LATEST NEWS
ಕಾಪು ಮಾರಿಯಮ್ಮನ ಸನ್ನಿಧಾನಕ್ಕೆ ಬಾಲಿವುಡ್ ನಟಿ ಸಂಸದೆ ಕಂಗನಾ ರಣಾವತ್ ಭೇಟಿ

ಉಡುಪಿ ಮಾರ್ಚ್ 03: ಕಾಪು ಶ್ರೀ ಹೊಸ ಮಾರಿಗುಡಿಗೆ ಬಾಲಿವುಡ್ ನಟಿ ಸಂಸದೆ ಕಂಗನಾ ರಣಾವತ್ ಭೇಟಿ ನೀಡಿ ದೇವರ ದರ್ಶನ ಪಡೆದರು.
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಕಾರ್ಯಕ್ರಮಕ್ಕೆ ಆಗಮಿಸಿರುವ ಸಂಸದೆ ಕಂಗನಾ ರಣಾವತ್ ಮಾರಿಯಮ್ಮನ ದರ್ಶನ ಪಡೆದರು. ಬಳಿಕ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದರು. ಈ ವೇಳೆ ಮಾತನಾಡಿದ ಅವರು ದೇವಸ್ಥಾನಗಳು ನಮ್ಮ ಸಂಸ್ಕೃತಿಯಾಗಿದೆ. ದೇವಸ್ಥಾನಗಳಲ್ಲಿ ಸಂಗ್ರಹವಾಗುವ ಹಣ ದೇವಸ್ಥಾನಗಳು ಬಳಸುವಂತಾಗಬೇಕು ಎಂದರು. ಈ ಮೂಲಕ ಅದು ಜನರ ಸೇವೆಗೆ ಉಪಯೋಗವಾಗಬೇಕು ಎಂದರು.

ದೇವಸ್ಥಾನಕ್ಕೆ ಹಸಿರು ಸೀರೆಯುಟ್ಟು, ತಲೆತುಂಬಾ ಮಲ್ಲಿಗೆ ಹೂ ಮುಡಿದು ಕಂಗನಾ ರಣಾವತ್ ಆಗಮಿಸಿದ್ದರು.