Connect with us

    FILM

    ಕಾಂತಾರ 2 ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ರಿಷಬ್ ಶೆಟ್ಟಿ….ಕಾಂತಾರ ಬರವಣಿಗೆ ಆರಂಭವೆಂದು ರಿಷಬ್

    ಬೆಂಗಳೂರು ಮಾರ್ಚ್ 22: ಕೊನೆಗೂ ಕಾಂತಾರ ಎರಡನೇ ಪಾರ್ಟ್ ಬಗ್ಗೆ ಬಿಗ್ ಅಪ್ಡೇಟ್ ಬಂದಿದ್ದು, ಯುಗಾದಿ ದಿನದಂದೇ ಕಾಂತಾರ 2 ಚಿತ್ರದ ಭರವಣಿಗೆ ಆರಂಭವಾಗಿದೆ ಎಂದು ತಿಳಿಸಿದ್ದಾರೆ. ಕಾಂತಾರ ಬ್ಲಾಕ್‌ಬಸ್ಟರ್ ಸಕ್ಸಸ್ ಬಳಿಕ ರಿಷಬ್ ಶೆಟ್ಟಿ ಕಾಂತಾರ-2 ಮಾಡ್ತಾರೆ ಎನ್ನುವ ಸುದ್ದಿ ಆಗಲೇ ಸುದ್ದಿ ವೈರಲ್ ಆಗಿತ್ತು. ಕಾಂತಾರ ಪಾರ್ಟ್ -2 ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಕೂಡ ಹೆಚ್ಚಾಗಿತ್ತು.


    ಇದೀಗ ಕಾಂತಾರ ಬರವಣಿಗೆ ಆರಂಭವೆಂದು ರಿಷಬ್ ಹೇಳಿದ್ದಾರೆ. ‘ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಷಯಗಳು’ ಎಂದು ವಿಶ್ ಮಾಡುವ ಜೊತೆಗೆ ಬರವಣಿಗೆಯ ಆದಿ ಎಂದು ಹೇಳಿದ್ದಾರೆ. ಪೋಸ್ಟರ್ ಕೂಡ ರಿಲೀಸ್ ಮಾಡಿದ್ದಾರೆ. ರಿಷಬ್ ಪೋಸ್ಟ್‌ಗೆ ಅಭಿಮಾನಿಗಳು ಕಾಮೆಂಟ್ ಮಾಡಿ ಆಲ್ ದಿ ಬೆಸ್ಟ್ ಹೇಳುತ್ತಿದ್ದಾರೆ. ಕಾಂತಾರ-2ಗಾಗಿ ಕಾಯುತ್ತಿದ್ದೀವಿ ಎಂದು ಹೇಳುತ್ತಿದ್ದಾರೆ. ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವ ಕಾಂತಾರ ಪಾರ್ಟ್-2 ಹೇಗಿರಲಿದೆ, ಯಾವಾಗ ರಿಲೀಸ್ ಆಗಲಿದೆ ಎನ್ನುವ ಹೆಚ್ಚಿನ ಮಾಹಿತಿ ಇನ್ನಷ್ಟೆ ಬಹಿರಂಗವಾಗಬೇಕಿದೆ.

    Share Information
    Advertisement
    Click to comment

    You must be logged in to post a comment Login

    Leave a Reply