LATEST NEWS
ಕಾರ್ಕಳ : ಸಿಕ್ಕಿಬಿದ್ದ ಕೋಳಿ ಕಳ್ಳರು
ಉಡುಪಿ ಜನವರಿ 30: ಭಿಕ್ಷುಕರ ವೇಷದಲ್ಲಿ ಬಂದು ಮನೆಯಲ್ಲಿದ್ದ ಕೋಳಿಗಳನ್ನು ಕದಿಯುತ್ತಿದ್ದ ದಂಪತಿಗಳನ್ನು ಸಾರ್ವಜನಿಕರು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಭಿಕ್ಷುಕರ ವೇಷದಲ್ಲಿ ಮನೆಮನೆ ಗೆ ತೆರಳುತ್ತಿದ್ದ ಭಿಕ್ಷೆ ಪಡೆದ ನಂತರ ಅಲ್ಲೆ ಕುಳಿತುಕೊಳ್ಳುತ್ತಿದ್ದರು. ನಂತರ ಸುತ್ತಮುತ್ತ ಮನೆಯವರು ಇಲ್ಲದ ಸಂದರ್ಭ ನೋಡಿ ಕೋಳಿಗಳನ್ನು ಕದಿಯುತ್ತಿದ್ದರು. ಈ ಕಳ್ಳತನದ ವಿಡಿಯೋ ಇತ್ತೀಚಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಮನೆಯಲ್ಲಿ ಕೋಳಿಗಳು ಇರುವುದನ್ನು ಗಮನಿಸುತ್ತಿದ್ದ ದಂಪತಿಗಳು ನಿಧಾನವಾಗಿ ಆ ಮನೆಗೆ ತೆರಳಿ ವಿಶ್ರಾಂತಿ ಪಡೆಯುತ್ತಾರೆ. ಬಳಿಕ ಅವರು ಕೋಳಿಗಳಿಗೆ ಅಕ್ಕಿಕಾಳು ಹಾಕಿ ಹತ್ತಿರ ಬರುವಂತೆ ಮಾಡುತ್ತಾರೆ. ಹತ್ತಿರ ಬರುತ್ತಿದ್ದಂತೆ ಅವುಗಳ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದು, ತಿರುಚಿ ತಮ್ಮ ಬಳಿಯಿದ್ದ ಚೀಲದಲ್ಲಿ ಹಾಕಿಕೊಳ್ಳುತ್ತಾರೆ.
ಉಡುಪಿ ಬಳಿಯ ಕಾಪುವಿನಲ್ಲಿ ಕೂಡಾ ಈ ರೀತಿ ಕೋಳಿಯನ್ನು ಕಳವು ಮಾಡಲಾಗಿದ್ದು, ಈ ವೇಳೆ ಈ ವೃದ್ದ ದಂಪತಿಯ ಕೃತ್ಯವನ್ನು ಮಹಿಳೆಯೊಬ್ಬರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದರು. ಇದೇ ರೀತಿ ಅಡ್ಯಾರ್ ದ ಅರ್ಕುಳದಲ್ಲಿ ಕೋಳಿ ಕದಿಯಲು ಯತ್ನಿಸಿದ್ದ ಸಂದರ್ಭ ಸಾರ್ವಜನಿಕರು ಈ ದಂಪತಿಯನ್ನು ಸೆರೆ ಹಿಡಿದಿದ್ದಾರೆ.