Connect with us

UDUPI

ಕಲ್ಯಾಣ್ ಜುವೆಲ್ಲರಿ ಪ್ರೀಮಿಯಂ ಮಳಿಗೆಯಲ್ಲಿ ಕಳ್ಳತನ

ಕಲ್ಯಾಣ್ ಜುವೆಲ್ಲರಿ ಪ್ರೀಮಿಯಂ ಮಳಿಗೆಯಲ್ಲಿ ಕಳ್ಳತನ

ಉಡುಪಿ ಅಕ್ಟೋಬರ್ 16: ಕಲ್ಯಾಣ್ ಪ್ರೀಮಿಯಂ ಮಳಿಗೆಗೆ ಕಳ್ಳರು ನುಗ್ಗಿ ನಗದು ದೋಚಿದ ಘಟನೆ ಕಳೆದ ರಾತ್ರಿ ಉಡುಪಿಯ ಹೆಬ್ರಿಯಲ್ಲಿ ನಡೆದಿದೆ. ಹೆಬ್ರಿಯ ಸಂತೆ ಮಾರ್ಕೆಟ್ ಬಳಿ ಇರುವ ಕಲ್ಯಾಣ್ ಜ್ಯುವೆಲರಿ ಗ್ರಾಹಕರ ಪ್ರೀಮಿಯಂ ಮಳಿಗೆಗೆ ಕಳೆದ ರಾತ್ರಿ ನುಗ್ಗಿದ ಕಳ್ಳರು ನುಗ್ಗಿದ್ದಾರೆ.

ಮಳಿಗೆಯಲ್ಲಿದ್ದ ಗ್ರಾಹಕರ 27 ಸಾವಿರ ರೂಪಾಯಿ ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಕಳೆದ ರಾತ್ರಿ ಮಳೆಯ ನಡುವೆ ಶೆಟರ್ ಬ್ರೇಕ್ ಮಾಡುವ ಮೂಲಕ ಕಳ್ಳರು ಮಳಿಗೆಗೆ ನುಗ್ಗಿದ್ದಾರೆ. ಇಂದು ಮುಂಜಾನೆ ಕಳ್ಳರ ಈ ಕೃತ್ಯ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಭೇಟಿ ನೀಡಿದ ಹೆಬ್ರಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Facebook Comments

comments