆ. ಕಾಂಗ್ರೇಸ್ ಹೈಕಮಾಂಡ್ ಗೋಪಾಲ ಭಂಡಾರಿ ಅವರಿಗೆ ಟಿಕೇಟ್ ನೀಡಿರುವ ಹಿನ್ನಲೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಅವರ ಬೆಂಬಲಿಗರು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.

    ಈ ಪ್ರತಿಭಟನೆ ಕಾಂಗ್ರೇಸ್ ಮುಖಂಡರ ಶೃದ್ದಾಂಜಲಿ ಸಲ್ಲಿಸುವ ಹಂತಕ್ಕೆ ತಲುಪಿದ್ದು, ಸಾಮಾಜಿಕ ಜಾಲತಾಣದಲ್ಲಿ ಗೋಪಾಲ ಭಂಡಾರಿ ಹಾಗೂ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರ ಶ್ರದ್ಧಾಂಜಲಿ ಫೋಟೋ ಹಾಕಿ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ಈ ನಡುವೆ ಮಾಜಿ‌ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಗೋಪಾಲ ಭಂಡಾರಿಗೆ ಶ್ರದ್ಧಾಂಜಲಿ ಫೋಟೋ ವೈರಲ್ ಆದ ಹಿನ್ನಲೆಯಲ್ಲಿ ಇಂದು ನಡೆದ ಬೂತ್ ಮಟ್ಟದ ಸಭೆಯಲ್ಲಿ ಗೋಪಾಲ ಭಂಡಾರಿ ಭಾವುಕರಾದರು.

    ಸಾಮಾಜಿಕ ಜಾಲತಾಣದಲ್ಲಿ ಶ್ರದ್ಧಾಂಜಲಿ ಫೋಟೋ ಬರ್ತಾ ಇದೆ, ಬಹಳ ದೊಡ್ಡ ಮಟ್ಟದಲ್ಲಿ ಮನಸ್ಸಿಗೆ ಘಾಸಿ ಆಗಿದೆ ಎಂದರು, ನನಗೆ ಇದನ್ನು ತಡೆದುಕೊಳ್ಳುವ ಶಕ್ತಿ ಇದೆ. ಆದರೆ ಕುಟುಂಬ ಸದಸ್ಯರಿಗೆ ಇದನ್ನು ತಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

    ನಾನೊಬ್ಬ ಸಾಮಾನ್ಯ ವ್ಯಕ್ತಿ ಎಂದು ಹೇಳಿದ ಗೋಪಾಲ ಭಂಡಾರಿ ಎಲ್ಲರೂ ಹೇಳಿದ ಹಾಗೆ ನನ್ನ ಬಳಿ ದುಡ್ಡಿಲ್ಲ, ಸೇವಾ ಮನೋಭಾವನೆ ಮಾತ್ರ ಇರುವಂತದ್ದು, ಚುನಾವಣೆ ಮುಗಿಯುವವರೆಗೂ ಏನೇನು ಚಾರಿತ್ಯಹರಣ ಮಾಡುವ ಪ್ರಯತ್ನ ನಡೆಯುತ್ತದೋ ಎಂಬ ಭಯವಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಗೋಪಾಲ್ ಭಂಡಾರಿ ಕಣ್ಣೀರು ಹಾಕಿದರು.

    Share Information
    Advertisement
    Click to comment

    You must be logged in to post a comment Login

    Leave a Reply