Connect with us

KARNATAKA

ಆಜಾನ್ ವಿರುದ್ಧ ಮಂತ್ರಪಠಣೆ ಅಭಿಯಾನ ಶುರುಮಾಡಿದ ಕಾಳಿ ಸ್ವಾಮೀಜಿ

ಹಾಸನ, ಎಪ್ರಿಲ್ 05: ಮುಸ್ಲಿಮರ ಆಜಾನ್‌ ವಿರುದ್ಧ ಮಂತ್ರ ಪಠಣೆ ಅಭಿಯಾನಕ್ಕೆ ಚಾಲನೆ ಆರಂಭವಾಗಿದ್ದು,ಹಾಸನದ ಅರಸೀಕೆರೆ ಕಾಳಿಕಾಂಬ ದೇಗುಲದಲ್ಲಿ ಕಾಳಿ ಮಂತ್ರವನ್ನು ಕಾಳಿ ಸ್ವಾಮೀಜಿ ಪಠಿಸಿದ್ದಾರೆ.

ಅಧಿಕೃತ ಮಸೀದಿಗಳಲ್ಲಿ ಮಾತ್ರ ಆಜಾನ್‌ ಕೂಗಲು ಅನುಮತಿ ಇದೆ. ಆದರೆ ಎಲ್ಲ ಮಸೀದಿಗಳಲ್ಲಿ ಆಜಾನ್‌ ಕೂಗಲಾಗುತ್ತದೆ. ಅಷ್ಟೇ ಅಲ್ಲದೇ ಆಜಾನ್‌ ಕೂಗಲು‌ ಸ್ಪಷ್ಟವಾದ ಕೋರ್ಟ್‌ ನಿಯಮವಿದೆ. ಆದರೆ ಈ ನಿಯಮವನ್ನು ಉಲ್ಲಂಘಿಸಿ ಆಜಾನ್‌ ಕೂಗಲಾಗುತ್ತದೆ.  ಈ ರೀತಿ ಆಜಾನ್‌ ಕೂಗುವುದನ್ನು ಕೂಡಲೇ ನಿಲ್ಲಿಸಬೇಕು.

ಇಲ್ಲದೇ ಇದ್ದರೆ ಹಿಂದೂ ದೇವಾಲಯಗಳಲ್ಲೂ ಭಜನೆ, ಮಂತ್ರವನ್ನು ಪಠಿಸಲಾಗುವುದು ಎಂದು ಹಿಂದೂ ಸಂಘಟನೆಗಳ ಮುಖಂಡರು ಸೋಮವಾರ ಎಚ್ಚರಿಕೆ ನೀಡಿದ್ದರು. ಈ ಎಚ್ಚರಿಕೆ ಬೆನ್ನಲ್ಲೇ ಇಂದು ಮುಂಜಾನೆ 5:30ಕ್ಕೆ ಧ್ವನಿವರ್ಧಕದ ಮೂಲಕ ಕಾಳಿ ಸ್ವಾಮೀಜಿ ಮಂತ್ರಪಠಣ ಮಾಡಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

Advertisement
Click to comment

You must be logged in to post a comment Login

Leave a Reply