FILM
ಕಾಂತಾರ ಚಿತ್ರವಲ್ಲ ಅದೊಂದು ವಿಸ್ಮಯ: ಪುಷ್ಪರಾಜ್

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ಇದೀಗ ಭಾರೀ ಮೆಚ್ಚುಗೆ ಗಳಿಸಿದೆ. ಹೊಂಬಾಳೆ ಫಿಲ್ಮ್ಸ್‌ನ ವಿಜಯ್ ಕಿರಗಂದೂರು ನಿರ್ಮಾಣದ ಈ ಸಿನಿಮಾವು ಇದೇ ಸೆಪ್ಟೆಂಬರ್ 30ಕ್ಕೆ ರಾಜ್ಯಾದ್ಯಂತ ಭರ್ಜರಿಯಾಗಿ ತೆರೆಗೆ ಬರಲಿದ್ದು, ಈಗ ಟ್ರೇಲರ್‌ನಿಂದ ದೊಡ್ಡ ನಿರೀಕ್ಷೆ ಸೃಷ್ಟಿಯಾಗಿದೆ. ಇನ್ನು ಇದೇ ಚಿತ್ರದಲ್ಲಿ ಕಲಾವಿದರ ದಂಡೆ ಇದ್ದು, ಹೆಚ್ಚಾಗಿ ಸ್ಥಳೀಯ ಕಲಾವಿದರನ್ನೇ ರಿಷಬ್ ಶೆಟ್ಟಿ ಬಳಿಸಿಕೊಂಡು ಅದ್ದೂರಿಯಾಗಿ ಸಿನೆಮಾ ನಿರ್ಮಿಸಿದ್ದಾರೆ. ಇನ್ನು ಈ ಸಿನೆಮಾದಲ್ಲಿ ಅಭಿನಯಿಸಿರುವ ಗಡಿನಾಡ ಕಲಾವಿದ ಪುಷ್ಪರಾಜ್ ಅವರು ಕಾಂತಾರ ಸಿನೆಮಾದ ಬಗ್ಗೆ ತಮ್ಮ ಅನಿಸಿಕೆಯನ್ನು ಮಂಗಳೂರು ಮಿರರ್ ಜೊತೆ ಹಂಚಿಕೊಂಡಿದ್ದಾರೆ.