KARNATAKA
ಮುರಿದು ಬಿದ್ದ ಕಾಳಿ ನದಿ ಸೇತುವೆ: ಕಾರವಾರ-ಗೋವಾ ಸಂಚಾರ ತಾತ್ಕಾಲಿಕ ಬಂದ್
ಕಾರವಾರ, ಆಗಸ್ಟ್ 07: ಕಾಳಿ ನದಿ ಸೇತುವೆಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆಯು ಕುಸಿದು ಬಿದ್ದಿದ್ದು, ಕಾರವಾರ-ಗೋವಾ ಸಂಚಾರ ತಾತ್ಕಾಲಿಕ ಬಂದ್ ಆಗಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ರಾ.ಹೆ. 66ರಲ್ಲಿ 40 ವರ್ಷದ ಹಿಂದೆ ಕಾಳಿ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಸೇತುವೆಯು ಕುಸಿದು ಬಿದ್ದು, ತಮಿಳುನಾಡು ಮೂಲದ ಲಾರಿಯೊಂದು ನದಿಗೆ ಬಿದ್ದಿದೆ. ಘಟನೆಯಲ್ಲಿ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
#KarwarBridgeCollapase Lorry driver Murugan who fell into the river along with his lorry is being rescued by local fishermen and police on Wednesday wee hours in #Karwar old Kali river bridge #WATCH @NewIndianXpress @XpressBengaluru @KannadaPrabha @ns_subhash pic.twitter.com/L2BJ4R1M7s
— Amit Upadhye (@AmitSUpadhye) August 7, 2024
ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಸೇತುವೆ ಕುಸಿದಿದ್ದು, ಗೋವಾದಿಂದ ಹುಬ್ಬಳ್ಳಿಗೆ ಇದೇ ಮಾರ್ಗವಾಗಿ ತೆರಳುತಿದ್ದ ಖಾಲಿ ಲಾರಿಯು ಸೇತುವೆಯಿಂದ ಕೆಳಗೆ ಬಿದ್ದಿದೆ. ಬಳಿಕ ಈ ಚಾಲಕ ಲಾರಿಯ ಕ್ಯಾಬಿನ್ ಮೇಲೆ ನಿಂತು ಕೂಗಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯ ಮೀನುಗಾರರು ಕರಾವಳಿ ಕಾವಲು ಪಡೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಕರಾವಳಿ ಕಾವಲುಪಡೆ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರ ಸಹಾಯದೊಂದಿಗೆ ಚಾಲಕನನ್ನು ರಕ್ಷಿಸಲಾಗಿದೆ.
ಕಾಳಿ ನದಿಯ ಸೇತುವೆಯು ಮೂರು ಕಡೆಗಳಲ್ಲಿ ಕುಸಿದಿದೆ. ಕಾರವಾರದಿಂದ ಗೋವಾ ಕಡೆಗೆ ತೆರಳುವ ಮೊದಲ ಭಾಗ, ನಂತರ ಮಧ್ಯ ಭಾಗ, ಅದರ ನಂತರ ಗೋವಾದಿಂದ ಕಾರವಾರದ ಕಡೆ ಬರುವ ಪ್ರಾರಂಭದಲ್ಲಿ ಸೇತುವೆಯ ಮೇಲ್ಛಾವಣಿ ಹಾಸು ಕುಸಿದಿದೆ.