LATEST NEWS
ಟಿಕೆಟ್ ನಿರಾಕರಣೆ ಹಿನ್ನಲೆ ಬಿಜೆಪಿಯತ್ತ ಮುಖ ಮಾಡಿದ ವಿಜಯ್ ಕುಮಾರ್ ಶೆಟ್ಟಿ ?
ಟಿಕೆಟ್ ನಿರಾಕರಣೆ ಹಿನ್ನಲೆ ಬಿಜೆಪಿಯತ್ತ ಮುಖ ಮಾಡಿದ ವಿಜಯ್ ಕುಮಾರ್ ಶೆಟ್ಟಿ ?
ಮಂಗಳೂರು ಏಪ್ರಿಲ್ 19: ದಕ್ಷಿಣಕನ್ನಡ ಜಿಲ್ಲೆಯ ಮತ್ತೊಂದು ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಬಂಡಾಯದ ಬಿಸಿ ತಟ್ಟಿದೆ. ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಮೊಯ್ದೀನ್ ಬಾವಾ ಅವರಿಗೆ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಹಾಗು ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ ಬಂಡಾಯದ ಬಾವುಟ ಹಾರಿಸಿದ್ದಾರೆ.
ಕಾಂಗ್ರೆಸ್ ವರಿಷ್ಠರ ವಿರುದ್ಧ ವಿಜಯ ಕುಮಾರ್ ಶೆಟ್ಟಿ ಬಹಿರಂಗ ವಾಗಿಯೇ ಹೇಳಿಕೆ ನಿಡಿದ್ದು ತಮಗೆ ಕಾಂಗ್ರೆಸ್ ಹಿರಿಯ ನಾಯಕರು ನೀಡಿದ ಭರವಸೆಗಳು ಭರವಸೆಯಾಗಿಯೇ ಉಳಿದಿವೆ ಎಂದು ಆರೋಪಿಸಿದರು. ಈ ಕ್ಷೇತ್ರದಿಂದ ಸ್ಪರ್ದಿಸಿ ಗೆಲುವು ಸಾಧಿಸಿದ್ದ ನನಗೆ ಈ ಮೊದಲು ವಿಧಾನ ಪರಿಷತ್ ಸದಸ್ಯತ್ವ ನಿಡುವುದಾಗಿ ಬರವಸೆ ನೀಡಲಾಗಿತ್ತು. ನಂತರದ ದಿನ ಗಳಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡುವುದಾಗಿ ತಿಳಿಸಿದ್ದರು. ಅದರೆ ಭರವಸೆಗಳು ಭರವಸೆಯಾಗಿಯೇ ಉಳಿದಿವೆ ಎಂದು ಅವರು ವಿಷಾಧ ವ್ಯಪ್ತಪಡಿಸಿದರು.
ಮಂಗಳೂರು ಉತ್ತರ ಕ್ಷೇತ್ರ ದಲ್ಲಿ ಬಂಡಾಯ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗೊಂದಲ ಸೃಷ್ಠಿಯಾಗಿದೆ. ಚುನಾವಣೆಗೆ ದಿನಗಣನೆ ಆರಂಭವಾಗಿರುವ ಸಂದರ್ಭದಲ್ಲೇ ವಿಜಯ ಕುಮಾರ ಶೆಟ್ಟಿ ಬಂಡಾಯದ ಬಾವುಟ ಹಾರಿಸಿರುವುದು ಕಾಂಗ್ರೆಸ್ ನಾಯಕರಿಗೆ ನುಂಗಲಾರದ ತುತ್ತಾಗಿದೆ. ಈ ಬಂಡಾಯ ವನ್ನು ಕಾಂಗ್ರೆಸ್ ನಾಯಕರು ಹೇಗೆ ಶಮನ ಗೊಳಿಸುತ್ತಾರೆ ಎಂಬುದೇ ಈಗ ಕುತೂಹಲ.
ಈ ನಡುವೆ ವಿಜಯ ಕುಮಾರ್ ಶೆಟ್ಟಿ ಬಿಜೆಪಿ ಗೆ ಸೇರ್ಪಡೆ ಗೊಳ್ಳಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ನೇತ್ರಾವತಿ ನದಿ ತಿರುವು ಹೋರಾಟ ದಲ್ಲಿ ಸಕ್ರೀಯ ರಾಗಿದ್ದ ವಿಜಯ ಕುಮಾರ್ ಶೆಟ್ಟಿ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ ನೀಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು.
ರಮಾನಾಥ್ ರೈ ಅವರಿಗೆ ಗೃಹ ಖಾತೆ ದೊರಕುವ ಸಾದ್ಯತೆ ಇದೆ ಎಂಬ ಸುದ್ದಿ ಬಹಿರಂಗ ಗೊಂಡಿದ್ದ ಸಂದರ್ಭದಲ್ಲಿ ವಿಜಯ ಕುಮಾರ್ ಶೆಟ್ಟಿ , ರಮಾನಾಥ್ ರೈ ವಿರುದ್ಧ ವಾಗ್ದಾಳಿ ನಡೆಸಿದ್ದರು. ಯಾವುದೇ ಕಾರಣಕ್ಕೂ ಗೂಂಡಾ ಮಂತ್ರಿಗೆ ಗೃಹ ಖಾತೆ ನೀಡಬಾರದು ಎಂದು ಕಿಡಿಕಾರಿದ್ದರು.
You must be logged in to post a comment Login