ಉಳ್ಳಾಲ, ಮಾರ್ಚ್ 22: ರಾಷ್ಟ್ರೀಯ ಹೆದ್ದಾರಿ 66 ರ ಕಲ್ಲಾಪಿನಲ್ಲಿರುವ ವಾಣಿಜ್ಯ ಕಟ್ಟಡದ ಚಿಮಣಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ,ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಐದನೇ ಮಹಡಿಯೇರಿ ಹರಸಾಹಸ ಪಟ್ಟು ಬೆಂಕಿಯನ್ನ ನಂದಿಸಿದ್ದಾರೆ.
ಕಲ್ಲಾಪಿನಲ್ಲಿರುವ ಕಿಯಾಂಝ ಯುನಿವರ್ಸಲ್ ವಾಣಿಜ್ಯ ಕಟ್ಟಡದಲ್ಲಿರುವ ಮನ್ಹಾಸ್ ಹೊಟೇಲಿನ ಹೊಗೆ ಹೊರಹೊಗುವ ಚಿಮಣಿಯ ತುದಿಯಲ್ಲಿ ಇಂದು ಬೆಳಗ್ಗೆ ಬೆಂಕಿ ಹತ್ತಿಕೊಂಡಿತ್ತು. ಸ್ಥಳೀಯರು, ಕಟ್ಟಡದ ಸಿಬ್ಬಂದಿಗಳು ಬೆಂಕಿ ನಂದಿಸಲು ಪ್ರಯತ್ನ ಪಟ್ಟಿದ್ದರೂ ಬೆಂಕಿ ವ್ಯಾಪಿಸತೊಡಗಿತ್ತು. ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ಸಿಬ್ಬಂದಿಗಳು ಕಟ್ಟಡದ ಐದನೇ ಮಹಡಿಯೇರಿ ಚಿಮಣಿಯಲ್ಲಿ ಹತ್ತಿಕೊಂಡ ಬೆಂಕಿಯನ್ನ ನಂದಿಸಿದ್ದಾರೆ.
ಅಗ್ನಿ ಶಾಮಕ ಸಿಬ್ಬಂದಿಯ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಸಂಭವನೀಯ ದೊಡ್ಡ ಬೆಂಕಿ ಅವಘಡ ತಪ್ಪಿದಂತಾಗಿದೆ. ಕಟ್ಟಡದ ತುದಿಯ ಗೋಡೆ ಅಂಚಿನಲ್ಲಿ ಸಾಹಸ ಮೆರೆದು ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿಗಳನ್ನು ಸ್ಥಳೀಯರು ಪ್ರಶಂಸಿಸಿದ್ದಾರೆ.
https://youtu.be/Hut5MkO5CWw