DAKSHINA KANNADA
ಸಾನ್ವಿ’ ಸತ್ತಾಯ್ತು ಎಂದು ರಶ್ಮಿಕಾ ವಿರುದ್ಧ ಪರೋಕ್ಷ ಟಾಂಗ್ ಕೊಟ್ಟ ನಿರ್ದೇಶಕ ರಿಷಬ್ ಶೆಟ್ಟಿ

ಸಾನ್ವಿ’ ಸತ್ತಾಯ್ತು ಎಂದು ರಶ್ಮಿಕಾ ವಿರುದ್ಧ ಪರೋಕ್ಷ ಟಾಂಗ್ ಕೊಟ್ಟ ನಿರ್ದೇಶಕ ರಿಷಬ್ ಶೆಟ್ಟಿ
ಮಂಗಳೂರು, ಮಾರ್ಚ್ 26: ನಿರ್ದೇಶಕ ಕಮ್ ನಟ ರಿಷಬ್ ಶೆಟ್ಟಿ ಅಂದ್ರೆ ಏನಾದರೊಂದು ವಿಶೇಷತೆ ಇದ್ದೇ ಇರುತ್ತೆ.
ಕಿರಿಕ್ ಪಾರ್ಟಿ’ಯಂತಹ ಸೂಪರ್ ಹಿಟ್ ಸಿನಿಮಾ ನೀಡಿದ್ದ ಶೆಟ್ರು ‘ಬೆಲ್ ಬಾಟಂ’ ಸಿನಿಮಾದಲ್ಲಿ ತಮ್ಮೊಳಗೊಬ್ಬ ನಟ ಭಯಂಕರನಿದ್ದಾನೆ ಎಂಬುದನ್ನ ತೋರಿಸಿಕೊಟ್ಟು, ಅಭಿಮಾನಿಗಳಿಂದ ಶಹಬ್ಬಾಸ್ ಗಿರಿ ಗಿಟ್ಟಿಸಿಕೊಂಡಿದ್ದರು.

ಟ್ಯಾಲೆಂಟೆಡ್ ನಿರ್ದೇಶಕ ರಿಷಬ್ ಅವರ ‘ಕಿರಿಕ್ ಪಾರ್ಟಿ’ ಎಂಬ ಫ್ರೆಶ್ ಕಥೆಯನ್ನ ಇಷ್ಟಪಟ್ಟಿದ್ದ ಅಭಿಮಾನಿಗಳಿಗೆ ಇದೀಗ ‘ಕಿರಿಕ್ ಪಾರ್ಟಿ ಭಾಗ-2’ ನೋಡುವ ಆಸೆಯಾಗಿದೆಯಂತೆ.
ಅದಕ್ಕಾಗಿ ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ಅವರನ್ನು ‘ಭಾಗ 2’ರಲ್ಲಿ ಮತ್ತೆ ಒಂದಾಗಿಸಿ ಎಂಬ ಬೇಡಿಕೆಯನ್ನ ವೆಂಕಟೇಶ್ ಎಂಬ ಅಭಿಮಾನಿಯೊಬ್ಬ ಇನ್ ಸ್ಟಾಗ್ರಾಮ್ ನಲ್ಲಿ ನಿವೇದಿಸಿಕೊಂಡಿದ್ದಾನೆ. ಇದಕ್ಕೆ ಪ್ರತ್ಯುತ್ತರ ನೀಡಿರುವ ರಿಷಬ್ ಶೆಟ್ಟಿ, ‘ಸಾನ್ವಿ ಸತ್ತಾಯ್ತು..
‘ಕಿರಿಕ್ ಪಾರ್ಟಿ 2’ ಮಾಡೋದಾದ್ರೆ ಅದು ಕೇವಲ ಕರ್ಣನ ಜೊತೆ ಮಾತ್ರ’ ಅಂತ ಟಾಂಗ್ ನೀಡಿದ್ದಾರೆ. ಅಲ್ಲದೇ ‘ಸತ್ತ ಹೆಣದ ಜೊತೆಯಲ್ಲಿ ಸಿನಿಮಾ ಮಾಡೋಕ್ಕಾಗುತ್ತಾ ರಿಷಬ್ ಸಾರ್ ನಮಗೆ ರಕ್ಷಿತ್ ಶೆಟ್ಟಿ ಮಾತ್ರ ಬೇಕು’ ಅಂತ ಮತ್ತೊಬ್ಬ ಅಭಿಮಾನಿ ಕೂಡ ಗರಂ ಆಗಿದ್ದಾರೆ.
ಇನ್ನು ಈ ಇನ್ ಸ್ಟಾಗ್ರಾಮ್ ಚಾಟ್ ನೋಡ್ತಾ ಇದ್ರೆ ಬರೀ ಸಿನಿಮಾಗೆ ಮಾತ್ರ ಸೀಮಿತವಾಗಿದೆಯಾ ಅಥವಾ ಅದರಾಚೆಗೂ ಇರಬಹುದಾ ಅಂತ ಒಂದು ಸಣ್ಣ ಅನುಮಾನ ಕಾಡುತ್ತೆ.
ಒಟ್ನಲ್ಲಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥ ಮುರಿದುಬಿದ್ದ ನಂತರ ರಕ್ಷಿತ್ ಅಭಿಮಾನಿಗಳು ಸಾನ್ವಿ ಮೇಲೆ ಕೋಪ ಮಾಡಿಕೊಂಡಿದ್ದಾರೆ ಅನ್ನೋದು ಇಲ್ಲಿ ಸ್ಪಷ್ಟವಾದಂತಿದೆ.
ಅದೇನೇ ಇರಲಿ ಸದ್ಯಕ್ಕೆ ‘ಬೆಲ್ ಬಾಟಂ’ ಚಿತ್ರದ ಯಶಸ್ಸಿನಲ್ಲಿರುವ ರಿಷಬ್ ಶೆಟ್ಟಿ, ಚಿತ್ರದ ರಿಮೇಕ್ ಹಕ್ಕುಗಳು ಮಾರಾಟವಾಗಿರುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಜಯತೀರ್ಥ ಆಕ್ಷನ್-ಕಟ್ ಹೇಳಿರುವ ‘ಬೆಲ್ ಬಾಟಂ’ ಚಿತ್ರದ ಹಿಂದಿ ಹಾಗೂ ತೆಲುಗು ರಿಮೇಕ್ ಹಕ್ಕುಗಳು ಅತ್ಯಂತ ದೊಡ್ಡ ಮೊತ್ತಕ್ಕೆ ಸೋಲ್ಡ್ ಔಟ್ ಆಗಿದ್ದು, ಹಿಂದಿಯ ಖ್ಯಾತ ನಿರ್ಮಾಣ ಸಂಸ್ಥೆ ಕೆಎನ್ಎನ್ ಎಂಟರ್ ಪ್ರೈಸಸ್ ಹಿಂದಿ ರೀಮೇಕ್ ಹಕ್ಕು ಖರೀದಿಸಿದೆ.
ಸಿನಿಮಾ ಬಿಡುಗಡೆಗೆ ಮುನ್ನವೇ ತಮಿಳು ರಿಮೇಕ್ ಹಕ್ಕು ಮಾರಾಟವಾಗಿದ್ದು, ಆರ್ಯ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ರಿಷಬ್ ಶೆಟ್ಟಿ ಮತ್ತು ಹರಿಪ್ರಿಯಾ ಜೋಡಿ ಅಭಿಮಾನಿಗಳನ್ನು ಮೋಡಿ ಮಾಡಿದ್ದ ‘ಬೆಲ್ ಬಾಟಂ’ ಈ ವರ್ಷದ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದು. ರೆಟ್ರೋ ಸ್ಟೈಲ್ ನಲ್ಲಿ ಮೂಡಿಬಂದಿದ್ದ ಕಾಮಿಡಿ ಥ್ರಿಲ್ಲರ್ ಸಿನಿಮಾ ಕನ್ನಡ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿತ್ತು.
ಡಿಟೆಕ್ಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಿಷಬ್ ಶೆಟ್ಟಿ ನಟನೆಯಲ್ಲೂ ಕಮಾಲ್ ಮಾಡಿದ್ರು.