Connect with us

FILM

ಸೋಶಿಯಲ್ ಮಿಡಿಯಾದ ನಗುವಿನ ಮುಖದ ಬಾಲಕಿ 16ನೇ ವಯಸ್ಸಿಗೆ ಆತ್ಮಹತ್ಯೆಗೆ ಶರಣು

ಅಮೇರಿಕಾ : ತನ್ನ ನಗುವಿನಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಫೇಮಸ್ ಆಗಿದ್ದ ಬಾಲಕಿ ತನ್ನ 16ನೇ ವಯಸ್ಸಿನವಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೈಲಿಯಾ ಪೋಸಿ ಎಂಬ ಬಾಲಕಿ ತನ್ನ ನಗುವಿನ ಸಣ್ಣ ತುಣುಕಿನಿಂದ ಇಡೀ ವಿಶ್ವದಲ್ಲಿ ಪ್ರಸಿದ್ದಿ ಪಡೆದಿದ್ದಳು. ಮೊಬೈಲ್ ನಲ್ಲಿ ಆಕೆಯ ಎಮೋಜಿ ಬಳಸದೇ ಇರುವುವರು ಬಹಳ ಕಮ್ಮಿ.


ಆದರೆ ಇದೀಗ ತನ್ನ 16ನೇ ವಯಸ್ಸಿನಲ್ಲಿಯೇ ಕೈಲಿಯಾ ಪೋಸಿ ಕೊನೆಯುಸಿರೆಳೆದಿದ್ದಾಳೆ. ತಮ್ಮ ಮಗಳು ಕೈಲಿಯಾ ಪೋಸಿ ವಾಶಿಂಗ್ಟನ್ ನಲ್ಲಿ ಕೊನೆಯುಸಿರೆಳೆದಿರುವುದಾಗಿ ಕುಟುಂಬಸ್ಥರು ಖಚಿತ ಪಡಿಸಿದ್ದಾರೆ. ಫೇಸ್ ಬುಕ್ ನಲ್ಲಿ ಪೋಸಿ ತಾಯಿ ಪೋಸ್ಟ್ ಹಾಕುವ ಮೂಲಕ ಖಚಿತ ಪಡಿಸಿದ್ದಾರೆ. ‘ನನ್ನ ಮಗಳು ಹೀಗೆ ಮಾಡಿಕೊಳ್ಳುತ್ತಾಳೆ ಎಂದು ಕನಸಲ್ಲೂ ಎಣಿಸಿರಲಿಲ್ಲ. ನನಗೆ ಮಾತೇ ಬರುತ್ತಿಲ್ಲ. ನನ್ನ ಇಡೀ ಕುಟುಂಬದ ದುಃಖದಲ್ಲಿದೆ. ಮೈ ಬೇಬಿ ಫಾರೆವರ್’ ಎಂದು ಪೋಸಿ ತಾಯಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.


ಅಮೆರಿಕಾದ ಟಿವಿ ಸರಣಿ ‘ಟೊಡ್ಲರ್ ಆಂಡ್ ತೈರಾಸ್’ ಶೋನಲ್ಲಿ ಪೋಸಿ ಭಾಗಿಯಾಗಿದ್ದಳು. ಚಿಕ್ಕಂದಿನಿಂದಲೇ ಜಿಐಎಫ್ ನ ನಗುವ ಹುಡುಗಿ ಎಂದೇ ಎಲ್ಲರಿಗೂ ಪರಿಚಯವಾಗಿದ್ದ ಈ ಹುಡುಗಿ ಲೆಕ್ಕವಿಲ್ಲದಷ್ಟು ಪ್ರಶಸ್ತಿಗಳು ಸಂದಿದ್ದವು. ವ್ಯಂಗ್ಯ ಚಿತ್ರಕಾರಳಾಗಿಯೂ ಪೋಸಿ ಹೆಸರು ಮಾಡಿದ್ದಳು.

ಇದೀಗ ಕೆನಡಾದ ಗಡಿಯಿಂದ ಕೆಲವೇ ಮೈಲುಗಳಷ್ಟು ದೂರದಲ್ಲಿರುವ ವಾಷಿಂಗ್ಟನ್ ರಾಜ್ಯದ ಬೀರ್ಚ್ ಬೇ ಸ್ಟೇಟ್ ಪಾರ್ಕ್ ನಲ್ಲಿ ಪೋಸಿ ದೇಹವು ಪತ್ತೆಯಾಗಿದೆ ಎಂದು ಹಲವಾರು ಪ್ರಕಟಣೆಗಳು ವರದಿ ಮಾಡಿವೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *