LATEST NEWS
ಪರೀಕ್ಷಾ ಕೇಂದ್ರಕ್ಕೆ ಕರವೇ ದಾಳಿ: ಕಾರ್ಯಕರ್ತರ ಬಂಧನ

ಮಂಗಳೂರು, ಸೆಪ್ಟೆಂಬರ್ 10 : ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮಂಗಳೂರಿನ ಬೊಂದೇಲಿನಲ್ಲಿ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕಿನವರು ಆಯೋಜಿಸಿದ್ದ ಪರಿಕ್ಷಾ ಕೇಂದ್ರಕ್ಕೆ ಇಂದು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ನ ವಿವಿಧ ಹುದ್ದೆಗಳಿಗೆ ಇಂದು ರಾಜ್ಯದ ಹಲವು ಭಾಗಗಳಲ್ಲಿ ಪರೀಕ್ಷೆ ನಡೆಸುತ್ತಿದೆ. ಈ ಹಿನ್ನೆಲ್ಲೆಯಲ್ಲಿ ನಗರ ಹೊರವಲಯ ದ ಬೊಂದೇಲ್ ನಲ್ಲಿರುವ ಬೆಸೆಂಟ್ ಕಾಲೇಜಿನ ಪರೀಕ್ಷಾ ಕೇಂದಲ್ಲಿ ಪರೀಕ್ಷೆ ನಡೆಯುತ್ತಿದೆ.
ಇಂದಿನಿಂದ ಸೆಪ್ಟೆಂಬರ್ 22 ರ ವರೆಗೆ ಲಿಖಿತ ಪರಿಕ್ಷೆಗಳನ್ನು ನಡೆಯಲಿದೆ. ಆದರೆ ಈ ಲಿಖಿತ ಪರೀಕ್ಷೆ ಬರೆಯಲು ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ಉತ್ತರ ಭಾರತದಿಂದ ಕನ್ನಡೇತರ ಅಭ್ಯರ್ಥಿಗಳು ಆಗಮಿಸಿದ್ದರು. ಇದರಿಂದ ಕೆರಳಿದ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣ ಕಾರ್ಯಕರ್ತರು ಜಿಲ್ಲಾಧ್ಯಕ್ಷ ಅನಿಲ್ ದಾಸ್ ನೇತೃತ್ವದಲ್ಲಿ ಪರೀಕ್ಷಾ ಕೇಂದ್ರಕ್ಕೆ ಮುತ್ತಿಗೆ ಹಾಕಿ ಪರೀಕ್ಷೆ ಬರೆಯಲು ಬಂದ ಹೊರ ರಾಜ್ಯದ ಅಭ್ಯರ್ಥಿಗಳನ್ನು ತಡೆಯುವ ಪ್ರಯತ್ನ ಮಾಡಿದರು. ಪರೀಕ್ಷಾ ಕೇಂದ್ರದಲ್ಲಿ ಅಡ್ಡಿ ಮಾಡಲು ಯತ್ನಿಸಿದ ಕ ರಾವೇ ಕಾರ್ಯಕರ್ತರನ್ನು ಪೋಲಿಸರು ಬಂಧಿಸಿದ್ದಾರೆ.

ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕಿನ ಆಡಳಿತ ಮಂಡಳಿಯ ಕನ್ನಡ ವಿರೋಧಿ ನೀತಿಯನ್ನು ಕರಾವೇ ತೀವೃವಾಗಿ ಖಂಡಿಸಿದೆ. ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ಕನ್ನಡಿಗರ ಬ್ಯಾಂಕ್ ಕರ್ನಾಟಕ ಸರ್ಕಾರ ಸಹಯೋಗದಲ್ಲಿ ಇದು ಕಾರ್ಯನಿರ್ವಹಿಸುತ್ತಿದೆ, ಕನ್ನಡಿಗರಿಗೇ ಮಾತ್ರ ಉದ್ಯೋಗ ನೀಡಬೇಕಾಗಿದ್ದ ಬ್ಯಾಂಕ್ ಆಡಳಿತ ಮಂಡಳಿ ಹಣದ ಆಸೆಗಾಗಿ ಹೊರರಾಜ್ಯದ ಜನರಿಗೆ ಮಣೆ ಹಾಕುತ್ತಿದ್ದು ಕರಾವೇ ಇದನ್ನು ಸಹಿಸುವುದಿಲ್ಲ. ಆಡಳಿತ ಮಂಡಳಿ ಈ ಕೂಡಲೇ ತನ್ನ ಧೋರಣೆ ಬದಲಾಯಿಸದಿದ್ದಲ್ಲಿ ಸೆಪ್ಟೆಂಬರ್ 16 ರಂದು ಉಗ್ರ ಹೋರಾಟ ಮಾಡಲಾಗುವುದು ಎಂದು ಕರಾವೇ ಜಿಲ್ಲಾಧ್ಯಕ್ಷ ಅನಿಲ್ ದಾಸ್ ಎಚ್ಚರಿಸಿದ್ದಾರೆ.
ವಿಡಿಯೋಗಾಗಿ..