FILM
ಮಾಲ್ಡೀವ್ಸ್ ನಲ್ಲಿ ಬಾಲಿವುಡ್ ನಟಿ ಕಿಯಾರಾ ಅಡ್ವಾನಿ ಹಾಟ್ ಅವತಾರ

ಮುಂಬೈ: ಮತ್ತೆ ಬಾಲಿವುಡ್ ನಟಿಯರ ಮಾಲ್ಡೀವ್ಸ್ ಪ್ರವಾಸ ಆರಂಭವಾಗಿದ್ದು, ನಟಿಯರು ಮಾಲ್ಡೀವ್ಸ್ ಕಡಲ ತೀರದಲ್ಲಿ ತೆಗೆದ ಹಾಟ್ ಹಾಟ್ ಪೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದೀಗ ಬಾಲಿವುಡ್ ನಟಿ ಕಿಯಾರಾ ಅಡ್ವಾನಿ ಮಾಲ್ಡೀವ್ಸ್ ಕಡಲ ತೀರದಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿರುವ ಕಿಯಾರಾ ಅಡ್ವಾನಿ ವೀಡಿಯೋದಲ್ಲಿ ಕಿಯಾರಾ ಬಿಳಿ ಬಣ್ಣದ ಬಿಕಿನಿ ಹಾಗೂ ಸ್ಟೈಲಿಶ್ ಸನ್ ಗ್ಲಾಸ್ ತೊಟ್ಟು ಸಖತ್ ಹಾಟ್ ಆಗಿ ಫೋಟೋಗಳಿಗೆ ಪೋಸ್ ನೀಡಿದ್ದಾರೆ.
ಇತ್ತೀಚೆಗಷ್ಟೇ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದ ಕಿಯಾರಾ ಅಷ್ಟಾಗಿ ಯಾವುದೇ ಫೋಟೋಗಳನ್ನು ಎಲ್ಲೂ ರಿವೀಲ್ ಮಾಡಿರಲಿಲ್ಲ. ಆದರೆ ಹಲವು ದಿನಗಳ ಗ್ಯಾಪ್ ಬಳಿಕ ಇದೀಗ ಕಿಯಾರಾ ಮಾಲ್ಡೀವ್ಸ್‌ನಲ್ಲಿ ತಾವು ಎಂಜಾಯ್ ಮಾಡಿರುವ ಕೆಲವು ಫೋಟೋ ಹಾಗೂ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ