Connect with us

KARNATAKA

ಕಲಬುರಗಿ ಪೊಲೀಸರ ಮಹತ್ವದ ಕಾರ್ಯಾಚರಣೆ, ಜಿಮ್ಸ್ ಆಸ್ಪತ್ರೆಯಿಂದ ಅಪಹರಣವಾದ ಮಗುವನ್ನು36 ಗಂಟೆಯಲ್ಲೇ ತಾಯಿ ಮಡಿಲಿಗೆ ಸೇರಿದ ಖಾಕಿ ಪಡೆ..!

ಕಲಬುರಗಿ: ಕಲಬುರಗಿ ಪೊಲೀಸರು ಮಹತ್ವದ ಕಾರ್ಯಾಚರಣೆಯೊಂದನ್ನು ನಡೆಸಿ ನಗರದ ಜಿಮ್ಸ್ ಆಸ್ಪತ್ರೆಯಿಂದ ಸೋಮವಾರ ಅಪಹರಣವಾಗಿದ್ದ ನವಜಾತ ಗಂಡು ಶಿಶುವನ್ನು 36 ಗಂಟೆಗಳಲ್ಲಿ ಪತ್ತೆ ಮಾಡಿ ತಾಯಿ ಮಡಿಲಿಗೆ ಸೇರಿಸಿದ್ದಾರೆ. ಜೊತೆಗೆ ಮಗುವನ್ನು ಕದ್ದ ಮೂವರು ಕಳ್ಳಿಯರನ್ನು ಪೊಲೀಸರು ಹಿಡಿದು ಲಾಕಪ್ಪಿಗೆ ತಳ್ಳಿದ್ದಾರೆ. ಪೊಲೀಸರ ಈ ಕಾರ್ಯಾಚರಣೆಗೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ.


ಸೋಮವಾರ ಮಧ್ಯಾಹ್ನ ಜಿಮ್ಸ್ ನವಜಾತ ಶಿಶು ವಿಭಾಗದಿಂದ ಚಿತ್ತಾಪುರ ತಾಲೂಕಿನ ರಾಮಕೃಷ್ಣ ಸಗರ ಹಾಗೂ ಕಸ್ತೂರಿ ದಂಪತಿಗಳ ಎರಡನೇ ಮಗುವಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ನರ್ಸ್ ಗಳ ಪೋಷಾಕಿನಲ್ಲಿ ಆಗಮಿಸಿದ್ದ ಇಬ್ಬರು ಮಹಿಳೆಯರು, ಮಗುವಿಗೆ ತುರ್ತು ಚಿಕಿತ್ಸೆ ಕೊಡುವುದಾಗಿ ಹೇಳಿ ತಾಯಿಯಿಂದ ಮಗುವನ್ನು ಪಡೆದು ಪರಾರಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಜಿಮ್ಸಿಗೆ ಭೇಟಿ ನೀಡಿ ತಾಯಿಗೆ ಸಾಂತ್ವಾನ ಹೇಳಿ, ಆದಷ್ಟು ಬೇಗ ಮಗುವನ್ನು ಮಡಿಲಿಗೆ ಹಾಕಿಸುವುದಾಗಿ ಭರವಸೆ ನೀಡಿದ್ದರು. ನಾಲ್ಕು ತಂಡ ರಚನೆ ಮಗು ಅಪಹರಣವಾಗಿರುವ ಹಿನ್ನೆಲೆಯಲ್ಲಿ ಒಟ್ಟು ನಾಲ್ಕು ತಂಡಗಳನ್ನು ರಚನೆ ಮಾಡಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಢಗೆ ಹಾಗೂ ಎಸಿಬಿ ಬೂತೇಗೌಡ ನೇತೃತ್ವದಲ್ಲಿ ಭರ್ಜರಿ ಕಾರ್ಯಾಚರಣೆಗೆ ಇಳಿಯಲಾಗಿತ್ತು. ಆದರೆ ಸಾರ್ವಜನಿಕರು ನೀಡಿದ ಮಾಹಿತಿಯನ್ನಾಧರಿಸಿ ಕೈರುನ್ ಎನ್ನುವ ಮಹಿಳೆಯ ಮನೆಯನ್ನು ಶೋಧಿಸಿ ಮಗುವನ್ನು ವಶಪಡಿಸಿಕೊಂಡಿರುವ ಪೊಲೀಸರು ಮಗುವನ್ನು ತಾಯಿ ಕಸ್ತೂರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಮ್ಮಲ ಮರುಗುತ್ತಿದ್ದ ತಾಯಿ ಮಗುವಿನ ಮುಖ ನೋಡಿ ಸಂತಸ ದಿಂದ ಮುದ್ದಾಡಿದ್ದು ನೋಡಿ ಪೊಲೀಸ್ ಇಲಾಖೆ ಕೂಡ ಖುಷಿಯಿಂದ ನಿಟ್ಟಿಸಿರು ಬಿಟ್ಟಿದೆ.


ಮಗುವನ್ನು ಅಪಹರಣ ಮಾಡಿದ್ದ ಮೂವರು ಮಹಿಳೆಯರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಮತ್ತೋರ್ ಮುಖ್ಯ ಆರೋಪಿ ಕೈರುನ್ ಪರಾರಿಯಾಗಿದ್ದು ಆಕೆಯ ಪತ್ತೆಗೆ ಜಾಲ ಬೀಸಲಾಗಿದೆ. ಬಂಧಿತರನ್ನು ಎಂ ಎಸ್ ಕೆ ಮಿಲ್ ಪ್ರದೇಶದ ಉಮೆರಾ, ಫಾತಿಮಾ ಹಾಗೂ ನಶರಿನ್ ಎಂದು ಗುರುತಿಸಲಾಗಿದೆ. ಈ ಮೂವರು ಮಗುವನ್ನು ಅಪಹರಣ ಮಾಡಿ ಕೈ ರೂಂಗೆ 50,000 ಗೆ ಮಾರಾಟ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಗು ಅಪಹರಣಗೊಂಡು 36 ಗಂಟೆಯಲ್ಲಿ ತಾಯಿಯ ಮಡಿಲು ಸೇರಿದ ಹಿನ್ನೆಲೆಯಲ್ಲಿ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಪ್ರಿಯಾಂಕ ಖರ್ಗೆ ಮತ್ತು ನಗರ ಪೊಲೀಸ್ ಆಯುಕ್ತ ಡಾಕ್ಟರ್ ಶರಣಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.

Share Information
Continue Reading
Advertisement
1 Comment

1 Comment

    Leave a Reply

    Your email address will not be published. Required fields are marked *