Connect with us

FILM

ಪ್ರಭಾಸ್ ನಟನೆಯ ‘ಪ್ರಾಜೆಕ್ಟ್‌ K’ ಸಿನಿಮಾದಲ್ಲಿ ಕಮಲ್ ಹಾಸನ್: ಹೇಗಿರಲಿದೆ ಉಳಗನಾಯಗನ್ ಪಾತ್ರ?

ಡಾರ್ಲಿಂಗ್ ಪ್ರಭಾಸ್, ಬಿಗ್ ವಿ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ದಿಶಾ ಪಠಾಣಿ ನಟಿಸುತ್ತಿರುವ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಪ್ರಾಜೆಕ್ಟ್ K. ಮುಂದಿನ ವರ್ಷದ ಸಂಕ್ರಾಂತಿ ಹಬ್ಬಕ್ಕೆ ತೆರೆಗೆ ಬರಲಿರುವ ಈ ಚಿತ್ರದಿಂದ ಕ್ರೇಜಿ ಅಪ್ ಡೇಟ್ ವೊಂದು ಹೊರಬಿದಿದ್ದೆ. ಎಲ್ಲರ ನಿರೀಕ್ಷೆಯಂತೆ ಉಳಗನಾಯಗನ್ ಕಮಲ್ ಹಾಸನ್ ಪ್ರಾಜೆಕ್ಟ್ K ಭಾಗವಾಗಿದ್ದಾರೆ.

ಸ್ಪೆಷಲ್ ವಿಡಿಯೋ ಝಲಕ್ ಮೂಲಕ ಕಮಲ್ ಎಂಟ್ರಿ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ನೀಡಿದೆ. ಕಳೆದೊಂದು ತಿಂಗಳಿನಿಂದ ಪ್ರಾಜೆಕ್ಟ್ K ಸಿನಿಮಾದಲ್ಲಿ ಕಮಲ್ ಹಾಸನ್ ಪ್ರಭಾಸ್ ಎದುರು ವಿಲನ್ ಆಗಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಅದರಂತೆ ಈಗ ಚಿತ್ರತಂಡ ಕಮಲ್ ಎಂಟ್ರಿ ಬಗ್ಗೆ ಘೋಷಿಸಿದೆ. ಆದರೆ ಪ್ರಭಾಸ್ ಗೆ ಉಳಗನಾಯಗನ್ ಖಳನಾಯಕ ಅನ್ನೋದರ ಬಗ್ಗೆ ಗುಟ್ಟು ಬಿಟ್ಟು ಕೊಟ್ಟಿಲ್ಲ. ಪ್ರಮುಖ ಪಾತ್ರವೊಂದರಲ್ಲಿ ಕಮಲ್ ಹಾಸನ್ ನಟಿಸಲಿದ್ದಾರೆ ಎಂದಷ್ಟೇ ತಿಳಿಸಿದೆ.

ಪ್ರಾಜೆಕ್ಟ್ K ಸಿನಿಮಾದಲ್ಲಿ ನಟಿಸುತ್ತಿರುವುದರ ಬಗ್ಗೆ ಕಮಲ್ ಹಾಸನ್ ಮಾತನಾಡಿ, ನಾನು 50 ವರ್ಷದ ಹಿಂದೆ ನೃತ್ಯ ಸಹಾಯಕ ಮತ್ತು ಸಹಾಯಕ ನಿರ್ದೇಶಕನಾಗಿದ್ದಾಗ ನಿರ್ಮಾಣ ವಲಯದಲ್ಲಿ ಅಶ್ವಿನಿ ದತ್ ಹೆಸರು ದೊಡ್ಡ ಮಟ್ಟದಲ್ಲಿ ಖ್ಯಾತಿಗೊಳಿಸಿತ್ತು. ಐವತ್ತು ವರ್ಷದ ನಂತರ ನಾವು ಒಂದಾಗುತ್ತಿದ್ದೇವೆ. ಇಂದಿನ ಪೀಳಿಗೆಯ ಅದ್ಭುತ ನಿರ್ದೇಶಕ ನಾಗ್ ಅಶ್ವಿನ್, ನನ್ನ ಸಹನಟರಾದ ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಬ್ ಜಿ ಜೊತೆ ನಟಿಸುತ್ತಿರುವುದು ಖುಷಿಕೊಟ್ಟಿದೆ. ಪ್ರಾಜೆಕ್ಟ್ K ಸಿನಿಮಾಗಾಗಿ ನಾನು ಕುತೂಹಲದಿಂದ ಕಾಯುತ್ತಿದ್ದೇನೆ ಎಂದರು.

ನಿರ್ಮಾಪಕ ಅಶ್ವಿನಿ ದತ್, ಸುದೀರ್ಘವಾದ ವೃತ್ತಿ ಜೀವನದಲ್ಲಿ ‌ನಿಮ್ಮೊಟ್ಟಿಗೆ ಕೆಲಸ ಮಾಡುವುದು ನನ್ನ ಕನಸಾಗಿತ್ತು. ಪ್ರಾಜೆಕ್ಟ್ ಕೆ ಮೂಲಕ ಅದು ನನಸಾಗಿದೆ. ಕಮಲ್ ಹಾಸನ್-ಅಮಿತಾಬ್ ಜಿ ಅವರೊಟ್ಟಿಗಿನ ಕೆಲಸ ಮಾಡುವ ಅವಕಾಶ ದೊರೆತಿರುವುದು ನನಗೆ ಆಶೀರ್ವಾದ ಎಂದರು.

ನಿರ್ದೇಶಕ ನಾಗ್ ಅಶ್ವಿನ್, ಕಮಲ್ ಸರ್ ಜೊತೆ ಕೆಲಸ ಮಾಡಲು ಉತ್ಸುಕರಾಗಿದ್ದೇನೆ. ನಮ್ಮ ಜಗತ್ತನ್ನು ಪೂರ್ಣಗೊಳಿಸಲು ಅವರು ಒಪ್ಪಿಕೊಂಡಿರುವುದು ಸಂತಸ ಎಂದರು. ವೈಯಂತಿ ಮೂವೀಸ್ ಬ್ಯಾನರ್‌ನಲ್ಲಿ ಅದ್ಧೂರಿಯಾಗಿ ಮೂಡಿ ಬರುತ್ತಿರುವ ಮಲ್ಟಿ ಸ್ಟಾರ್ ಪ್ರಾಜೆಕ್ಟ್ ಕೆ ಸಿನಿಮಾಗೆ ಮಹಾನಟಿ ಸಿನಿಮಾ ಖ್ಯಾತಿಯ ನಾಗ್ ಅಶ್ವಿನ್ ಆಕ್ಷನ್ ಕಟ್ ಹೇಳಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *