Connect with us

LATEST NEWS

ಕಾಪು -ಬಜರಂಗದಳ ಸಂಚಾಲಕ ಮನೆಗೆ ಆಗಮಿಸಿದ ಅಪರಿಚಿತರು..ದೂರು ದಾಖಲು

ಉಡುಪಿ ಅಗಸ್ಟ್ 1: ಕಾಪು ಪ್ರಖಂಡ ಬಜರಂಗ ದಳ ಸಂಚಾಲಕ ಸುಧೀರ್‌ ಸೋನು ಅವರ ಮನೆಗೆ ಅಪರಿಚಿತ ಯುವಕರಿಬ್ಬರು ಸಂಶಯಾಸ್ಪದ ರೀತಿಯಲ್ಲಿ ವರ್ತಿಸಿದ ಹಿನ್ನಲೆ ಕಾಪು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.


ನಿನ್ನೆ 11 ಗಂಟೆಯ ವೇಳೆಗೆ ಸುಧೀರ್‌ ಸೋನು ಅವರ ಮನೆಗೆ ಆಗಮಿಸಿದ ಮುಸ್ಲಿಂ ಯುವಕರಿಬ್ಬರು ನಿಮ್ಮ ಬಳಿ ಮಾತನಾಡಲಿಕ್ಕಿದೆ. ನಿಮ್ಮನ್ನು ಆಸಿಫ್ ಅವರು ಕಾರಿನಲ್ಲಿ ಕಾಯುತ್ತಿದ್ದಾರೆ ಎಂದು ಹೇಳಿದ್ದರು. ಈ ಬಗ್ಗೆ ಅನುಮಾನಗೊಂಡ ಸುಧೀರ್‌ ಮನೆಯಿಂದ ಹೊರಗೆ ಬರಲು ನಿರಾಕರಿಸಿದ್ದರು. ಅಪರಿಚಿತ ಯುವಕರ ಚಲನವಲನಗಳಿಂದ ಅನುಮಾನಗೊಂಡ ಸುಧೀರ್‌ ಅವರ ಪತ್ನಿ ಕೂಡ ಪತಿಯನ್ನು ಮನೆಯಿಂದ ಹೊರಗೆ ಹೋಗದಂತೆ ತಡೆದಿದ್ದರು. ಅಪರಿಚಿತರ ಬಳಿ ಆಯುಧಗಳು ಇರುವುದನ್ನು ಗಮನಿಸಿದ್ದು, ಈ ಬಗ್ಗೆ ಸುಧೀರ್‌ ಅವರು ಸಂಘಟನೆಯ ಪ್ರಮುಖರಲ್ಲಿ ಚರ್ಚಿಸಿ ಕಾಪು ಪೊಲೀಸ್‌ ಠಾಣೆಗೆ ಹೋಗಿ ದೂರು ನೀಡಿದ್ದಾರೆ.


ಆಸಿಫ್ ಅವರು ಸಾಲ ಕೇಳುವ ಸಲುವಾಗಿ ಸುಧೀರ್‌ ಅವರ ಮನೆ ಹತ್ತಿರ ಹೋಗಿರುವುದಾಗಿ ತಿಳಿಸಿದ್ದು, ಇದರಲ್ಲಿ ಬೇರೆ ಯಾವುದೇ ಉದ್ದೇಶಗಳಿಲ್ಲವೆಂದು ವಿಚಾರಣೆ ವೇಳೆ ತಿಳಿಸಿರುವುದಾಗಿ ಕಾಪು ಪೊಲೀಸ್‌ ಠಾಣಾಧಿಕಾರಿ ಶ್ರೀಶೈಲ ಮುರಗೋಡ ತಿಳಿಸಿದ್ದಾರೆ.

Advertisement
Click to comment

You must be logged in to post a comment Login

Leave a Reply