Connect with us

LATEST NEWS

ಸಾರ್ವಜನಿಕವಾಗಿ ಅಯ್ಯಪ್ಪ ಭಕ್ತರ ಕ್ಷಮೆ ಕೇಳಿ ಮನೆಗೆ ಬಾ ಎಂದ ಕನಕದುರ್ಗ ಗಂಡನ ಮನೆಯವರು

ಸಾರ್ವಜನಿಕವಾಗಿ ಅಯ್ಯಪ್ಪ ಭಕ್ತರ ಕ್ಷಮೆ ಕೇಳಿ ಮನೆಗೆ ಬಾ ಎಂದ ಕನಕದುರ್ಗ ಗಂಡನ ಮನೆಯವರು

ಕೇರಳ ಜನವರಿ 23: ಜನವರಿ 2ರಂದು ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನ ಮಾಡಿ ದೇಶವ್ಯಾಪಿ ಸುದ್ದಿಯಾಗಿದ್ದ ಕನಕದುರ್ಗ(39) ಅವರನ್ನು ಕುಟುಂಬ ಸದಸ್ಯರು ಮನೆಯಿಂದ ಹೊರ ಹಾಕಿದ್ದು ಸಾರ್ವಜನಿಕವಾಗಿ ಅಯ್ಯಪ್ಪ ಭಕ್ತರ ಹಾಗೂ ಹಿಂದೂ ಗಳ ಕ್ಷಮೆ ಕೇಳಿ ಮನೆಗೆ ಬಾ ಎಂದು ಹೇಳಿದ್ದಾರೆ.

ಡಿಸೆಂಬರ್ 22 ರಂದು ತಿರುವನಂತಪುರಂನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ತೆರಳುತ್ತೇನೆ ಎಂದು ಕನಕದುರ್ಗ ಸುಳ್ಳು ಹೇಳಿ ದೇವಾಲಯವನ್ನು ಪ್ರವೇಶಿಸಿದ್ದರು. ಭಕ್ತರ ವಿರೋಧದ ಮಧ್ಯೆ ದೇವಾಲಯವನ್ನು ಪ್ರವೇಶಿಸಿದ್ದಕ್ಕೆ ಕೋಪಗೊಂಡಿರುವ ಅತ್ತೆ ಮತ್ತು ಮಾವ ಕನಕ ದುರ್ಗ ಅವರಿಗೆ ಮನೆಯ ಪ್ರವೇಶವನ್ನು ನಿರಾಕರಿಸಿ ಹೊರದಬ್ಬಿದ್ದಾರೆ.

ದೇವಾಲಯ ಪ್ರವೇಶಿದ ನಂತರ ಬಿಂದು ಮತ್ತು ಕನಕದುರ್ಗ ಮಹಿಳೆಯರು ಸುಮಾರು ಎರಡು ವಾರಗಳ ವನವಾಸ ಅನುಭವಿಸಿದ್ದರು. ಜನವರಿ 15ರಂದು ಕನಕದುರ್ಗಾ ಮನೆಗೆ ವಾಪಾಸ್‌ ಆದಾಗ ಅವರ ಅತ್ತೆಯೇ ಹಲ್ಲೆ ನಡೆಸಿದ್ದರಿಂದ ಗಾಯಗೊಂಡು, ಚಿಕಿತ್ಸೆಗಾಗಿ ಕೋಯಿಕ್ಕೋಡ್‌ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ ಮನೆಗೆ ಪ್ರವೇಶಿಸುತ್ತಿದ್ಧಂತೆ ಆಕೆಯ ಮನೆಯವರು ಅವರನ್ನು ತಡೆದು ಬಾಗಿಲು ಮುಚ್ಚಿದ್ದಾರೆ.

ಮನೆಯಿಂದ ಹೊರ ಹಾಕಿದ ಬೆನ್ನಲೇ ಕನಕದುರ್ಗ ಜಿಲ್ಲಾ ದೌರ್ಜನ್ಯ ತಡೆ ಅಧಿಕಾರಿಗೆ ದೂರು ನೀಡಿದ್ದಾರೆ. ದೂರನ್ನು ಕೋರ್ಟ್‌ ಗಮನಕ್ಕೆ ತರಲಾಗಿದ್ದು, ಆದೇಶಕ್ಕಾಗಿ ಕಾಯುತ್ತಿರುವುದು ತಿಳಿದು ಬಂದಿದೆ.

ಕನಕದುರ್ಗ ಅವರನ್ನು ಪೊಲೀಸರು ಆಸ್ಪತ್ರೆಯಿಂದ ಮನೆಗೆ ಕರೆದು ಹೋದಾಗ, ಆಕೆಯ ಪತಿ ಮನೆಯ ಬಾಗಿಲಿಗೆ ಬೀಗ ಜಡಿದು, ತಾಯಿ ಮತ್ತು ಇಬ್ಬರು ಮಕ್ಕಳೊಂದಿಗೆ ಸ್ಥಳದಿಂದ ಹೊರಟಿದ್ದಾರೆ. ಸದ್ಯ ಕನಕದುರ್ಗ ಪೊಲೀಸರ ರಕ್ಷಣೆಯಲ್ಲಿ ಸರ್ಕಾರಿ ವಾಸದಲ್ಲಿದ್ದಾರೆ.

ಸಂಪ್ರದಾಯಸ್ಥ ನಾಯರ್ ಸಮುದಾಯಕ್ಕೆ ಸೇರಿದ ಕುಟುಂಬದವರಾದ ಹಿನ್ನಲೆಯಲ್ಲಿ ಕನಕದುರ್ಗಾ ಅವರ ಶಬರಿಮಲೆ ಪ್ರವೇಶಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಇವರ ಜೊತೆ ಶಬರಿಮಲೆ ಪ್ರವೇಶಿಸಿದ ಬಿಂದು ಅವರ ಮನೆಯಲ್ಲಿ ಯಾವುದೇ ವಿರೋಧ ವ್ಯಕ್ತವಾಗಲಿಲ್ಲ ಎಂದು ತಿಳಿದು ಬಂದಿದೆ. ಬಿಂದು ಅವರ ಗಂಡ ಎಡಪಕ್ಷದ ಕಾರ್ಯಕರ್ತರಾಗಿದ್ದು, ಬಿಂದು ಕೂಡ ಎಡಪಕ್ಷದ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಯಾವುದೇ ವಿರೋಧ ವ್ಯಕ್ತವಾಗಲಿಲ್ಲ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *