LATEST NEWS
ಕಣಜ ಹುಳುಗಳಿಂದ ಮಕ್ಕಳ ರಕ್ಷಿಸಿ ತಾನೆ ಬಲಿಯಾದ ಗೃಹ ರಕ್ಷಕ ಸಿಬ್ಬಂದಿ…!!
ಮೂಲ್ಕಿ ನವೆಂಬರ್ 19:ಕಣಜ ಹುಳುಗಳ ದಾಳಿಯಿಂದ ಗಂಭಿರವಾಗಿದ್ದ ಮಕ್ಕಳನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸದ ಗೃಹ ರಕ್ಷಕ ಸಿಬ್ಬಂದಿಯೊಬ್ಬರು ಕಣಜ ಹುಳುಗಳ ದಾಳಿಗೆ ಬಲಿಯಾಗಿದ್ದಾರೆ. ಮೃತರನ್ನು ಕಟೀಲು ಬಳಿಯ ಎಕ್ಕಾರು ದೇವರಗುಡ್ಡೆ ನಿವಾಸಿ ಸಂತೋಷ್ (35) ಎಂದು ಗುರುತಿಸಲಾಗಿದ್ದು, ಇವರು ಕಂಕನಾಡಿ ಠಾಣೆಯಲ್ಲಿ ಗೃಹ ರಕ್ಷಕ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸಂತೋಷ್ ಬುಧವಾರ ಸಂಜೆ ಕಿನ್ನಿಗೋಳಿ ಸಮೀದ ಶ್ರೀರಾಮ ಮಂದಿರ ಬಳಿ ಆಟೋದಲ್ಲಿ ಹೋಗುತ್ತಿದ್ದಾಗ ಕಣಜದ ಹುಳುಗಳ ದಾಳಿಗೊಳಗಾಗಿ ಕಿನ್ನಿಗೋಳಿ ಪರಿಸರದ ಶಾಲೆಯ ಕೆಲ ಮಕ್ಕಳು ಗಂಭೀರಾವಸ್ಥೆಯಲ್ಲಿದ್ದರು. ಇದನ್ನು ಕಂಡ ಸಂತೋಷ್ ಮಕ್ಕಳನ್ನು ಕಣಜದ ಹುಳುಗಳಿಂದ ರಕ್ಷಿಸಿ ಕಿನ್ನಿಗೋಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆನ್ನಲಾಗಿದೆ.
ಮಕ್ಕಳ ರಕ್ಷಣೆಯ ಸಂದರ್ಭ ಕಣಜದ ಹುಳು ಸಂತೋಷ್ ಅವರಿಗೂ ಕಡಿದಿದ್ದು, ಆದರೆ, ಅವರು ಯಾವುದೇ ಚಿಕಿತ್ಸೆ ಪಡೆಯದೆ ಮನೆ ಕಡೆ ತೆರಳಿದ್ದರೆನ್ನಲಾಗಿದೆ. ಮನೆಯಲ್ಲಿ ರಾತ್ರಿ ಸುಮಾರು 9 ಗಂಟೆಗೆ ಕುರ್ಚಿಯಲ್ಲಿ ಕುಳಿತ್ತಿದ್ದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಆರು ಮಕ್ಕಳ ರಕ್ಷಣೆ ಮಾಡಿದ ಸಂತೋಷ್ ಅವರ ಕಾರ್ಯ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಮೃತರು ತಾಯಿ, ಪತ್ನಿ, ಮೂವರು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.