ಮುಂಬಯಿ, ಜುಲೈ 31 :ಮುಂಬಾಯಿ- ಗುಜರಾತ್‌ನ ಕರಾವಳಿಯಾಚೆ ಸಮುದ್ರದಲ್ಲಿ ಕರಾವಳಿ ರಕ್ಷಣಾ ಪಡೆ ರವಿವಾರ ಭಾರಿ ಕಾರ್ಚರಣೆ ನಡೆಸಿ ಬರೋಬ್ಬರಿ 1,500 ಕೆ.ಜಿ. ಹೆರಾಯ್ನ್ ವಶ ಪಡಿಸಿಕೊಂಡಿದೆ. ಅಂತಾರಾಷ್ಟ್ರೀಯ ಮಾರು ಕಟ್ಟೆಯಲ್ಲಿ ಅದರ ಮೌಲ್ಯ 3,500 ಕೋಟಿ ರೂ. ಎಂದು ಅಂದಾಜಿಸಲಾಗಿದೆ.ಪ್ರಕರಣ ಸಂಬಂಧ 8 ಮಂದಿ ಭಾರತೀಯರನ್ನು ಬಂಧಿಸಲಾಗಿದೆ.

 ಇರಾನ್‌ನಿಂದ ಹೊರಟಿತ್ತು ಎನ್ನಲಾಗಿರುವ ಎಂ.ವಿ. ಹೆನ್ರಿ ಎಂಬ ವಾಣಿಜ್ಯ ನೌಕೆ ಗುಜರಾತ್‌ನ ಅಂಗ್ಲಾಂಗ್‌ ಬಂದರಿಗೆ ಆಗಮಿಸಬೇಕಿತ್ತು. ಜು. 27ರಿಂದಲೇ ಇಂಥದ್ದೊಂದು ನೌಕೆ ಬರಲಿದೆ ಎಂಬ ಬಗ್ಗೆ ಗುಪ್ತಚರ ಮಾಹಿತಿ ಲಭ್ಯವಾಗಿದ್ದರಿಂದ ಹಡಗು, ವಿಮಾನ ಮೂಲಕ ಗಸ್ತು ಬಿಗಿಗೊಳಿಸಲಾಗಿತ್ತು.ಇದೇ ಮೊದಲ ಭಾರಿಗೆ ಇಷ್ಟೊಂದು ಪ್ರಮಾಣದ ಮಾದಕದ್ರವ್ಯವನ್ನು ವಶಪಡಿಸಿಕೊಂಡಿದ್ದು ಎನ್ನಲಾಗಿದೆ.
ಖಚಿತ ಸುಳಿವಿನ ಆಧಾರದಲ್ಲಿ ಭಾರತೀಯ ಕರಾವಳಿ ರಕ್ಷಣಾ ಪಡೆ, ಸೆಂಟ್ರಲ್ ಇಂಟೆಲಿಜನ್ಸ್ ಬ್ಯೂರೋ, ಕಸ್ಟಮ್ಸ್‌, ನೌಕಾ ಪಡೆ, ಪೊಲೀಸರು ಮತ್ತು ಇತರ ತನಿಖಾ ಸಂಸ್ಥೆಗಳು ಜಂಟಿಯಾಗಿ ಕಾರ್ಯಾ ಚರಣೆ ನಡೆಸಿದ್ದವು.
ಕರಾವಳಿ ರಕ್ಷಣಾ ಪಡೆಯ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಅಂಗ್ಲಾಂಗ್‌ ಬಂದರು ಸಮೀಪಕ್ಕೆ ಆಗಮಿಸುತ್ತಿರುವಂತೆಯೇ ಸಿಕ್ಕಿಬಿದ್ದಿದ್ದೇ ಆದಲ್ಲಿ ನೌಕೆಯನ್ನು ಮುಳುಗಿಸಲು ಸಿಬಂದಿ ಯೋಜನೆ ರೂಪಿಸಿದ್ದರು ಎಂದು ಗೊತ್ತಾಗಿದೆ. ನೌಕೆಯಲ್ಲಿದ್ದ ಸಿಬಂದಿ ಮತ್ತು ಟೆಹರಾನ್‌ನಲ್ಲಿರುವ ಅದಕ್ಕೆ ಸಂಬಂಧಿಸಿದವರ ಜತೆಗೆ ನಡೆದ ಸಂಭಾಷಣೆ ಹ್ಯಾಕ್ ಮಾಡಿದಾಗ ಈ ಅಂಶ ಬಯಲಿಗೆ ಬಂದಿದೆ. ಇಲ್ಲಿಗೆ ಬರವ ಮುನ್ನ ಈ ಹಡಗು 2 ದಿನ ಪಾಕಿಸ್ತಾನದ ಕರಾಚಿ ಬಂದರಿನಲ್ಲಿ  ತಂಗಿತ್ತು ಎಂಬ ಅಂಶ ತನಿಖೆಯಿಂದ ಬೆಳಕಿಗೆ ಬಂದಿದ್ದು ಅಲ್ಲಿಯೇ ಈ ಹೆರಾಯ್ನ್ ನನ್ನು ನೌಕೆಗೆ ತುಂಬಿಸಲಾಗಿತ್ತು ಎನ್ನಲಾಗಿದೆ. ಸದ್ಯ ಈ ನೌಕೆ ಪೋರ್‌ಬಂದರ್‌ನಲ್ಲಿ ಇದೆ.

Facebook Comments

comments