Connect with us

LATEST NEWS

ಪ್ರಧಾನಿ ಮೋದಿ ಸ್ವಚ್ಚ ಹೀ ಸೇವಾ ಯೋಜನೆಗೆ ಕದ್ರಿ ಗೋಪಾಲನಾಥ್ ಸಾಥ್

ಪ್ರಧಾನಿ ಮೋದಿ ಸ್ವಚ್ಚ ಹೀ ಸೇವಾ ಯೋಜನೆಗೆ ಕದ್ರಿ ಗೋಪಾಲನಾಥ್ ಸಾಥ್

ಮಂಗಳೂರು ಸೆಪ್ಟೆಂಬರ್ 27: ಖ್ಯಾತ ಸ್ಯಾಕ್ಸೊಫೋನ್ ವಾದಕ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಕದ್ರಿ ಗೋಪಾಲನಾಥ್ ಅವರು ನಗರದ ಹೊರವಲಯದ ಬೆಂಗ್ರೆಯ ಹಿರಿಯ ಪ್ರಾಥಮಿಕ ಶಾಲೆಗೆ ಎರಡು ಶೌಚಾಲಯಗಳನ್ನು ನಿರ್ಮಿಸಿ ಕೊಡುವ ಮೂಲಕ ಸ್ವಚ್ಛ ಭಾರತ್ ಸ್ವಚ್ಚ ಹೀ ಸೇವಾ ಯೋಜನೆಗೆ ಕೈಜೋಡಿಸಿದ್ದಾರೆ.

ಇಂದು ಶಾಲೆಯ ಆವರಣದಲ್ಲಿ ಶೌಚಾಲಯಕ್ಕೆ ಶಿಲಾನ್ಯಾಸ ನೇರವೆರಿಸುವ ಮೂಲಕ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಚಭಾರತ್ ಯೋಜನೆಗೆ ಕೈಜೋಡಿಸಿದ್ದಾರೆ. ಎರಡು ಶೌಚಾಲಯಗಳನ್ನು ಸುಮಾರು 80 ಸಾವಿರ ರೂಪಾಯಿಯ ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ.

ಮೋದಿ ಅವರಿಂದ ಕದ್ರಿ ಗೋಪಾಲನಾಥ್ ಗೆ ಪತ್ರ.

ಪ್ರಧಾನಿ ನರೇಂದ್ರ ಮೋದಿಯವರಿಂದ ಚೆನ್ನೈನಲ್ಲಿ ತಾವು ನೆಲೆಸಿರುವ ನಿವಾಸಕ್ಕೆ ಪತ್ರವೊಂದು ಬಂದಿದ್ದು, ಸ್ವಚ್ಛ ಭಾರತಕ್ಕೆ ಕೊಡುಗೆ ನೀಡುವಂತೆ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಕದ್ರಿ ಗೋಪಾಲ ನಾಥ್ ಕಸಬಾ ಬೆಂಗ್ರೆಯ ಸರಕಾರಿ ಶಾಲೆ ಸ್ಯಾಂಡ್ ಪಿಟ್ ನಲ್ಲಿ ಎರಡು ಶೌಚಾಲಯ ನಿರ್ಮಿಸಲು ನಿರ್ಧರಿಸಿದ್ದಾರೆ.

ಬೆಂಗ್ರೆಯ ಸರಕಾರಿ ಶಾಲೆಯಲ್ಲಿ 60 ಮಕ್ಕಳು ಕಲಿಯುತ್ತಿದ್ದು, ಶೌಚಾಲಯವೇ ಇಲ್ಲ. ವಿಶಿಷ್ಟ ಚೇತನ ಮಕ್ಕಳಿಗಾಗಿ ಇರುವ ಒಂದು ಶೌಚಾಲಯವನ್ನೇ ಎಲ್ಲರೂ ಬಳಸುತ್ತಿದ್ದಾರೆ. ಶೌಚಕ್ಕಾಗಿ ಕ್ಯೂ ನಿಲ್ಲುವ ಸ್ಥಿತಿ ಇಲ್ಲಿನ ಮಕ್ಕಳದ್ದಾಗಿದ್ದು ಆದ್ದರಿಂದ ಮೊದಲು ಇಂತಹ ಮೂಲ ಸಮಸ್ಯೆಗಳಿಗೆ ಸ್ಪಂದಿಸಲು ಮುಂದಾಗಿದ್ದೇನೆ ಎಂದವರು ಹೇಳಿದರು.

ಇದೀಗ ಸ್ವಚ್ಛ ಭಾರತದ ಪರಿಕಲ್ಪನೆಯಡಿ ನನಗೆ ನನ್ನ ಊರಿನ ಶಾಲೆಯೊಂದರ ಉನ್ನತೀಕರಣಕ್ಕೆ ಮುಂದಾಗಲು ಅವಕಾಶ ದೊರಕಿದೆ ಎಂದು ಹೇಳಿದರು. ಈ ಹಿನ್ನಲೆಯಲ್ಲಿ ಮಂಗಳೂರಿಗನೇ ಆಗಿರುವ ತಾನು ನಗರದ ತೀರಾ ಹಿಂದುಳಿದ ಶಾಲೆಗೆ ಶೌಚಾಲಯವನ್ನು ಒದಗಿಸುವ ಮೂಲಕ ಸ್ವಚ್ಛ ಭಾರತ ಯೋಜನೆಗೆ ತನ್ನಿಂದಾದ ನೆರವು ನೀಡಲು ಮುಂದಾಗಿರುವುದಾಗಿ ಹೇಳಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *