Connect with us

    LATEST NEWS

    ಟ್ರ್ಯಾಕ್ ನಲ್ಲಿ ಓಡಲ್ಲ…. ಕಂಬಳದಲ್ಲೇ ಸಾಧನೆ ಮುಂದುವರೆಸುತ್ತೇನೆ- ಶ್ರೀನಿವಾಸ ಗೌಡ

    ಟ್ರ್ಯಾಕ್ ನಲ್ಲಿ ಓಡಲ್ಲ…. ಕಂಬಳದಲ್ಲೇ ಸಾಧನೆ ಮುಂದುವರೆಸುತ್ತೇನೆ- ಶ್ರೀನಿವಾಸ ಗೌಡ

    ಮಂಗಳೂರು ಫೆಬ್ರವರಿ 17: ಕಂಬಳದ ಉಸೇನ್ ಬೋಲ್ಟ್ ಎಂದೇ ಪ್ರಸಿದ್ದಿಯಾಗಿರುವ ಶ್ರೀನಿವಾಸ ಗೌಡ ನಾನು ಟ್ರ್ಯಾಕ್ ನಲ್ಲಿ ಓಡುವುದಿಲ್ಲ ಕಂಬಳದಲ್ಲೇ ಸಾಧನೆ ಮಾಡಬೇಕೆಂದುಕೊಂಡಿದ್ದೇನೆ ಎಂದು ಹೇಳಿದ್ದು, ಕೇಂದ್ರ ಕ್ರೀಡಾ ಸಚಿವರ ಆಹ್ವಾನವನ್ನು ತಿರಸ್ಕರಿಸಿದ್ದಾರೆ.

    ಕರಾವಳಿಯಲ್ಲಿ ಈಗ ವಿಶ್ವದ ಅತೀ ವೇಗದ ಓಟಗಾರ ಉಸೇನ್ ಬೋಲ್ಟ್ ದಾಖಲೆ ಸರಿಗಟ್ಟಿದ ಕಂಬಳ ಓಟಗಾರ ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡರದ್ದೇ ಮಾತು.ಇಡೀ ದೇಶವನ್ನೇ ತನ್ನತ್ತ ತಿರುಗುವಂತೆ ಮಾಡಿರುವ ಕಂಬಳದ ಚಿರತೆ ಶ್ರೀನಿವಾಸ ಗೌಡ ಅವರು ಮತ್ತೆ ಇನ್ನೊಂದು ದಾಖಲೆ ಬರೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಪೆರ್ಮುಡದಲ್ಲಿ ನಡೆದ ಸೂರ್ಯ ಚಂದ್ರ ಕಂಬಳದಲ್ಲಿ ಕೇವಲ 15 ದಿನಗಳ ಹಿಂದಿನ ತಮ್ಮ ದಾಖಲೆಯನ್ನು ಪುಡಿಗಟ್ಟಿ ಹೊಸ ದಾಖಲೆ ನಿರ್ಮಿಸಿ, ಕಂಬಳ ಕ್ರೀಡೆಯಲ್ಲಿ ನಾನೇ ಉಸೇನ್ ಬೋಲ್ಟ್ ಎನ್ನುವುದನ್ನು ಮತ್ತೆ ತೋರಿಸಿದ್ದಾರೆ.

    ನಿನ್ನೆ ದಕ್ಷಿಣಕನ್ನಡ ಜಿಲ್ಲೆಯ ವೇಣೂರಿನಲ್ಲಿ ನಡೆದ ಎರಡು ದಿನಗಳ ಕಾಲ ನಡೆದ ಹೊನಲು ಬೆಳಕಿನ ಕಂಬಳದಲ್ಲಿ ಶ್ರೀನಿವಾಸನ ಓಟ ನೋಡಲೆಂದೇ ಕಂಬಳ ಅಭಿಮಾನಿಗಳು ಆಗಮಿಸಿದರು. ಅದಕ್ಕೆ ಕಾರಣ ಶ್ರೀನಿವಾಸ ಗೌಡ ಉಸೇನ್ ಬೋಲ್ಟ್ ವೇಗವನ್ನ ಹಿಂದಿಕ್ಕಿ ಪ್ರಸಿದ್ಧಿಯಾದ ಬಳಿಕ ಆಡುತ್ತಿರುವ ಮೊದಲನೇ ಕಂಬಳ ಇದಾಗಿತ್ತು.

    ಶ್ರೀನಿವಾಸ್ ಗೌಡ ಅವರ ಈ ರೀತಿಯ ಮಿಂಚಿನ ಓಟದಿಂದಲೇ ವಿಶ್ವದ ಗಮನವನ್ನು ತನ್ನತ್ತ ಸೆಳೆದಿದ್ದಾರೆ. ಹೀಗಾಗಿ ಕೇಂದ್ರ, ರಾಜ್ಯ ಸರ್ಕಾರಗಳೂ ಅವರ ಸಾಧನೆಯನ್ನು ಗುರುತಿಸಿದೆ. ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಶ್ರೀನಿವಾಸ ಗೌಡ ಅವರಿಗೆ ಸನ್ಮಾನ ನಡೆಸಲಿದ್ದಾರೆ. ಶ್ರೀನಿವಾಸ್ ಅವರು ಕಟ್ಟಡ ಕಾರ್ಮಿಕರಾಗಿರೋದ್ರಿಂದ ಕಾರ್ಮಿಕ ಮತ್ತು ಕ್ರೀಡಾ ಇಲಾಖೆಗಳು ಜಂಟಿಯಾಗಿ ಸನ್ಮಾನ ಏರ್ಪಡಿಸಿಕೊಂಡಿದ್ದು ಎರಡು ಇಲಾಖೆಯ ಸಚಿವರುಗಳು ಭಾಗವಹಿಸಿಲಿದ್ದಾರೆ.

    ಶ್ರೀನಿವಾಸ ಗೌಡ ಅವರು ತನಗೆ ಟ್ರ್ಯಾಕ್ ನಲ್ಲಿ ಓಡಲು ಸಾಧ್ಯವಿಲ್ಲ, ನಾನೇನಿದ್ದರೂ ಕಂಬಳ ಗದ್ದೆಯಲ್ಲೇ ಕೋಣಗಳ ಜೊತೆ ಓಡುವವನು. ಹೀಗಾಗಿ ಮುಂದೆಯೂ ಕಂಬಳದಲ್ಲೇ ಸಾಧನೆ ಮಾಡಬೇಕೆಂದುಕೊಂಡಿದ್ದೇನೆ ಎಂದು ಹೇಳಿದ್ದು, ಕೇಂದ್ರ ಕ್ರೀಡಾ ಸಚಿವರ ಭಾರತೀಯ ಕ್ರೀಡಾ ಪ್ರಾಧಿಕಾರದ ಕೋಚ್ ಗಳ ಸಾಮರ್ಥ್ಯ ಪರೀಕ್ಷೆ ಬಗ್ಗೆ ಆಸಕ್ತಿ ಹೊಂದಿಲ್ಲ ಎಂದು ಹೇಳಿದರು.

    Share Information
    Advertisement
    Click to comment

    You must be logged in to post a comment Login

    Leave a Reply